ದುಬೈ, ಜು.1 (ಪಿಟಿಐ) ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ತನ್ನ ಟೀಮ್ ಆಫ್ ದ ಟೂರ್ನಮೆಂಟ್‌ನಲ್ಲಿ ಆರು ಭಾರತೀಯರನ್ನು ಆಯ್ಕೆ ಮಾಡಿದೆ ಆದರೆ ಪಂದ್ಯಶ್ರೇಷ್ಠ ಬ್ಯಾಟಿಂಗ್ ಪ್ರದರ್ಶಿಸಿದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸ್ಥಾನ ಪಡೆಯದಿರುವುದು ಅಚ್ಚರಿ ಮೂಡಿಸಿದೆ.
ಐಸಿಸಿ ಇಲೆವೆನ್‌ನಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಮತ್ತು ಇಬ್ಬರು ವೇಗಿಗಳಾದ ಜಸ್ಪ್ರೀತ್ ಬುವ್ರಾ ಮತ್ತು ಅರ್ಷದೀಪ್ ಸಿಂಗ್ ಕಾಣಿಸಿಕೊಂಡಿದ್ದಾರೆ.
ತಮ ಐತಿಹಾಸಿಕ ಸೆಮಿಫೈನಲ್ ಮುಕ್ತಾಯದ ನಂತರ ಅಫ್ಘಾನಿಸ್ತಾನ ತಂಡದ ಮೂವರು ಆಟಗಾರರು ಐಸಿಸಿ ತಂಡದಲ್ಲಿ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಎಡಗೈ ವೇಗಿ ಫಜಲ್ಹಕ್ ಫಾರೂಕಿ, ವಿಕೆಟ್ ಕೀಪರ್ ಕಮ್ ಬ್ಯಾಟರ್ ರಹಮಾನುಲ್ಲಾ ಗುರ್ಬಾಜ್ ಮತ್ತು ನಾಯಕ ರಶೀದ್ ಖಾನ್ ಅವರೊಂದಿಗೆ ಸ್ಥಾನ ಪಡೆಕೊಂಡಿದ್ದಾರೆ.
ಆಸ್ಟ್ರೇಲಿಯಾದ ಮಾರ್ಕಸ್ ಸ್ಟೊಯಿನಿಸ್, ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರನ್ ಮತ್ತು ವೇಗಿ ಅನ್ರಿಚ್ ನಾರ್ಟ್ಜೆ 12 ನೇ ಆಟಗಾನಾಗಿ ಕಾಣಿಸಿಕೊಂಡಿದ್ದಾರೆ. ನಾರ್ಟ್ಜೆ ಶ್ರೀಲಂಕಾ ವಿರುದ್ಧ ಅದ್ಭುತ 4/7 ನೊಂದಿಗೆ ಪಂದ್ಯಾವಳಿಯನ್ನು ಪ್ರಾರಂಭಿಸಿದರು ಮತ್ತು ಒಂದು ಪಂದ್ಯವನ್ನು ಹೊರತುಪಡಿಸಿ ಎಲ್ಲಾ ಪಂದ್ಯಗಳಲ್ಲಿ ಕನಿಷ್ಠ ಒಂದು ವಿಕೆಟ್ ಪಡೆದು ಗಮನ ಸೆಳೆದಿದ್ದರು.
ಐಸಿಸಿ ಇಲೆವೆನ್ ತಂಡ ಇಂತಿದೆ; ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುವ್ರಾ, ಅರ್ಶ್ದೀಪ್ ಸಿಂಗ್ (ಎಲ್ಲಾ ಭಾರತೀಯರು); ರಹಮಾನುಲ್ಲಾ ಗುರ್ಬಾಜ್, ರಶೀದ್ ಖಾನ್, ಫಜಲ್ಹಕ್ ಫಾರೂಕಿ (ಅಫ್ಘಾನಿಸ್ತಾನ); ಮಾರ್ಕಸ್ ಸ್ಟೊಯಿನಿಸ್ (ಆಸ್ಟ್ರೇಲಿಯಾ) ಮತ್ತು ನಿಕೋಲಸ್ ಪೂರನ್ (ವೆಸ್ಟ್ ಇಂಡೀಸ್); 12 ನೇ ವ್ಯಕ್ತಿ: ಆನ್ರಿಚ್ ನಾರ್ಟ್ಜೆ