ಹ್ಯಾಂಗ್‍ಝೌ, ಸೆ.27-ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‍ನ ಭಾರತದ ಮಹಿಳೆಯರ ಶೂಟರ್‍ಗಳು ಇಂದು ವಿವಿಧ ವಿಭಾಗದ ಸ್ಪರ್ಧೆಯಲ್ಲಿ 1 ಚಿನ್ನ 1ಬೆಳ್ಳಿ ಪದಕ ಗೆದ್ದಿದ್ದಾರೆ.25 ಮೀ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ತ್ರಿಮೂರ್ತಿಗಳಾದ ಮನು ಭಾಕರ್, ಇಶಾ ಸಿಂಗ್ ಮತ್ತು ರಿದಮ್ ಸಾಂಗ್ವಾನ್ ಅವರು ಚಿನ್ನದ ಪದಕವನ್ನು ಜಯಿಸಿದರು.
ಮನು, ಈಶಾ ಮತ್ತು ರಿದಮ್ ಒಟ್ಟು 1759 ಪಾಂಯಿಂಟ್ ದಾಖಲಿಸಿ ಭಾರತದೇಶಕ್ಕೆ ನಾಲ್ಕನೇ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ.ಚೀನಿಯರು 1756 ಅಂಕಗಳೊಂದಿಗೆ ಬೆಳ್ಳಿ ಪದಕವನ್ನು ಪಡೆದರು, ಆದರೆ ದಕ್ಷಿಣ ಕೊರಿಯಾದ ಶೂಟರ್‍ಗಳು ಒಟ್ಟು 1742 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಪಾಕ್ ಐಎಸ್‍ಐ ಕೈವಾಡ ಬಯಲು
ಇನ್ನು 50 ಮೀಟರ್ ರೈಫಲ್ 3 ಪೋಸಿಷನ್ ಸ್ಪರ್ಧೆಯಲ್ಲಿ ಮತ್ತೊಂದು ಮಹಿಳಾ ತಂಡ ಬೆಳ್ಳಿ ಪದಕ ಗೆದ್ದಿದೆ ಆಶಿ ಚೌಕ್ಸೆ, ಮಾನಿನಿ ಕೌಶಿಕ್ ಮತ್ತು ಸಿಫ್ಟ್ ಕೌರ್ ಸಮ್ರಾ ಅವರ ಮೂವರು ಒಟ್ಟು 1764 ಪಾಯಿಂಟ್‍ಗಳನ್ನು ಪಡೆದು ಎರಡನೇ ಸ್ಥಾನ ಪಡೆದರು.ಆತಿಥೇಯ ಚೀನಾ 1773 ಸ್ಕೋರ್‍ನೊಂದಿಗೆ ಚಿನ್ನ ಗೆದ್ದರೆ, ದಕ್ಷಿಣ ಕೊರಿಯಾ 1756 ಸ್ಕೋರ್‍ನೊಂದಿಗೆ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು.
ಮಹಿಳೆಯರ 50 ಮೀ ಶೂಟಿಂಗ್‍ನಲ್ಲಿ ಸ್ಪರ್ಧೆಯಲ್ಲಿ ಭಾರತ ತಂಡಕ್ಕೆ ಬೆಳ್ಳಿ
ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‍ನ ಭಾರತದ ಮಹಿಳೆಯರ ಶೂಟರ್‍ಗಳು ತಂಡ 50 ಮೀಟರ್ ರೈಫಲ್ 3 ಪೋಸಿಷನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಆಶಿ ಚೌಕ್ಸೆ, ಮಾನಿನಿ ಕೌಶಿಕ್ ಮತ್ತು ಸಿಫ್ಟ್ ಕೌರ್ ಸಮ್ರಾ ಅವರ ಮೂವರು ಒಟ್ಟು 1764 ಪಾಯಿಂಟ್‍ಗಳನ್ನು ಪಡೆದು ಎರಡನೇ ಸ್ಥಾನ ಪಡೆದರು. ಆತಿಥೇಯ ಚೀನಾ 1773 ಸ್ಕೋರ್‍ನೊಂದಿಗೆ ಚಿನ್ನ ಗೆದ್ದರೆ, ದಕ್ಷಿಣ ಕೊರಿಯಾ 1756 ಸ್ಕೋರ್‍ನೊಂದಿಗೆ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು.