Saturday, September 6, 2025
Homeರಾಜ್ಯಬುರುಡೆ ಪ್ರಕರಣ : ಜಯಂತ್‌ ವಿಚಾರಣೆ ನಡೆಸಿ ಹಲವು ಮಾಹಿತಿ ಪಡೆದ ಎಸ್‌‍ಐಟಿ

ಬುರುಡೆ ಪ್ರಕರಣ : ಜಯಂತ್‌ ವಿಚಾರಣೆ ನಡೆಸಿ ಹಲವು ಮಾಹಿತಿ ಪಡೆದ ಎಸ್‌‍ಐಟಿ

SIT interrogates Jayanth and obtains many information

ಬೆಳ್ತಂಗಡಿ,ಸೆ.5– ಬುರುಡೆ ಪ್ರಕರಣ ಸಂಬಂಧ ಹೋರಾಟಗಾರ ಜಯಂತ್‌ ಟಿ ಅವರನ್ನು ಎಸ್‌‍ಐಟಿ ಇಂದು ಬೆಳಗಿನ ಜಾವದವರೆಗೂ ವಿಚಾರಣೆ ನಡೆಸಿ, ಹಲವು ಮಾಹಿತಿಗಳನ್ನು ಪಡೆದುಕೊಂಡಿದೆ.

ನಿನ್ನೆ ಸಂಜೆ ವಿಚಾರಣೆಗೆ ಜಯಂತ್‌ ಒಂದು ಬ್ಯಾಗ್‌ ಜೊತೆ ಬೆಳ್ತಂಗಡಿಯ ಎಸ್‌‍ಐಟಿ ಕಚೇರಿಗೆ ಹಾಜರಾದರು. ಎಸ್‌‍ಐಟಿ ಅಧಿಕಾರಿಗಳು ಇಂದು ಬೆಳಗಿನ ಜಾವ 2.30ರವರೆಗೂ ವಿಚಾರಣೆ ಮಾಡಿ, ಮತ್ತೆ ಕರೆದಾಗ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿ ವಾಪಸ್‌‍ ಕಳುಹಿಸಿದ್ದಾರೆ.

ಬೆಂಗಳೂರಿನ ಬಗಲಗುಂಟೆ ಪೊಲೀಸ್‌‍ ಠಾಣೆ ವ್ಯಾಪ್ತಿಯ ಮಲ್ಲಸಂದ್ರದ ಬಾಡಿಗೆ ಮನೆಯಲ್ಲಿ ವಾಸವಿರುವ ಜಯಂತ್‌ ಮನೆಯಲ್ಲಿ ಎಸ್‌‍ಐಟಿ ಇತ್ತೀಚೆಗೆ ಮಹಜರು ನಡೆಸಿ ಅವರ ಕುಟುಂಬ ಸದಸ್ಯರ ಮೊಬೈಲ್‌ಗಳನ್ನು ವಶಕ್ಕೆ ಪಡೆದಿದೆ. ಆ ಸಂದರ್ಭದಲ್ಲಿ ಜಯಂತ್‌ ಮನೆಯಲ್ಲಿರಲಿಲ್ಲ.ಬುರುಡೆ ಚಿನ್ನಯ್ಯ ಮಲ್ಲಸಂದ್ರದ ಜಯಂತ್‌ ಟಿ ಅವರ ಮನೆಯಲ್ಲಿ ಎರಡು ದಿನ ಬುರುಡೆ ಜೊತೆ ತಂಗಿದ್ದನೆಂಬ ಮಾಹಿತಿ ಮೇರೆಗೆ ಅವರ ಮನೆ ಮಹಜರು ನಡೆಸಲಾಯಿತು.

ಮಾರನೇ ದಿನ ವಿದ್ಯಾರಣ್ಯಪುರದ ತಿಂಡ್ಲು ಸರ್ಕಲ್‌ನಲ್ಲಿರುವ ಸರ್ವೀಸ್‌‍ ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ತಂಗಿದ್ದಾಗಿ ಚಿನ್ನಯ್ಯ ಹೇಳಿದ್ದರಿಂದ ಆ ಅಪಾರ್ಟ್‌ಮೆಂಟ್‌ನಲ್ಲೂ ಸಹ ಎಸ್‌‍ಐಟಿ ಮಹಜರು ನಡೆಸಿ ಅಲ್ಲಿನ ಸಿಬ್ಬಂದಿಯನ್ನು ವಿಚಾರಣೆ ಮಾಡಿ ಮಾಹಿತಿಯನ್ನು ಪಡೆದುಕೊಂಡಿದೆ.

ನಿನ್ನೆ ಸಂಜೆ ಜಯಂತ್‌ ಟಿ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಎಸ್‌‍ಐಟಿ ಸೂಚಿಸಿದ್ದರಿಂದ ಬ್ಯಾಗ್‌ನಲ್ಲಿ ಕೆಲವೊಂದು ದಾಖಲಾತಿಗಳನ್ನು ಇಟ್ಟುಕೊಂಡು ವಿಚಾರಣೆಗೆ ಹಾಜರಾಗಿದ್ದರು.

RELATED ARTICLES

Latest News