ಇಸ್ಲಾಮಾಬಾದ್, ಮಾ 27 (ಪಿಟಿಐ) : ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ ಹೈಕೋರ್ಟ್ನ ಆರು ನ್ಯಾಯಾಧೀಶರು ಗುಪ್ತಚರ ಸಂಸ್ಥೆಗಳು ನ್ಯಾಯಾಂಗದ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ ಮಧ್ಯಪ್ರವೇಶಕ್ಕೆ ಒತ್ತಾಯಿಸಿದ್ದಾರೆ. ಇಸ್ಲಾಮಾಬಾದ್ ಹೈಕೋರ್ಟ್ನ ಆರು ನ್ಯಾಯಾಧೀಶರು ಸಹಿ ಮಾಡಿದ ಪತ್ರವು ನ್ಯಾಯಾಂಗ ವ್ಯವಹಾರಗಳಲ್ಲಿ ಅಂತಹ ಹಸ್ತಕ್ಷೇಪದ ವಿರುದ್ಧ ನ್ಯಾಯಾಂಗ ಸಮಾವೇಶವನ್ನು ಪ್ರಾರಂಭಿಸುವಂತೆ ಒತ್ತಾಯಿಸಿದೆ.
ಮಾರ್ಚ್ 25 ರ ದಿನಾಂಕದ ಪತ್ರಕ್ಕೆ ಸಹಿ ಮಾಡಿದ ಆರು ನ್ಯಾನ್ಯಾಯಾಧೀಶರಲ್ಲಿ ನ್ಯಾಯಮೂರ್ತಿ ಮೊಹ್ಸಿನ್ ಅಖ್ತರ್ ಕಯಾನಿ, ನ್ಯಾಯಮೂರ್ತಿ ತಾರಿಕ್ ಮೆಹಮೂದ್ ಜಹಾಂಗಿರಿ, ನ್ಯಾಯಮೂರ್ತಿ ಬಾಬರ್ ಸತ್ತಾರ್, ನ್ಯಾಯಮೂರ್ತಿ ಸರ್ದಾರ್ ಎಜಾಜ್ ಇಶಾಕ್ ಖಾನ್, ನ್ಯಾಯಮೂರ್ತಿ ಅರ್ಬಾಬ್ ಮುಹಮ್ಮದ್ ತಾಹಿರ್ ಮತ್ತು ನ್ಯಾಯಮೂರ್ತಿ ಸಮನ್ ರಫತ್ ಇಮ್ತಿಯಾಜ್ ಸೇರಿದ್ದಾರೆ. ಸಮಾವೇಶದ ಮೂಲಕ ನ್ಯಾಯಾಂಗದ ಸ್ವಾತಂತ್ರ್ಯವನ್ನು ಖಾತ್ರಿಪಡಿಸುವ ನಿಲುವನ್ನು ಅಳವಡಿಸಿಕೊಳ್ಳಬೇಕೆಂದು ಪತ್ರವು ಪ್ರತಿಪಾದಿಸಿದೆ.
ಎಸ್ಜೆಸಿ ಉನ್ನತ ಮತ್ತು ಸರ್ವೋಚ್ಚ ನ್ಯಾಯಾಲಯಗಳ ನ್ಯಾಯಾ„ೀಶರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರ ಹೊಂದಿರುವ ಅತ್ಯುನ್ನತ ಸಂಸ್ಥೆಯಾಗಿದೆ. ಗುಪ್ತಚರ ಏಜೆನ್ಸಿಗಳ ಕಾರ್ಯಕರ್ತರು ಸೇರಿದಂತೆ ಕಾರ್ಯಾಂಗದ ಸದಸ್ಯರ ಭಾಗದ ಕ್ರಮಗಳನ್ನು ವರದಿ ಮಾಡಲು ಮತ್ತು ಪ್ರತಿಕ್ರಿಯಿಸಲು ನ್ಯಾಯಾಧೀಶರ ಕರ್ತವ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ (ಎಸ್ಜೆಸಿ) ನಿಂದ ಮಾರ್ಗದರ್ಶನ ಪಡೆಯಲು ನಾವು ಬರೆಯುತ್ತಿದ್ದೇವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರ ಮೇಲೆ ಒತ್ತಡ ಹೇರಲು ಹೈಕೋರ್ಟ್ ನ್ಯಾಯಾಧೀಶರ ಸೋದರ ಮಾವನ ಅಪಹರಣ ಮತ್ತು ಚಿತ್ರಹಿಂಸೆ ಸೇರಿದಂತೆ ನ್ಯಾಯಾಂಗ ವಿಷಯಗಳಲ್ಲಿ ಕಾರ್ಯನಿರ್ವಾಹಕ ಮತ್ತು ಏಜೆನ್ಸಿಗಳ ಹಸ್ತಕ್ಷೇಪವನ್ನು ಇದು ಬಹಿರಂಗಗೊಳಿಸಿದೆ.