Friday, July 11, 2025
Homeರಾಜಕೀಯ | Politics5 ವರ್ಷ ಸಿಎಂ ಕುರ್ಚಿ ಸ್ವಂತ ಎಂದು ಘೋಷಿಸಿಕೊಂಡ ಸಿದ್ದರಾಮಯ್ಯ, ಡಿಕೆಶಿ ಮುಂದಿನ ನಡೆ ಏನು..?

5 ವರ್ಷ ಸಿಎಂ ಕುರ್ಚಿ ಸ್ವಂತ ಎಂದು ಘೋಷಿಸಿಕೊಂಡ ಸಿದ್ದರಾಮಯ್ಯ, ಡಿಕೆಶಿ ಮುಂದಿನ ನಡೆ ಏನು..?

Siddaramaiah said that he will be the CM for 5 years, what is DK's next move?

ಬೆಂಗಳೂರು,ಜು.11– ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಹೆಚ್ಚಿನ ಶಾಸಕರ ಬೆಂಬಲ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರು ವುದಕ್ಕೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್‌ ತಮ ನಿಗೂಢ ನಡೆ ಯನ್ನು ಕಾಯ್ದುಕೊಂಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಕುರಿತಾದ ಪ್ರಶ್ನೆಗಳಿಗೆ ಅನ್ಯಮನಸ್ಕರರಾಗಿ ಕೆಲವೊಮೆ ವಿಚಿತ್ರ ನಗುವಿನೊಂದಿಗೆ ಪ್ರತಿಕ್ರಿಯಿಸಿರುವುದು ನಾನಾ ರೀತಿಯ ಗೂಡಾರ್ಥಗಳನ್ನು ಹುಟ್ಟುಹಾಕಿದೆ.

ಹೈಕಮಾಂಡ್‌ ನಾಯಕರ ಜೊತೆ ಚರ್ಚೆ ಮಾಡಿದ್ದೇವೆ. ಕಾರ್ಯಕರ್ತರಿಗೆ ಸ್ಥಾನಮಾನ ನೀಡುವ ಬಗ್ಗೆ ಸಮಾಲೋಚನೆ ಮಾಡಿದ್ದೇವೆ. ಬೆಂಗಳೂರಿನಲ್ಲಿ ನಡೆದಿರುವ ಸಭೆಗಳಲ್ಲಿ ಶಾಸಕರು ತಮ ಸಲಹೆಗಳನ್ನು ನೀಡಿದ್ದಾರೆ. ಪಕ್ಷ ಸಂಘಟನೆಯಲ್ಲಿ ಕೆಲಸ ಮಾಡಿದವರಿಗೆ ಹಾಗೂ ರಾಜಕೀಯವಾಗಿ ಆಶ್ವಾಸನೆ ಪಡೆದುಕೊಂಡವರಿಗೆ ಅವಕಾಶ ನೀಡಬೇಕು ಎಂಬುದು ನನ್ನ ಅಭಿಪ್ರಾಯ.

ಆ ಪ್ರಸ್ತಾವನೆಗಳ ಬಗ್ಗೆ ದೆಹಲಿಯಲ್ಲಿ ಚರ್ಚೆಯಾಗಿವೆ. ಪಟ್ಟಿ ಅಂತಿಮ ಹಂತದಲ್ಲಿದ್ದು, ಮತ್ತೊಂದು ಸುತ್ತಿನ ಚರ್ಚೆಯ ಬಳಿಕ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.
ಡಿ.ಕೆ.ಶಿವಕುಮಾರ್‌ ಅವರಿಗೆ ಕೆಲವೇ ಶಾಸಕರ ಬೆಂಬಲ ಇದೆ ಎಂದು ಮುಖ್ಯಮಂತ್ರಿ ಹೇಳಿರುವುದನ್ನು ಮಾಧ್ಯಮಗಳಲ್ಲಿ ನಾನು ಗಮನಿಸಿದ್ದೇನೆ. ಪಕ್ಷದ ಅಧ್ಯಕ್ಷನಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಪಕ್ಷದ ವರಿಷ್ಠರು ಹೇಳಿರುವುದನ್ನು ಮುಖ್ಯಮಂತ್ರಿಯವರು ಈಗಾಗಲೇ ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ ಎಂದರು.

ನನ್ನ ಮುಂದೆ ನಿಗಮ ಮಂಡಳಿಗಳ ನೇಮಕಾತಿಯ ವಿಚಾರಗಳು ಪ್ರಮುಖವಾಗಿವೆ. 7 ಸಾವಿರ ಅರ್ಜಿಗಳು ಬಂದಿದ್ದವು. ಅವುಗಳನ್ನು 350ಕ್ಕೆ ಇಳಿಸಬೇಕಿತ್ತು. ನಾನು ಅದರಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದೆ. ಸಮಯ ಇರಲಿಲ್ಲ ಎಂದು ಹೇಳಿದರು.ಮಾಧ್ಯಮಗಳ ಎಲ್ಲಾ ಪ್ರಶ್ನೆಗಳಿಗೂ ಮುಖ್ಯಮಂತ್ರಿಯವರೇ ಉತ್ತರ ಕೊಟ್ಟಿದ್ದಾರೆ. ಅದರ ನಂತರ ಪದೇಪದೇ ನಾವು ಹೇಳಿಕೆ ನೀಡುವುದು ಸೂಕ್ತ ಅಲ್ಲ. ಪ್ರಶ್ನೆ ಕೇಳುವುದೂ ಕೂಡ ಸರಿಯಲ್ಲ ಎಂದರು.

ಅಧಿಕಾರ ಹಂಚಿಕೆಗೆ ಸಂಬಂಧಪಟ್ಟಂತೆ ನಮ ಮುಂದೆ ಬೇರೆ ಆಯ್ಕೆಗಳಿಲ್ಲ ಎಂದು ಈ ಮೊದಲು ನೀಡಿದ್ದ ಹೇಳಿಕೆ ಬಗ್ಗೆ ಪ್ರಶ್ನೆ ಎದುರಾದಾಗ ನಗುತ್ತಲೇ ಪ್ರತಿಕ್ರಿಯಿಸಿದ ಡಿಕೆಶಿ, ನನ್ನ ವಿಷಯದಲ್ಲಿ ಅಷ್ಟೊಂದು ಆತಂಕ, ಕಾಳಜಿ ಏಕೆ?, ನನಗೆ ಯಾವುದೇ ಗಾಬರಿ ಇಲ್ಲ ಎಂದರು.ಬಹಳಷ್ಟು ಮಂದಿಗೆ ಏನೇನೋ ಆಸೆಗಳಿರುತ್ತವೆ. ನಾನು ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಅದರ ಅಗತ್ಯವೂ ಇಲ್ಲ. ಮಾತನಾಡುವವರೇ ಎಲ್ಲದಕ್ಕೂ ಉತ್ತರ ನೀಡುತ್ತಿದ್ದಾರೆ. ಪ್ರಶ್ನೆಗಳನ್ನು ಅವರೇ ಕೇಳುತ್ತಿದ್ದಾರೆ. ಸದ್ಯಕ್ಕೆ ನಾನು ಯಾವುದಕ್ಕೂ ಉತ್ತರ ನೀಡುವುದಿಲ್ಲ ಎಂದರು.

ದೆಹಲಿ ಭೇಟಿ ಫಲಪ್ರದ :
ದೆಹಲಿಯಲ್ಲಿ ಜಲಶಕ್ತಿ ಸಚಿವ ಸಿ.ಆರ್‌.ಪಾಟೀಲ್‌ರನ್ನು ಭೇಟಿ ಮಾಡಿ ಕೃಷ್ಣ ನ್ಯಾಯಾಧೀಕರಣದ ತೀರ್ಪಿನ ಅಧಿಸೂಚನೆಯನ್ನು ಮನವಿ ಮಾಡಿದ್ದೇವೆ. ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳ ಆಕ್ಷೇಪವಿಲ್ಲ. ಇದನ್ನು ಜಾರಿ ಮಾಡಿ ಎಂದಿದ್ದೇವೆ. ಮೇಕೆದಾಟು ಯೋಜನೆಗೆ ಸಂಬಂಧಪಟ್ಟಂತೆ ಮೌಲ್ಯಮಾಪನ ವರದಿ (ಅಪ್ರೈಜಲ್‌ ರಿಪೋರ್ಟ್‌) ಬಾಕಿ ಇದೆ.

ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ಸಿಗುತ್ತದೆಯೋ, ಇಲ್ಲವೋ ಅದು ಪ್ರಶ್ನೆ. ಮೊದಲು ವರದಿಯನ್ನು ಪರವಾದರೂ ಸರಿ, ವಿರೋಧವಾಗಿಯಾದರೂ ಸರಿ ಕೊಡಿ ಎಂದು ಕೇಳಿರುವುದಾಗಿ ಹೇಳಿದರು.ಕಳಸ ಬಂಡೂರಿ ಅಣೆಕಟ್ಟಿಗೆ ಸಂಬಂಧಪಟ್ಟಂತೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಕೂಡ ಚರ್ಚೆ ಮಾಡಿದ್ದಾರೆ. ರಾಜಕೀಯವಾಗಿ ಏನೇ ಚರ್ಚೆ ಇದ್ದರೂ ನಮಗೆ ತಾಂತ್ರಿಕ ಅವಕಾಶಗಳಿವೆ. ಗೋವಾ ಸರ್ಕಾರ ಕರ್ನಾಟಕಕ್ಕೆ ಶೋಕಾಸ್‌‍ ನೋಟಿಸ್‌‍ ನೀಡುವ ಅಧಿಕಾರ ಇಲ್ಲ. ಹೀಗಾಗಿ ನಾವು ಸುಪ್ರೀಂಕೋರ್ಟ್‌ನಿಂದ ಪ್ರಕರಣ ಹಿಂಪಡೆದು ಕಾಮಗಾರಿಯನ್ನು ಆರಂಭಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದರು.

ಎತ್ತಿನಹೊಳೆ ಯೋಜನೆಗೆ ಸಂಬಂಧಪಟ್ಟಂತೆಯೂ ಕೇಂದ್ರ ಸಚಿವರ ಹೊಸ ಯೋಜನೆಗಳಿಗೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಎತ್ತಿನಹೊಳೆ ಯೋಜನೆಗೆ ವಿರೋಧ ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಯೋಜನೆಗಳಾದರೂ ವಿರೋಧ ಸಹಜ, ದೊಡ್ಡಬಳ್ಳಾಪುರದ ಜಾಗವನ್ನೂ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ನೀರಿನ ಹರಿವನ್ನು ಆಧರಿಸಿ ಯೋಜನೆ ಮುಂದುವರೆಸುವುದಾಗಿ ಮುಂದಿನ ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.

RELATED ARTICLES

Latest News