Monday, July 28, 2025
Homeಜಿಲ್ಲಾ ಸುದ್ದಿಗಳು | District Newsಚಿತ್ರದುರ್ಗ | Chitradurgaಹೆಚ್‌ಐವಿ ಪೀಡಿತ ತಮ್ಮನನ್ನ ಕೊಲೆ ಮಾಡಿದ ಅಕ್ಕ, ಸಾಥ್ ಕೊಟ್ಟ ಗಂಡ

ಹೆಚ್‌ಐವಿ ಪೀಡಿತ ತಮ್ಮನನ್ನ ಕೊಲೆ ಮಾಡಿದ ಅಕ್ಕ, ಸಾಥ್ ಕೊಟ್ಟ ಗಂಡ

Sister killed HIV-infected brother, husband helped her

ಚಿತ್ರದುರ್ಗ,ಜು.28-ಹೆಚ್‌ಐವಿ ಪೀಡಿತನಾಗಿದ್ದ ತಮ್ಮನಿಂದ ಮರ್ಯಾದೆ ಹೋಗುತ್ತದೆ ಎಂದು ಅಕ್ಕ ತನ್ನ ಗಂಡನ ಜೊತೆ ಸೇರಿ ಕೊಲೆ ಮಾಡಿರುವ ಘಟನೆ ಹೊಳಲ್ಕೆರೆ ತಾಲೂಕಿನ ದುಮಿ ಗ್ರಾಮದಲ್ಲಿ ನಡೆದಿದೆ.

ಮಲ್ಲಿಕಾರ್ಜುನ್‌ (23) ಕೊಲೆಯಾದ ಸಹೋದರನಾಗಿದ್ದು ಘಟನೆಗೆ ಸಂಭಂಧಿಸಿದಂತೆ ಅಕ್ಕ ನಿಶಾ ಹಾಗೂ ಆಕೆಯ ಪತಿ ಮಂಜುನಾಥ್‌ ನನ್ನು ಪೊಲೀಸರು ಬಂಧಿಸಿದ್ದಾರೆ.ಮಲ್ಲಿಕಾರ್ಜುನ್‌ ಬೆಂಗಳೂರಿನಲ್ಲಿ ಗಾರ್ಮೆಂರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದರು ಕಳೆದ ಜುಲೈ 23ರಂದು ತನ್ನ ಸ್ವಗ್ರಾಮವಾದ ದುಮ್ಮಿಗೆ ಕಾರಿನಲ್ಲಿ ಸ್ನೇಹಿತರೊಂದಿಗೆ ಬರುತ್ತಿದ್ದಾಗ ಹಿರಿಯೂರು ತಾಲ್ಲೂಕಿನ ಐಮಂಗಲ ಬಳಿ ಅಪಘಾತ ಸಂಭವಿಸಿ ಕಾಲು ಮುರಿವಾಗಿ ದಾವಣಗೆರೆ ಆಸ್ಪತ್ರೆಗೆ ದಾಖಲಾಗಿದ್ದ.

ಅಪಘಾತಗೊಂಡಿದ್ದ ವೇಳೆ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ನೀಡಲಾಗಿತ್ತು. ರಕ್ತ ಪರೀಕ್ಷೆ ವೇಳೆ ಮಲ್ಲಿಕಾರ್ಜುನ್‌ಗೆ ಹೆಚ್‌ಐವಿ ಕಾಯಿಲೆ ಇದೆ ಅನ್ನೋದು ಗೊತ್ತಾಯಿತು. ಜುಲೈ 25ರಂದು ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಯಿಂದ ಮಣಿಪಾಲ್‌ ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ಅಂಬುಲೆನ್‌್ಸನಲ್ಲೇ ಮಲ್ಲಿಕಾರ್ಜುನನ್ನ ಅಕ್ಕನೇ ಕೊಲೆಗೈದಿದ್ದಾಳೆ.ಇದಕ್ಕೆ ಪತಿ ಮಂಜುನಾಥ್‌ ಕೂಡ ಸಾಥ್‌ ನೀಡಿದ್ದಾನೆ.ಆದರೆ ಇದು ಯಾರಿಗೂ ಗೊತ್ತಾಗಿರಲಿಲ್ಲ.

ಇನ್ನು ಅಂತ್ಯಕ್ರಿಯೆ ವೇಳೆ ಮಲ್ಲಿಕಾರ್ಜುನ್‌ನ ಕುತ್ತಿಗೆ ಮೇಲಿದ್ದ ಗಾಯದ ಗುರುತು ಕಂಡು ಸಂಬಂಧಿಕರು ಹಾಗು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ಮೃತನ ತಂದೆ ನಾಗರಾಜ್‌ ಹೊಳಲ್ಕೆರೆ ಪೊಲೀಸ್‌‍ ಠಾಣೆಗೆ ದೂರು ನೀಡಿರು. ತನಿಖೆ ವೇಳೆ ಮಲ್ಲಿಕಾರ್ಜುನ ಹೆಚ್‌ಐವಿ ಫೀಡಿತ ಎಂಬ ಕಾರಣಕ್ಕೆ ಮರ್ಯಾದೆಗೆ ಅಂಜಿ ಸಹೋದರಿಯೇ ಹತ್ಯೆಗೈದಿರುವ ಸತ್ಯ ಬೆಳಕಿಗೆ ಬಂದಿದೆ. ಈಸಂಬಂಧ ಹೊಳಲ್ಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿಶಾಳನ್ನ ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

RELATED ARTICLES

Latest News