Tuesday, September 17, 2024
Homeರಾಜ್ಯಅಧಿವೇಶನ ಆರಂಭಕ್ಕೂ ಮುನ್ನವೇ ಹಿರಿಯ ಅಧಿಕಾರಿಗಳಿಗೆ ಸಿಎಂ ಚಾಟಿ

ಅಧಿವೇಶನ ಆರಂಭಕ್ಕೂ ಮುನ್ನವೇ ಹಿರಿಯ ಅಧಿಕಾರಿಗಳಿಗೆ ಸಿಎಂ ಚಾಟಿ

ಬೆಂಗಳೂರು,ಜು.14- ಸರ್ಕಾರದ ಅಭಿವೃದ್ಧಿ ಕಾರ್ಯಚಟುವಟಿಕೆಗಳ ಕುರಿತು ನಿಖರವಾದ, ಕರಾರುವಕ್ಕಾದ ಮಾಹಿತಿಗಳನ್ನು ತತ್ಕ್ಷಣ ಒದಗಿಸಲು ಪೂರಕ ವಾತಾವರಣವನ್ನು ಸಜ್ಜುಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಗೃಹಕಚೇರಿ ಕೃಷ್ಣಾದಲ್ಲಿಂದು ಸರ್ಕಾರದ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್ ಸೇರಿದಂತೆ ವಿವಿಧ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಆಯುಕ್ತರು ಹಾಗೂ ನಿರ್ದೇಶಕರೊಂದಿಗೆ ಮಹತ್ವದ ಸಮಾಲೋಚನೆ ನಡೆಸಿದರು.

ಈ ಬಾರಿಯ ಅಧಿವೇಶನದಲ್ಲಿ ಸಾಕಷ್ಟು ವಿಚಾರಗಳು ಚರ್ಚೆಯಾಗುವ ಸಾಧ್ಯತೆ ಇದೆ. ಅದರಲ್ಲೂ ಕೆಲವು ವಿವಾದಗಳನ್ನು ಪ್ರಸ್ತಾಪಿಸಿ ವಿರೋಧ ಪಕ್ಷಗಳು ಟೀಕೆ ಮಾಡಬಹುದು. ಯಾವುದೇ ವಿಚಾರವಾದರೂ ಅದರ ಪೂರ್ವಪರ ಹಾಗೂ ವರ್ತಮಾನದ ಸಮಗ್ರ ಮಾಹಿತಿಗಳು ಸಂಬಂಧಪಟ್ಟ ಸಚಿವರಿಗೆ ತತಕ್ಷಣಕ್ಕೆ ಲಭ್ಯವಾಗುವಂತೆ ಹಿರಿಯ ಅಧಿಕಾರಿಗಳು ಕಾಳಜಿ ವಹಿಸಬೇಕು.

ಈ ಹಿಂದೆ ನಡೆದಿರುವ ಚರ್ಚೆಗಳು, ಆದೇಶಗಳು ಎಲ್ಲವನ್ನೂ ಮುಕ್ತವಾಗಿ ಪಾರದರ್ಶಕವಾಗಿ ಸಚಿವರ ಗಮನಕ್ಕೆ ತರಬೇಕು ಎಂದು ಸೂಚಿಸಲಾಗಿದೆ. ರಾಜ್ಯದ ಹಣಕಾಸು ಸ್ಥಿತಿ, ಗ್ಯಾರಂಟಿ ಯೋಜನೆಗಳು, ಕಾರ್ಯಕ್ರಮಗಳ ಪ್ರಗತಿ, ಬಜೆಟ್ ಘೋಷಿತ ಯೋಜನೆಗಳ ಕಾರ್ಯಾನುಷ್ಟಾನ ಆದೇಶ ಸೇರಿದಂತೆ ಪ್ರತಿಯೊಂದು ವಿಚಾರವನ್ನು ಅಧಿವೇಶನದಲ್ಲಿ ಸಚಿವರಿಗೆ ಒದಗಿಸಬೇಕು.

ತಪ್ಪು ಮಾಹಿತಿ ನೀಡಿ ಸದನದಲ್ಲಿ ಮುಜುಗರದ ವಾತಾವರಣ ಸೃಷ್ಟಿಯಾದರೆ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಕುಡಿಯುವ ನೀರಿನ ಸಮಸ್ಯೆ, ಕಲುಷಿತ ನೀರು ಸೇರಿದಂತೆ ಗಂಭೀರವಾದ ಸಮಸ್ಯೆಗಳ ಬಗ್ಗೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

RELATED ARTICLES

Latest News