ಹೈದರಾಬಾದ್‌ಮೇ 27 : ನಗರದ ಹಲವೆಡೆ ಗುಡುಗು, ಗಾಳಿ ಸಹಿತ ಮಳೆ ಅಬ್ಬರಿಸಿ ಹಲವಾರು ಕಡೆ ಅವಾಂತರ ಸೃಷ್ಠಿಸಿದ್ದು ,ಸುಮಾರು 6 ಮಂದಿ ಜೀವ ಕಳೆದುಕೊಂಡಿದ್ದಾರೆ. ಅಂಬರಪೇಟ್, ಕಾಚಿಗುಡ, ನಲ್ಲಕುಂಟಾ, ಉಪ್ಪಲ್, ನಾಗೋಲ್, ಮನ್ಸೂರಾಬಾದ್, ಮಲ್ಕಾಜಿಗಿರಿ, ತುರ್ಕಯಾಂಜಲ್ ಸೇರಿದಂತೆ ಹಲವೆಡೆ ಸುರಿದ ಭಾರೀ ಮಳೆಗೆ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲ್ಲಕ್ಕೆ ಉರುಳಿದೆ.
ಮೆಡ್ಚಲ್ ಜಿಲ್ಲೆಯ ಕೀಸರ ತಾಲೂಕಿನಲ್ಲೂ ಮಳೆಗೆ ತಿಮ್ಮಾಯಿಪಲ್ಲಿ-ಸಮೀರ್‌ಪೇಟ್ ರಸ್ತೆಯಲ್ಲಿ ಮರ ಬಿದ್ದು ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ದ್ವಿಚಕ್ರ ವಾಹನದ ಮೇಲೆ ಮರ ಬಿದ್ದ ಪರಿಣಾಮ ಸವಾರ ನಾಗಿರೆಡ್ಡಿ ರಾಮ್ ರೆಡ್ಡಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಧನಂಜಯ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಇಸಿಐಎಲ್‌ನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರನ್ನು ಯಾದಾದ್ರಿ ಜಿಲ್ಲೆಯ ಧರ್ಮರೆಡ್ಡಿಗುಡೆಂ ಗ್ರಾಮದವರು ಎಂದು ಗುರುತಿಸಲಾಗಿದೆ.ನಾಗರಕರ್ನೂಲ್ ಜಿಲ್ಲೆಯ ಇಂದ್ರಕಲ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಶೀಟ್ ಶೆಡ್ ಕುಸಿದು ನಾಲ್ವರು ಸಾವನ್ನಪ್ಪಿದ್ದಾರೆ. ಮೃತರಲ್ಲಿ 10 ವರ್ಷದ ಮಗು, ಇಬ್ಬರು ಕಾರ್ಮಿಕರು, ಶೆಡ್ ಮಾಲೀಕ ಮಲ್ಲೇಶ್ ಸಾವನ್ನಪ್ಪಿದ್ದಾರೆ.
ವಿದ್ಯತ್ ವ್ಯತ್ಯಯ ಉಂಟಾಗಿದ್ದು,ರಸ್ತೆ ಮಧ್ಯೆ ಉರುಳಿದ ಮರಗಳನ್ನು ರಾತ್ರಿಯಿಡಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗಿದೆ.ಧಾರಾಕಾರ ವರ್ಷಧಾರೆ ಜನರು ಧಂಗಾಗಿದ್ದಾರೆ.ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ ಮನೆಗಳಿಂದ ನೀರು ಹೊರಹಾಕಲಾಗಿತ್ತಿ