Sunday, August 31, 2025
Homeರಾಜ್ಯಧರ್ಮಸ್ಥಳ ಪ್ರಕರಣ ಕುರಿತು ಎಸ್‌‍ಐಟಿ ತನಿಖೆ ಹಿಂದೆ ಗಾಂಧಿ ಕುಟುಂಬದ ಷಡ್ಯಂತ್ರ : ಯತ್ನಾಳ್‌ ಗಂಭೀರ...

ಧರ್ಮಸ್ಥಳ ಪ್ರಕರಣ ಕುರಿತು ಎಸ್‌‍ಐಟಿ ತನಿಖೆ ಹಿಂದೆ ಗಾಂಧಿ ಕುಟುಂಬದ ಷಡ್ಯಂತ್ರ : ಯತ್ನಾಳ್‌ ಗಂಭೀರ ಆರೋಪ

SIT investigation into Dharmasthala case: Gandhi family conspiracy behind it: Yatnal

ಬೆಂಗಳೂರು, ಆ.31– ಹಿಂದೂ ಧಾರ್ಮಿಕ ಸ್ಥಳಗಳಿಗೆ ಅಪಚಾರ ಮಾಡುವ ಸಲುವಾಗಿ ಸೋನಿಯಾ ಗಾಂಧಿ, ರಾಹುಲ್‌ಗಾಂಧಿ ಒತ್ತಾಯಕ್ಕೆ ಧರ್ಮಸ್ಥಳ ವಿಚಾರದಲ್ಲಿ ತನಿಖೆಗೆ ಎಸ್‌‍ಐಟಿ ರಚನೆ ಮಾಡಲಾಗಿದೆ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಎಸ್‌‍ಐಟಿ ತನಿಖೆಯಲ್ಲಿ ಒಂದಾದರೂ ಬುರುಡೆ, ಮೂಳೆಗಳು ಸಿಕ್ಕಿವೆಯೇ? ಪಾನ್‌ಪರಾಗ್‌ ಚೀಟಿ ಸಿಕ್ಕಿದೆ. ಅದಕ್ಕಾಗಿ 20 ಅಡಿ ಅಗೆಯಬೇಕಿತ್ತೇ? ಹಿಂದೂಗಳಲ್ಲಿ ಯಾರೂ 20 ಅಡಿ ಆಳದವರೆಗೂ ಶವಗಳನ್ನು ಹೂತಿಡುವುದಿಲ್ಲ ಎಂದು ಹೇಳಿದರು.

ಹಿಂದೂ ಧರ್ಮವನ್ನು ಅಪಮಾನಿಸುವ ಉದ್ದೇಶಕ್ಕೆ ಎಸ್‌‍ಐಟಿ ರಚಿಸಲಾಗಿದೆ. ಈ ಮೊದಲು ಅಯ್ಯಪ್ಪಸ್ವಾಮಿ ದೇವಸ್ಥಾನದ ವಿರುದ್ದ ಷಡ್ಯಂತ್ರ ಮಾಡಲಾಗಿದೆ. ಚಾಮುಂಡಿ ದೇವಸ್ಥಾನವನ್ನು ಅಪವಿತ್ರ ಮಾಡುವ ಪ್ರಯತ್ನಗಳಾಗಿವೆ. ಸೋನಿಯಾಗಾಂಧಿ, ರಾಹುಲ್‌ಗಾಂಧಿ ಹಿಂದೂ ದೇವಸ್ಥಾನಗಳನ್ನು ಗುರಿ ಮಾಡಿಕೊಂಡಿದ್ದಾರೆ. ಅವರ ನಿರ್ದೇಶನ ಸಿದ್ದರಾಮಯ್ಯ ಅವರಿಗೆ ಬಂದಿದೆ ಎಂದರು.

ಗೃಹ ಸಚಿವರು 10 ಜನ ಸತ್ತಿದ್ದಾರೆ ಎಂದರೂ ನನಗೆ ಗೊತ್ತಿಲ್ಲ, ಗಮನಕ್ಕೆ ಬಂದಿಲ್ಲ ಎನ್ನುತ್ತಾರೆ. ಉಪಮುಖ್ಯಮಂತ್ರಿ ಅವರಂತೂ ಕೇಳುವಂತೆಯೇ ಇಲ್ಲ. ಡಿ.ಕೆ.ಶಿವಕುಮಾರ್‌ ನಮಸ್ತೇ ಸದಾ ವತ್ಸಲೇ ಹಾಡುವ ಬದಲಾಗಿ ಇಟಲಿ ಮಾತೇ ಎಂದು ಹಾಡಿದರೆ, ಸಿದ್ದರಾಮಯ್ಯ ಅವರನ್ನು ತೆಗೆದು ಡಿ.ಕೆ.ಶಿವಕುಮಾರ್‌ ಅವರನ್ನೇ ಮುಖ್ಯಮಂತ್ರಿ ಮಾಡುತ್ತಿದ್ದರು. ಅವಕಾಶ ತಪ್ಪಿದ್ದಕ್ಕಾಗಿ ಡಿ.ಕೆ.ಶಿವಕುಮಾರ್‌ ಬಿಜೆಪಿಯತ್ತ ಒಂದು ಕಾಲು ಇಟ್ಟಿದ್ದಾರೆ. ದೆಹಲಿಯಲ್ಲಿ ವಿಜಯೇಂದ್ರ ಅವರ ಜೊತೆ ಮಾತುಕತೆ ನಡೆದಿದೆ. 50 ರಿಂದ 60 ಮಂದಿ ಶಾಸಕರನ್ನು ಕರೆದುಕೊಂಡು ಬಿಜೆಪಿಗೆ ಬರುವುದಾಗಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ ಎಂದರು.

ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಎಲ್ಲದರಲ್ಲೂ ಹಣ ಹೊಡೆಯಲು ಮುಂದಾಗಿದ್ದಾರೆ. ಆಡಳಿತ ನಿಷ್ಕ್ರಿಯವಾಗಿದೆ. ಎಲ್ಲಾ ದರಗಳು ದುಪ್ಪಟ್ಟು ಆಗಿವೆ ಎಂದು ಕಿಡಿ ಕಾರಿದರು.
ಸ್ಟ್ಯಾಂಪ್‌ ಡ್ಯೂಟಿಯನ್ನು ಶೇ. 1 ರಂದ ಶೇ. 2ಕ್ಕೆ ಹೆಚ್ಚಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಕೊಟ್ಟಿರುವ 60 ಸಾವಿರ ಕೋಟಿ ರೂ.ಗಳನ್ನು ವಸೂಲು ಮಾಡಲು ಎಲ್ಲಾ ದರಗಳನ್ನು ಹೆಚ್ಚಿಸಲಾಗಿದೆ ಎಂದು ಆರೋಪಿಸಿದರು.

ಸ್ಟ್ಯಾಂಪ್‌ ಡ್ಯೂಟಿ ಹೆಚ್ಚಿಸುವ ಹಿನ್ನೆಲೆಯಲ್ಲಿ ಸರ್ಕಾರವೇ ನೋಂದಣಿ ಕಚೇರಿಗಳ ಸರ್ವರ್‌ಗಳನ್ನು ಎರಡು ದಿನಗಳ ಕಾಲ ಸ್ಥಗಿತಗೊಳಿಸಿತ್ತು. ಇದು ಭಾರೀ ಪ್ರಮಾಣದ ವಂಚನೆ. ತಮ ಮಾಲೀಕತ್ವದ ಸಕ್ಕರೆ ಕಾರ್ಖಾನೆಗಾಗಿ 113 ಎಕರೆಯನ್ನು ಖರೀದಿಸಿದ್ದು, ಆದರ ನೋಂದಣಿ ಮಾಡಿಸಲು ಪ್ರಯತ್ನಿಸಿದಾಗ ಸರ್ವರ್‌ ಸ್ಥಗಿತಗೊಂಡಿರುವುದು ತಿಳಿಯಿತು. ದರ ಹೆಚ್ಚಳ ಜಾರಿಯಾದ ಬಳಿಕ ಸರ್ವರ್‌ಗಳು ತನ್ನಷ್ಟಕ್ಕೆ ತಾನೆ ಚಾಲುಗೊಳ್ಳುತ್ತವೆೆ ಎಂದರು. ಸನಾತನ ಧರ್ಮ ನಂಬುವವರ ಕಡೆಯಿಂದ ದಸರಾ ಉದ್ಘಾಟನೆ ಹಾಗೂ ಚಾಮುಂಡಿಗೆ ದೇವಿಗೆ ಪೂಜೆ ಮಾಡಿಸಲಿ. ರಾಜ್ಯದಲ್ಲಿ ಸಾಧನೆ ಮಾಡಿದ ಸಾಕಷ್ಟು ಮಹಿಳೆಯರಿದ್ದಾರೆ. ಅವರಿಂದ ದಸರಾ ಉದ್ಘಾಟನೆ ಮಾಡಿಸಲಿ ಎಂದರು.

ಹಳದಿ, ಕುಂಕುಮವಿದೆ ಎಂಬ ಕಾರಣಕ್ಕಾಗಿ ಕನ್ನಡ ಧ್ವಜ ವಿರೋಧಿಸಿದ್ದ ವ್ಯಕ್ತಿಯಿಂದ ದಸರಾ ಉದ್ಘಾಟಿಸುವುದು ಸರಿಯಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಚಾಮುಂಡಿ ಬೆಟ್ಟ ಸಾರ್ವಜನಿಕರ ಆಸ್ತಿ ಎನ್ನುತ್ತಾರೆ. ಅದೇ ರೀತಿ ದರ್ಗಾ, ಮಸೀದಿ, ವಕ್ಫ್ ಆಸ್ತಿಗಳನ್ನು ಸರ್ಕಾರದೆಂದು ಘೋಷಿಸುವ ತಾಕತ್ತು ಅವರಿಗಿದೆಯೇ? ಚಾಮುಂಡಿ ದೇವಸ್ಥಾನ ಹಿಂದೂಗಳ ಆಸ್ತಿ ಎಂಬುವುದರಲ್ಲಿ ಯಾವುದೇ ತಕರಾರು ಇಲ್ಲ ಎಂದರು.

ಮೂರ್ತಿ ಪೂಜೆ ಮಾಡುವವರನ್ನು ಕೊಲ್ಲಿ ಎಂದು ಅವರ ಧರ್ಮ ಹೇಳುತ್ತದೆ. ನಮ ಧರ್ಮ ಸರ್ವರಿಗೂ ಶ್ರೇಯಸ್ಸಾಗಲಿ ಎನ್ನುತ್ತದೆ. ಸಿದ್ದರಾಮಯ್ಯ ಅವರ ಸರ್ಕಾರದ ತುಷ್ಠೀಕರಣ ಅತಿಯಾಗಿದೆ. ಕಾಂಗ್ರೆಸ್‌‍ ಆಡಳಿತಕ್ಕೆ ಬರಲು ಹಿಂದೂಗಳು ಮತಹಾಕಿಲ್ಲವೆ. ಮುಸ್ಲಿಂಮರು ಮಾತ್ರ ಮತಹಾಕಿದ್ದಾರೆಯೇ ಎಂದು ಪ್ರಶ್ನಿಸಿದರು.

RELATED ARTICLES

Latest News