ಥಾಣೆ, ಜ 4 (ಪಿಟಿಐ) ನೀವು ಮಾರುಕಟ್ಟೆಗಳಲ್ಲಿ ಖರೀದಿಸಿ ಬಾಯಿ ಚಪ್ಪರಿಸಿಕೊಂಡು ತಿನ್ನುವ ತುಪ್ಪವನ್ನು ಹೇಗೆ ತಯಾರಿಸುತ್ತಾರೆ ಎಂದು ನಿಮಗೆ ತಿಳಿದಿದೆಯೇ ಇಲ್ಲದಿದ್ದರೆ ಈ ವರದಿ ನೋಡಿ. ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಮುಚ್ಚಿದ ಕಸಾಯಿಖಾನೆಯೊಂದರ ಮೇಲೆ ನಾಗರಿಕ ಅಧಿಕಾರಿಗಳು ದಾಳಿ ನಡೆಸಿ ಪ್ರಾಣಿಗಳ ದೇಹದ ಭಾಗಗಳಿಂದ ತುಪ್ಪ ತಯಾರಿಸುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.
ಭಿವಂಡಿ ಪಟ್ಟಣದ ಈದ್ಗಾ ರಸ್ತೆಯಲ್ಲಿರುವ ಕಸಾಯಿಖಾನೆ ಮೇಲೆ ದಾಳಿ ನಡೆಸಿದಾಗ ಪ್ರಾಣಿಗಳ ದೇಹದ ಕೊಬ್ಬು ಬಳಸಿ ತುಪ್ಪ ತಯಾರಿಸುತ್ತಿರುವುದು ಬೆಳಕಿಗೆ ಬಂದಿದೆ. ಮಾರುಕಟ್ಟೆಯಲ್ಲಿ ಉತ್ಪನ್ನವನ್ನು ಸರಬರಾಜು ಮಾಡಲು ಪ್ರಾಣಿಗಳ ದೇಹದ ಭಾಗಗಳಿಂದ ತುಪ್ಪವನ್ನು ರಹಸ್ಯವಾಗಿ ಉತ್ಪಾದಿಸುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದು ಭಿವಂಡಿ ನಿಜಾಂಪುರ್ ಮುನ್ಸಿಪಲ್ ಕಾಪೆರ್ರೇಶನ್‍ನ (ಬಿಎನ್‍ಎಂಸಿ) ವಿಪತ್ತು ನಿರ್ವಹಣಾ ಅಧಿಕಾರಿ ಸಾಕಿಬ್ ಕರ್ಭೆ ಪಿಟಿಐಗೆ ತಿಳಿಸಿದ್ದಾರೆ.
ದ್ವಿತೀಯ ಟೆಸ್ಟ್: ದಕ್ಷಿಣ ಆಫ್ರಿಕಾವನ್ನು 55 ರನ್‌ಗೆ ಆಲೌಟ್ ಮಾಡಿದ ಭಾರತ
ಅಕ್ರಮವಾಗಿ ಉತ್ಪಾದಿಸಿದ ಹತ್ತು ಟಿನ್ ತುಪ್ಪ, ಆರು ದೊಡ್ಡ ಪಾತ್ರೆಗಳು ಮತ್ತು ಉತ್ಪಾದನಾ ಪ್ರಕ್ರಿಯೆಯಲ್ಲಿ ಬಳಸಲಾದ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಅಧಿಕಾರಿಗಳು ತುಪ್ಪ ಉತ್ಪಾದಕರನ್ನು ಬಂಧಿಸುವ ಮೊದಲು ಕಸಾಯಿಖಾನೆಯಲ್ಲಿದ್ದ ವ್ಯಕ್ತಿಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಪಟ್ಟಣದಲ್ಲಿ ಅಕ್ರಮವಾಗಿ ನಡೆಯುತ್ತಿರುವ ವಿವಿಧ ಕಸಾಯಿಖಾನೆಗಳ ವಿರುದ್ಧ ಬಿಎನ್‍ಎಂಸಿ ಆಯುಕ್ತ ಅಜಯ್ ವೈದ್ಯ ದೂರು ಸ್ವೀಕರಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.