Sunday, August 24, 2025
Homeರಾಜ್ಯಧರ್ಮಸ್ಥಳದ ವಿರುದ್ಧ ಕಟ್ಟುಕತೆ ಕಟ್ಟಿದ ಸೂತ್ರಧಾರಿಗಳಿಗೆ ನೋಟಿಸ್‌‍ ನೀಡಲು ಮುಂದಾದ ಎಸ್‌‍ಐಟಿ

ಧರ್ಮಸ್ಥಳದ ವಿರುದ್ಧ ಕಟ್ಟುಕತೆ ಕಟ್ಟಿದ ಸೂತ್ರಧಾರಿಗಳಿಗೆ ನೋಟಿಸ್‌‍ ನೀಡಲು ಮುಂದಾದ ಎಸ್‌‍ಐಟಿ

SIT to issue notice to those who fabricated the story against Dharmasthala

ಬೆಂಗಳೂರು, ಆ.24- ಧರ್ಮಸ್ಥಳದ ಸುತ್ತಮುತ್ತ ಶವಗಳನ್ನು ಹೂತಿಡಲಾಗಿದೆ ಎಂದು ಕಟ್ಟುಕತೆ ಕಟ್ಟಿದ ಸೂತ್ರಧಾರಿಗಳಿಗೆ ನೋಟಿಸ್‌‍ ಕೊಡಲು ಎಸ್‌‍ಐಟಿ ಸಿದ್ಧತೆ ನಡೆಸುತ್ತಿದೆ. ಮುಸುಕುಧಾರಿ ಚಿನ್ನಯ್ಯ ವಿಚಾರಣೆ ಸಂದರ್ಭದಲ್ಲಿ ಎಸ್‌‍ಐಟಿ ಅಧಿಕಾರಿಗಳ ಮುಂದೆ ಈ ಪ್ರಕರಣದಲ್ಲಿ ನಾನು ಕೇವಲ ಪಾತ್ರಧಾರಿ. ಸೂತ್ರಧಾರಿಗಳು ಬೇರೆ ಇದ್ದಾರೆ ಎಂದು ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಅವರಿಗೆಲ್ಲ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌‍ ನೀಡಲು ಎಸ್‌‍ಐಟಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಕಳೆದ ಒಂದು ವಾರದಿಂದ ಉತ್ಖನನ ನಿಲ್ಲಿಸಿದ ಎಸ್‌‍ಐಟಿ, ಚಿನ್ನಯ್ಯನನ್ನು ವಿವಿಧ ದೃಷ್ಟಿಕೋನಗಳಲ್ಲಿ ವಿಚಾರಣೆಗೊಳಪಡಿಸಿದಾಗ ಸತ್ಯ ಬೆಳಕಿಗೆ ಬಂದಿದೆ.ಖುದ್ದು ಎಸ್‌‍ಐಟಿ ಮುಖ್ಯಸ್ಥರಾದ ಡಿಜಿಪಿ ಪ್ರಣವ್‌ ಮೊಹಾಂತಿ ಅವರು ಆತನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಮತ್ತಷ್ಟು ವಿಷಯಗಳು ಬೆಳಕಿಗೆ ಬಂದಿವೆ.

ತದನಂತರ ನಿನ್ನೆ ಮುಂಜಾನೆ ಆತನನ್ನು ಎಸ್‌‍ಐಟಿ ಅಧಿಕಾರಿಗಳು ಬಂಧಿಸಿ ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ನ್ಯಾಯಾಲಯ ಆತನನ್ನು ಹತ್ತು ದಿನಗಳ ಕಾಲ ಎಸ್‌‍ಐಟಿ ವಶಕ್ಕೆ ನೀಡಿದೆ.

ಬಿಗಿ ಪೊಲೀಸ್‌‍ ಬಂದೋಬಸ್ತ್‌ನಲ್ಲಿ ಬೆಳ್ತಂಗಡಿಯಲ್ಲಿರುವ ಎಸ್‌‍ಐಟಿ ಕಚೇರಿಗೆ ಆತನನ್ನು ಅಧಿಕಾರಿಗಳು ಕರೆದೊಯ್ದರು. ಇಂದೂ ಸಹ ಆತನನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೊಳಪಡಿಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಚಿನ್ನಯ್ಯನ ಸಹೋದರ ಮತ್ತು ಅವರ ಜತೆ ಕೆಲಸ ಮಾಡಿದ ಕೆಲ ವ್ಯಕ್ತಿಗಳನ್ನು ಸಹ ಕರೆತಂದು ಎಸ್‌‍ಐಟಿ ಅಧಿಕಾರಿಗಳು ವಿಚಾರಣೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES

Latest News