Friday, July 4, 2025
Homeರಾಜ್ಯಸಿಗಂದೂರು : ತಾಂತ್ರಿಕ ಸಮಸ್ಯೆಯಿಂದ ನದಿ ಮಧ್ಯ ನಿಂತ ಪ್ರಯಾಣಿಕರಿದ್ದ ಲಾಂಚ್‌, ಕೆಲಕಾಲ ಆತಂಕ

ಸಿಗಂದೂರು : ತಾಂತ್ರಿಕ ಸಮಸ್ಯೆಯಿಂದ ನದಿ ಮಧ್ಯ ನಿಂತ ಪ್ರಯಾಣಿಕರಿದ್ದ ಲಾಂಚ್‌, ಕೆಲಕಾಲ ಆತಂಕ

Sigandur: Launch carrying passengers stuck in the middle of the river

ಶಿವಮೊಗ್ಗ,ಜು.4- ಶರಾವತಿ ಹಿನ್ನೀರಿನ ಪ್ರದೇಶದ ಹೊಳೆಬಾಗಿಲಿನಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಲಾಂಚ್‌ ತಾಂತ್ರಿಕ ಸಮಸ್ಯೆ ಉಂಟಾಗಿ ನದಿ ಮಧ್ಯ ನಿಂತು ಕೆಲ ಕಾಲ ಆತಂಕದ ಸೃಷ್ಟಿಸಿತು.

ಲಾಂಚಿನಲ್ಲಿ ನೂರಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಹಾಗೂ ವಾಹನಗಳನ್ನುಇದ್ದವು ಪಕ್ಕದ ದಡಕ್ಕೆ ಹೋಗುವಾಗ ಏಕಾಏಕಿ ನಿಂತಿದೆ.ನದಿ ನೀರಿನ ಮಧ್ಯ ನಿಂತಾಗ ಇದರಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿ ಮುಂದೇನು ಎಂಬ ಭಯ ಶುರುವಾಗಿತ್ತು.

ಬಳಿಕ ಸೇತುವೆ ಕಾಮಗಾರಿಗೆ ಬಂದಿದ್ದ ಲಾಂಚ್‌ ಮೂಲಕ ಹಗ್ಗ ಕಟ್ಟಿ ಕೆಟ್ಟು ನಿಂತಿದ್ದ ಲಾಂಚ್‌‍ನ್ನು ದಡಕ್ಕೆ ತರಲಾಯಿತು. ಮತ್ತೊಂದು ಲಾಂಚ್‌ ಹೋಗಲು ಸ್ವಲ್ಪ ತಡವಾಗುತ್ತಿದ್ದರು ಸಹ ಕೆಟ್ಟ ನಿಂತಿದ್ದ ಲಾಂಚ್‌ ಪಕ್ಕದಲ್ಲೇ ನಿರ್ಮಾಣಗೊಳ್ಳುತ್ತಿರುವ ಸಿಗಂದೂರು ಸೇತುವೆಯ ಪಿಲ್ಲರ್‌ಗೆ ಡಿಕ್ಕಿಯಾಗುವ ಸಾಧ್ಯತೆ ಇತ್ತು ಎನ್ನಲಾಗಿದೆ. ಆದರೂ ಸಿಬ್ಭಂಧಿ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿದೆ.

RELATED ARTICLES

Latest News