Monday, June 9, 2025
Homeರಾಷ್ಟ್ರೀಯ | Nationalಮುಂಬೈ : ತುಂಬಿ ತುಳುಕುತ್ತಿದ್ದ ರೈಲಿನಿಂದ ಬಿದ್ದು ಆರಕ್ಕೂ ಹೆಚ್ಚು ಪ್ರಯಾಣಿಕರ ಸಾವು

ಮುಂಬೈ : ತುಂಬಿ ತುಳುಕುತ್ತಿದ್ದ ರೈಲಿನಿಂದ ಬಿದ್ದು ಆರಕ್ಕೂ ಹೆಚ್ಚು ಪ್ರಯಾಣಿಕರ ಸಾವು

Six dead after falling on Mumbra-CSMT fast local tracks, several others injured

ಮುಂಬೈ,ಜೂ.9- ಜನದಟ್ಟಣೆಯಿಂದ ತುಂಬಿ ತುಳುಕುತ್ತಿದ್ದ ಸ್ಥಳೀಯ ರೈಲಿನಿಂದ ಬಿದ್ದು ಆರಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಸಾವನ್ನಪ್ಪಿ ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಸಂಭವಿಸಿದೆ.

ಘಟನೆಯಲ್ಲಿ ಕೆಲವರು ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪುಷ್ಪಕ್ ಎಕ್ಸೆಸ್ ಮತ್ತು ಕಸರಾ ಲೋಕಲ್ ಪರಸ್ಪರ ದಾಟುತ್ತಿದ್ದಾಗ ಮುಂಬ್ರಾ ಮತ್ತು ದಿವಾ ರೈಲು ನಿಲ್ದಾಣಗಳ ನಡುವೆ ಈ ಘಟನೆ ಸಂಭವಿಸಿದೆ.

ಅಧಿಕಾರಿಗಳ ಪ್ರಕಾರ, ಕನಿಷ್ಠ 10 ರಿಂದ 12 ಪ್ರಯಾಣಿಕರು ರೈಲಿನಿಂದ ಬಿದ್ದಿದ್ದಾರೆ. ರೈಲಿನೊಳಗಿನ ಅತಿಯಾದ ಜನಸಂದಣಿಯಿಂದಾಗಿ ಜನರು ಒಂದು ಬೋಗಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದರು. ಪ್ರಯಾಣಿಕರು ಜನದಟ್ಟಣೆಯಿಂದಾಗಿ ಬಾಗಿಲುಗಳನ್ನು ಹಿಡಿದುಕೊಂಡು ಪ್ರಯಾಣಿಸುತ್ತಿದ್ದರು.

ದುರಂತ ಘಟನೆಯ ನಂತರ ರೈಲ್ವೆ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗಾಯಗೊಂಡ ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಹತ್ತಿರದ ವೈದ್ಯಕೀಯ ಸೌಲಭ್ಯಕ್ಕೆ ಕರೆದೊಯ್ಯಲಾಗಿದೆ. ಹೆಚ್ಚಿನ ಪ್ರಯಾಣಿಕರು ರೈಲಿನ ಬಾಗಿಲುಗಳ ಬಳಿ ನೇತಾಡುತ್ತಿದ್ದರಿಂದ, ಜನದಟ್ಟಣೆಯಿಂದಾಗಿ ಈ ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ತರುವಾಯ, ಕೇಂದ್ರ ಮಾರ್ಗದಲ್ಲಿ ಸ್ಥಳೀಯ ರೈಲು ಸೇವೆಗಳ ಮೇಲೆಪರಿಣಾಮಬೀರಿದೆ

RELATED ARTICLES

Latest News