ಪ್ರೇಗ್, ಮೇ 16- ರಾಜಕೀಯ ಪ್ರೇರಣೆ ಹಿನ್ನೆಲೆಯಲ್ಲಿ ಸ್ಲೋವಾಕಿಯಾ ಪ್ರಧಾನಿ ರಾಬರ್ಟ್ ಫಿಕೋ ಅವರ ಮೇಲೆ ನಡೆಸಲಾದ ಗುಂಡಿನ ದಾಳಿ ಯುರೂಪಿನಾದ್ಯಂತ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ನಿನ್ನೆ ರಷ್ಯಾ ಪರ ನಿಲುವು ಹೊಂದಿರುವ ಫಿಕೋ ಅವರ ಮೇಲೆ ಹಲವಾರು ಬಾರಿ ಗುಂಡು ಹಾರಿಸಲಾಗಿದೆ. ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಅವರ ಪ್ರಾಣ ರಕ್ಷಣೆಗೆ ವೈದ್ಯರು ಹರಸಾಹಸ ನಡೆಸುತ್ತಿದ್ದಾರೆ.
ರಾಜಧಾನಿ ಪ್ರೇಗ್‍ನಿಂದ ಈಶಾನ್ಯಕ್ಕೆ ಸುಮಾರು 140 ಕಿಲೋಮೀಟರ್ (85 ಮೈಲುಗಳು) ದೂರದಲ್ಲಿರುವ ಹ್ಯಾಂಡ್ಲೋವಾ ಪಟ್ಟಣದ ಸಾಂಸ್ಕøತಿಕ ಕೇಂದ್ರದ ಹೊರಗೆ ಬೆಂಬಲಿಗರೊಂದಿಗೆ ಸಭೆ ನಡೆಸುತ್ತಿದ್ದ ಫಿಕೋ ಅವರ ಮೇಲೆ ಕನಿಷ್ಠ ನಾಲ್ಕು ಸುತ್ತು ಗುಂಡು ಹಾರಿಸಲಾಗಿದೆ. ಶಂಕಿತನೊಬ್ಬ ಬಂಧನದಲ್ಲಿದ್ದು, ಆರಂಭಿಕ ತನಿಖೆಯಲ್ಲಿ ಹತ್ಯೆಯ ಯತ್ನದ ಹಿಂದೆ ಸ್ಪಷ್ಟ ರಾಜಕೀಯ ಪ್ರೇರಣೆ ಕಂಡುಬಂದಿದೆ ಎಂದು ಆಂತರಿಕ ಸಚಿವ ಮಾಟಸ್ ಸುತಾಜ್ ಎಸ್ಟೋಕ್ ಅವರು ರಕ್ಷಣಾ ಸಚಿವರೊಂದಿಗೆ ಸುದ್ದಿಗಾರರಿಗೆ ತಿಳಿಸಿದರು.
ಫಿಕೊ ಬಹಳ ಹಿಂದಿನಿಂದಲೂ ಸ್ಲೋವಾಕಿಯಾ ಮತ್ತು ಅದರಾಚೆಗೂ ವಿಭಜಿತ ವ್ಯಕ್ತಿಯಾಗಿದ್ದಾನೆ, ಆದರೆ ಕಳೆದ ವರ್ಷ ಅಧಿಕಾರಕ್ಕೆ ಮರಳಿದ ಅವರು ರಷ್ಯಾದ ಪರ ಹಾಗೂ ಅಮೇರಿಕನ್ ವಿರೋಧಿ ನಿಲುವು ಹೊಂದಿದ್ದರು.
ಅವರ ಸರ್ಕಾರವು ಉಕ್ರೇನ್‍ಗೆ ಶಸ್ತ್ರಸ ವಿತರಣೆಯನ್ನು ಸ್ಥಗಿತಗೊಳಿಸಿತು ಮತ್ತು ನ್ಯಾಟೋಗೆ ಸೇರಿದ 5.4 ಮಿಲಿಯನ್ ಜನರಿರುವ ಸ್ಲೋವಾಕಿಯಾವನ್ನು ಅವರು ಪಾಶ್ಚಿಮಾತ್ಯ ಪರವಾದ ಹಾದಿಯನ್ನು ತ್ಯಜಿಸಲು ಮತ್ತು ಜನಪ್ರಿಯ ಪ್ರಧಾನ ಮಂತ್ರಿ ವಿಕ್ಟರ್ ಓರ್ಬನ್ ಅವರ ಅಡಿಯಲ್ಲಿ ಹಂಗೇರಿಯ ಹೆಜ್ಜೆಗಳನ್ನು ಅನುಸರಿಸಲು ಮುಂದಾಗಿದ್ದರು.
ಫಿಕೋ ನೀತಿಗಳನ್ನು ಪ್ರತಿಭಟಿಸಲು ಸಾವಿರಾರು ಜನರು ಪದೇ ಪದೇ ರಾಜಧಾನಿಯಲ್ಲಿ ಮತ್ತು ಸ್ಲೋವಾಕಿಯಾದಾದ್ಯಂತ ರ್ಯಾಲಿ ಮಾಡಿದ್ದರು. ಇಂತಹ ಸಂದರ್ಭದಲ್ಲೇ ಅವರ ಮೇಲಿನ ಗುಂಡಿನ ದಾಳಿ ಹಿಂದೆ ರಾಜಕೀಯ ಪಿತೂರಿ ಇರುವುದು ಸಾಬೀತಾಗಿರುವುದು ಕೆಲ ದೇಶಗಳ ನಡುವಿನ ಕದನಕ್ಕೆ ಕಾರಣವಾದರೂ ಅಚ್ಚರಿಪಡುವಂತಿಲ್ಲ.