ಬೆಂಗಳೂರು,ನ.5- ಮುಖ್ಯಮಂತ್ರಿಗಳ ಉಪಹಾರಕೂಟದ ಬಳಿಕ ಅಕಾರ ಹಂಚಿಕೆಯ ಚರ್ಚೆ ತಣ್ಣಗಾಗಬಹುದೆಂಬ ನಿರೀಕ್ಷೆಗಳು ಹುಸಿಯಾಗಿದ್ದು, ಇನ್ನುಷ್ಟು ಮಂದಿ ಮತ್ತೆ ವಿವಾದವನ್ನು ಕೆಣಕಿದ್ದಾರೆ.ಖುದ್ದು ಡಿ.ಕೆ.ಶಿವಕುಮಾರ್ ಅವರೇ ತಾವು ಮುಖ್ಯಮಂತ್ರಿಯಾಗಲು ಆತುರ ಮಾಡುವುದಿಲ್ಲ. ಹೈಕಮಾಂಡ್ ಮೇಲೆ ನಂಬಿಕೆ ಇಟ್ಟಿದ್ದೇವೆ. ಸೂಕ್ತ ಕಾಲದಲ್ಲಿ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೆ ನಾನು ಕಾಯುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಅಧಿಕಾರ ಹಂಚಿಕೆಯ ಬೇಗುದಿಯನ್ನು ಜೀವಂತವಾಗಿಟ್ಟಿದ್ದಾರೆ.
ನಿನ್ನೆ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಸಚಿವರೊಂದಿಗೆ ಉಪಹಾರಕೂಟ ನಡೆಸಿದರು. ಅದರಲ್ಲಿ ಭಾಗವಹಿಸಿದ್ದ ಡಿ.ಕೆ.ಶಿವಕುಮಾರ್ ನಗುನಗುತ್ತಲೇ ಎಲ್ಲರೊಂದಿಗೆ ಸೌಹಾರ್ದಯುತವಾಗಿ ಚರ್ಚೆ ಮಾಡಿದರು. ಉಪಹಾರಕೂಟದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಶಾಸಕರು, ಸಚಿವರಾದಿಯಾಗಿ ಯಾರೂ ಕೂಡ ಅಕಾರ ಹಂಚಿಕೆ ಸೇರಿದಂತೆ ವಿವಾದಿತ ವಿಚಾರಗಳ ಬಗ್ಗೆ ಮಾತನಾಡಬಾರದು ಎಂದು ಕಟ್ಟಪ್ಪಣೆ ಮಾಡಿದರು.
ಹಿಂಗಾರು ಚೇತರಿಕೆ : ರಾಜ್ಯದಲ್ಲಿ 10 ದಿನ ಮಳೆ ಸಾಧ್ಯತೆ
ಆ ಬಳಿಕ ಸಂಜೆ ವೇಳೆಗೆ ಕುಮಾರಕೃಪದಲ್ಲಿ ಮತ್ತೆ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿಯೂ ಡಿ.ಕೆ.ಶಿವಕುಮಾರ್, ಶಾಸಕರಿಗೆ, ಸಚಿವರಿಗೆ ಎಚ್ಚರಿಕೆಯನ್ನು ಪುನರುಚ್ಚಸಿದ್ದರು. ಅಕಾರ ಹಂಚಿಕೆ ವಿಚಾರದಲ್ಲಿ ತಮ್ಮ ಪರವಾಗಿ ಮಾತನಾಡುವವರಿಗೂ ನೋಟಿಸ್ ನೀಡುತ್ತೇನೆ ಎಂದು ಗುಡುಗಿದ್ದ ಡಿ.ಕೆ.ಶಿವಕುಮಾರ್ ಅದರ ಬೆನ್ನಲ್ಲೇ ತಮಗೆ ಹೈಕಮಾಂಡ್‍ಗೆ ನಂಬಿಕೆ ಇದೆ ಎಂದು ಹೇಳಿ ಗೊಂದಲ ಮೂಡಿಸಿದ್ದಾರೆ.
ಅತ್ತ ಮದ್ದೂರಿನಲ್ಲಿ ಶಾಸಕ ಕದಲೂರು ಉದಯ್ ಅವರು ಹಗಲು-ರಾತ್ರಿ ಡಿ.ಕೆ.ಶಿವಕುಮಾರ್ ಕೆಲಸ ಮಾಡುತ್ತಿದ್ದಾರೆ. ಅವರು ಪಕ್ಷಕ್ಕಾಗಿ ಶ್ರಮಪಡುತ್ತಿರುವುದನ್ನು ನಾವು ಕಣ್ಣಾರೆ ನೋಡಿದ್ದೇವೆ. ಪ್ರತಿದಿನ ಅವರು ಮಲಗುವುದು ರಾತ್ರಿ 2 ಗಂಟೆ ಆಗುತ್ತದೆ. ಅವರಿಂದಾಗಿ ಕಾಂಗ್ರೆಸ್ ಅಕಾರಕ್ಕೆ ಬಂದಿದೆ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು. ಹೈಕಮಾಂಡ್ ಇದನ್ನು ಪರಿಗಣಿಸುತ್ತದೆ ಎಂಬ ನಂಬಿಕೆ ಇದೆ. ಮುಂದಿನ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.
ತಮ್ಮ ಪರವಾಗಿ ಮಾತನಾಡಿದ ರಾಮನಗರ ಶಾಸಕ ಇಕ್ಬಾಲ್ ಅವರಿಗೂ ನೋಟಿಸ್ ನೀಡುತ್ತೇನೆ ಎಂದು ಹೇಳಿದ ಬೆನ್ನಲ್ಲೇ ಕದಲೂರು ಉದಯ್ ಅವರ ಹೇಳಿಕೆ ಕಾಂಗ್ರೆಸ್‍ನಲ್ಲಿ ಹಿಡಿತ ತಪ್ಪಿದ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಹೈಕಮಾಂಡ್‍ನ ಪ್ರತಿನಿಗಳು ಬೆಂಗಳೂರಿಗೆ ಬಂದು ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಹಂತದಲ್ಲಿ ತಾವೇ ಅಕಾರದಲ್ಲಿ ಮುಂದುವರೆಯುವುದಾಗಿ ಹೇಳಿಕೆ ನೀಡಿದರು. ಬಳಿಕ ಪರಿಸ್ಥಿತಿ ಸಮದೂಗಿಸಲು ಸಚಿವರ ಜೊತೆ ಉಪಹಾರಕೂಟ ನಡೆಸಿದರು. ಅದರಲ್ಲಿ ಭಾಗವಹಿಸಿದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಅಕಾರ ಹಂಚಿಕೆಯ ಬಗ್ಗೆ ಮಾತನಾಡಬಾರದು ಎಂಬ ಸೂಚನೆ ನೀಡಲಾಗಿದೆ. ಇನ್ನು ಮುಂದೆ ನಾವು ಮಾತಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಆದರೆ ಕದಲೂರು ಉದಯ್ ಹಾಗೂ ಇನ್ನು ಹಲವರು ಇದೇ ರೀತಿಯ ಚರ್ಚೆಯಲ್ಲಿ ಪಾಲ್ಗೊಂಡು ವಿವಾದವನ್ನು ಕೆಣಕುತ್ತಿರುವುದು ಕಂಡುಬಂದಿದೆ.