Friday, September 20, 2024
Homeರಾಜ್ಯಹೊಸ ಜಾಹೀರಾತು ನೀತಿ ಕೈ ಬಿಡಿ, 646 ಕೋಟಿ ಬಾಕಿ ವಸೂಲಿ ಮಾಡಿ : ಸಿಎಂ

ಹೊಸ ಜಾಹೀರಾತು ನೀತಿ ಕೈ ಬಿಡಿ, 646 ಕೋಟಿ ಬಾಕಿ ವಸೂಲಿ ಮಾಡಿ : ಸಿಎಂ

ಬೆಂಗಳೂರು,ಆ.3– ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಜಾಹೀರಾತು ನೀತಿಯನ್ನು ಈ ಕೂಡಲೇ ವಾಪಸ್‌‍ ಪಡೆಯಬೇಕು ಎಂದು ಬಿಜೆಪಿ ಮುಖಂಡ ಎನ್‌. ಆರ್‌. ರಮೇಶ್‌ ಆಗ್ರಹಿಸಿದ್ದಾರೆ.ಅಧಿಕತ ಜಾಹೀರಾತು ಏಜೆನ್ಸಿಗಳಿಂದ ಬಾಕಿ ಬರಬೇಕಿರುವ ಸುಮಾರು 646 ಕೋಟಿ ರೂ. ಗಳಿಗೂ ಅಧಿಕ ಮೊತ್ತದ ಜಾಹೀರಾತು ಶುಲ್ಕ ವಸೂಲಾತಿಗೆ ಕ್ರಮ ವಹಿಸುವ ಬದಲು ಉದ್ಯಾನನಗರಿಯ ಸೌದರ್ಯವನ್ನು ಹಾಳುಗೆಡಹುವ ಮತ್ತು ನಿರಂತರ ಅಪಘಾತಗಳಿಗೆ ಕಾರಣವಾಗುವ ಹೊಸ ಜಾಹೀರಾತು ನೀತಿ – 2024 ಯನ್ನು ಜಾರಿಗೆ ತಂದಿರುವ ಸರ್ಕಾರದ ಕಾನೂನುಬಾಹಿರ ನಡೆಯನ್ನು ಕೂಡಲೇ ಹಿಂಪಡೆಯಬೇಕೆಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಬಿಬಿಎಂಪಿ ಆಡಳಿತಾಧಿಕಾರಿಗಳು ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಪ್ರಸ್ತುತ ಬಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಅಳತೆಗಳ ಜಾಹೀರಾತು ಫಲಕಗಳನ್ನು ಅಳವಡಿಸುವ ಗುತ್ತಿಗೆಯನ್ನು ಪಡೆದಿದ್ದ ಒಟ್ಟು 110 ಅಧಿಕತ ಜಾಹೀರಾತು ಏಜೆನ್ಸಿಗಳು ಮತ್ತು ಒಟ್ಟು 2,621 ಅನಧಿಕತ ಜಾಹೀರಾತು ಏಜೆನ್ಸಿಗಳು ಇವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಜಾಹೀರಾತು ಫಲಕಗಳನ್ನು ನಿಷೇಧಿಸಿ ಉಚ್ಛ ನ್ಯಾಯಾಲಯವು 2018 ರಲ್ಲಿ ಮಧ್ಯಂತರ ಆದೇಶವನ್ನು ನೀಡಿರುತ್ತದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ 2016 ರಲ್ಲಿ ರಾಜ್ಯ ಉಚ್ಛ ನ್ಯಾಯಾ ಲಯದಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದ ಪಾಲಿಕೆಯ ಅಂದಿನ ಆಯುಕ್ತ ರಾಗಿದ್ದ ಮಂಜುನಾಥ್‌ ಪ್ರಸಾದ್‌ ಅವರು ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 2,621 ಅನಧಿಕತ ಜಾಹೀರಾತು ಏಜೆನ್ಸಿಗಳಿದ್ದು, ಒಟ್ಟು . 331,92,20,410/- ಗಳಷ್ಟು ಜಾಹೀರಾತು ಶುಲ್ಕ ಅಧಿಕತ ಏಜೆನ್ಸಿಗಳಿಂದ ಬಾಕಿ ಬರಬೇಕಿರುತ್ತದೆ ಮತ್ತು ಈ ಸಂಬಂಧ ಒಟ್ಟು 5,507 ನೋಟೀಸ್‌‍ಗಳನ್ನು ನೀಡಲಾಗಿದೆ ಎಂಬ ವಿಷಯವನ್ನು ತಮ ಪ್ರಮಾಣ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದ್ದರು.

ಅದಕ್ಕೂ ಮುಂಚೆ ಪಾಲಿಕೆ ಆಯುಕ್ತರಾಗಿದ್ದ ಜಿ. ಕುಮಾರ್‌ ನಾಯಕ್‌ ಅವರು ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 6,119 ಅನಧಿಕತ ಜಾಹೀರಾತು ಫಲಕಗಳು ಇವೆ ಎಂಬುದನ್ನು 2015 ರಂದು ಲೋಕಾಯುಕ್ತಕ್ಕೆ ತಮ ಪ್ರಮಾಣ ಪತ್ರ ಸಲ್ಲಿಸಿದ್ದರು.

ಈ ರೀತಿ, ಬೆಂಗಳೂರು ಮಹಾನಗರದ ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಿದ್ದ ಏಜೆನ್ಸಿಗಳು 2018 ರ ಫೆಬ್ರುವರಿ ವರೆಗೆ ಹಾಗೂ 2017 ರಿಂದ ಈವರೆಗೆ ಪಿಪಿಪಿ ಮಾದರಿಯಲ್ಲಿ ನಿರ್ಮಿಸಿರುವ ಜಾಹೀರಾತು ಫಲಕಗಳಿಗೆ ಸಂಬಂಧಿಸಿದಂತೆ – ಬಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಒಟ್ಟು .

646,17,73,682/ಗಳಷ್ಟು ಬಹತ್‌ ಮೊತ್ತವು ಈ ಎರಡು ಪ್ರಾಕಾರದ ಜಾಹೀರಾತು ಶುಲ್ಕಗಳು ಸದರಿ ಜಾಹೀರಾತು ಏಜೆನ್ಸಿಗಳಿಂದ ಬಾಕಿ ಬರಬೇಕಿರುತ್ತದೆ. ಈ ಪೈಕಿ ಕೆಂಪರಾಜ್‌ ಎಂಬ ಒಬ್ಬರೇ ಸುಮಾರು 80 ಕೋಟಿ ರೂ. ಗಳಿಗೂ ಹೆಚ್ಚು ಜಾಹೀರಾತು ಶುಲ್ಕವನ್ನು ಬಾಕಿ ಉಳಿಸಿಕೊಂಡಿರುತ್ತಾರೆ.

ಇಷ್ಟು ಮೊತ್ತ ಬಾಕಿ ಇದ್ದರೂ ಬೆಂಗಳೂರು ಮಹಾನಗರದ ಮುಖ್ಯ ರಸ್ತೆಗಳಲ್ಲಿ ಮತ್ತು ವಾಣಿಜ್ಯ ಸ್ಥಳಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಲು ಅನುಮತಿ ನೀಡುವ ನಿರ್ಣಯ ವನ್ನು ಕೈಗೊಳ್ಳುವ ಅಧಿಕಾರವನ್ನು ನೀಡಿರುವ ಹೊಸ ಜಾಹೀರಾತು ನೀತಿ – 2024 ದಿಂದ ಬಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಕವಡೆ ಕಾಸಿನಷ್ಟು ಮಾತ್ರವೇ ಆದಾಯ ಬರುವುದಿಲ್ಲ.

ರಸ್ತೆ ಬದಿಯಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸುವುದರಿಂದ ಪ್ರತೀ ನಿತ್ಯ ಹತ್ತಾರು ಅಪಘಾತಗಳು ಸಂಭವಿಸುವ ಅವಕಾಶಗಳೇ ಅಧಿಕವಾಗಿರುತ್ತದೆ ಎಂಬ ಬೆಂಗಳೂರು ಸಂಚಾರಿ ಪೋಲೀಸರ ಅಭಿಪ್ರಾಯವನ್ನೂ ಸಹ ರಾಜ್ಯ ಸರ್ಕಾರ ಮತ್ತು ಬಹತ್‌ ಬೆಂಗಳೂರು ಮಹಾನಗರ ಪಾಲಿಕೆ ಕಡೆಗಣಿಸಿರುತ್ತದೆ ಎಂದು ಅವರು ಪತ್ರದಲ್ಲಿ ಆರೋಪಿಸಿದ್ದಾರೆ.

RELATED ARTICLES

Latest News