Sunday, December 29, 2024
Homeರಾಜ್ಯಸಂಧಾನ ಚತುರ ಕೃಷ್ಣ

ಸಂಧಾನ ಚತುರ ಕೃಷ್ಣ

SM Krishna is a clever negotiator.

ಬೆಂಗಳೂರು,ಡಿ.10- ಎಸ್‌‍.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾದ ಕಾಲದಲ್ಲಿ ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನದ ಪ್ರಗತಿಗೆ ಒತ್ತು ನೀಡಿದ್ದರು. ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದರು. ಬೆಂಗಳೂರಿಗೆ ಐಟಿ, ಬಿಟಿ ಕಂಪನಿಗಳನ್ನು ಕರೆ ತರುವಲ್ಲಿ ಕೃಷ್ಣ ವಹಿಸಿದ ಪಾತ್ರ ಅವಿಸರಣೀಯ. ತಾಲೂಕು ಮಟ್ಟದಲ್ಲೂ ತಂತ್ರಜ್ಞಾನ ಬಳಸಿ ಭೂಮಿ ಎಂಬ ಹೆಸರಿನ ಯೋಜನೆಯಡಿ ಜಮೀನಿನ ಪತ್ರಗಳನ್ನು ಕಂಪ್ಯೂಟರ್‌ ಮೂಲಕ ನೀಡುವ ವ್ಯವಸ್ಥೆ ಜಾರಿಗೆ ತಂದಿದ್ದರು.

1967ರಲ್ಲಿ ಇಂದಿರಾ ಗಾಂಧಿ ಕಾಂಗ್ರೆಸ್‌‍ನ ಅಗ್ರ ನಾಯಕಿಯಾಗಿ ಹೊರ ಹೊಮಿದ್ದರು. ಆದರೆ, ಲೋಕಸಭೆಯಲ್ಲಿ ಅತಂತ್ರ ಸ್ಥಿತಿ ಎದುರಾದಾಗ 1968ರವರೆಗೂ ಪ್ರಜಾ ಸೋಷಿಯಲಿಸ್ಟ್‌ ಪಕ್ಷ (ಪಿಎಸ್ಪಿ)ದಲ್ಲಿದ್ದ ಕೃಷ್ಣ ಇಂದಿರಾ ಬೆಂಬಲಕ್ಕೆ ನಿಂತರು. ಸಮಿಶ್ರ ಸರ್ಕಾರದಲ್ಲಿ 14 ಬ್ಯಾಂಕ್‌ಗಳ ರಾಷ್ಟ್ರೀಕರಣ, ಭೂ ಸುಧಾರಣೆ ಕಾಯ್ದೆಗೆ ಬೆಂಬಲ ಸೂಚಿಸಿದರು. ರಾಜಕೀಯದಲ್ಲಿ ಭದ್ರ ಬುನಾದಿ ಹಾಕಿಕೊಳ್ಳುವ ನಿಟ್ಟಿನಲ್ಲಿ ಮುಂದಾಗಿ 1971ರಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್‌‍ ಸೇರ್ಪಡೆಯಾದರು.

ಬಳಿಕ 5ನೇ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌‍ನಿಂದ ಸ್ಪರ್ಧಿಸಿ ಗೆದ್ದರು. 1980ರಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಆಯ್ಕೆಯಾಗಿ 1983ರಲ್ಲಿ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದರು. 1984ರಲ್ಲಿ ಇಂದಿರಾ ಗಾಂಧಿ ಹತ್ಯೆಯಾದ ಬಳಿಕ ರಾಜಕೀಯ ಅಸ್ಥಿರತೆ ಉಂಟಾಗಿ ರಾಜೀವ್‌ ಗಾಂಧಿ ಕಾಂಗ್ರೆಸ್ನ ನೇತೃತ್ವ ವಹಿಸಿಕೊಂಡರು.

ಆಗ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಕೃಷ್ಣ ಸೋತರು. ಮುಂದಿನ 5 ವರ್ಷಗಳ ಕಾಲ ಕೇವಲ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡರು. 1989ರ ಹೊತ್ತಿಗೆ ವಿಧಾನಸಭೆ ಚುನಾವಣೆ ಎದುರಾಯಿತು. ಪಕ್ಷದ ಅಣತಿಯಂತೆ ಸ್ಪರ್ಧಿಸಿ ಗೆದ್ದು ಶಾಸಕರಾದರು. 1992ರವರೆಗೂ ವಿಧಾನಸಭೆಯ ಸ್ಪೀಕರ್‌ ಆಗಿಯೂ ಕಾರ್ಯನಿರ್ವಹಿಸಿದರು.

1992ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್‌‍.ಬಂಗಾರಪ್ಪ ಅವರ ವಿರುದ್ಧ ಕ್ಲಾಸಿಕ್‌ ಕಂಪ್ಯೂಟರ್‌ ಹಗರಣ ಕೇಳಿ ಬಂದಾಗ ಅವರ ಸ್ಥಾನದಲ್ಲಿ ಎಂ.ವೀರಪ್ಪ ಮೊಯ್ಲಿ ಅವರನ್ನು ಕೂರಿಸಲಾಯಿತು. ಆಗ ಕೃಷ್ಣ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಯೋಗ ಕೂಡಿ ಬಂದಿದ್ದರೂ ಪರಿಸ್ಥಿತಿ ಸರಿಯಾಗಿಲ್ಲದ್ದರಿಂದ ಅದರಿಂದ ಹಿಂದೆ ಸರಿಯಬೇಕಾಯಿತು.

ನಿಜಲಿಂಗಪ್ಪ ಜತೆ ತಿಕ್ಕಾಟ :
ರಾಜ್ಯ ಕಂಡ ವರ್ಣರಂಜಿತ ರಾಜಕಾರಣಿ ಎಸ್‌‍.ಎಂ.ಕೃಷ್ಣ. ಪ್ರತಿಪಕ್ಷದವರನ್ನು ಟೀಕಿಸುವಾಗಲೂ ಹದ್ದು ಮೀರಿ ವರ್ತಿಸಿದವರಲ್ಲ. ವೈಯಕ್ತಿಕ ಟೀಕೆ, ಟಿಪ್ಪಣೆ ಮಾಡಿದವರಲ್ಲ. ಹಾಗಂತ ರಾಜಕೀಯ ತತ್ವ, ಸಿದ್ಧಾಂತಗಳಲ್ಲಿ ಎಂದೂ ರಾಜಿಯಾದವರೂ ಅಲ್ಲ. ಜನಪರ ಯೋಜನೆಗಳಲ್ಲಿ ಲೋಪ ಕಂಡು ಬಂದರೆ ಎಸ್‌‍.ನಿಜಲಿಂಗಪ್ಪ ಅವರೊಂದಿಗೂ ಜಗಳವಾಡಿದ್ದಿದೆ. ನಿಜಲಿಂಗಪ್ಪ ಅವರು ನನ್ನ ತಂದೆಗಿಂತಲೂ ಮಿಗಿಲಾದವರು. ರಾಜಕೀಯದಲ್ಲಿ ಅವರಿಂದ ಸಾಕಷ್ಟು ಕಲಿತಿದ್ದೇನೆ. ಆದರೆ, ನನ್ನ ಹಾಗೂ ಅವರ ಗುರಿಗಳು ವಿರುದ್ಧ ದಿಕ್ಕಿನಲ್ಲಿದ್ದವು ಎನ್ನುತ್ತಿದ್ದರು ಕೃಷ್ಣ ಅವರು.

ನಿಜಲಿಂಗಪ್ಪ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗಿತ್ತು. ಆಗ ಪ್ರತಿಪಕ್ಷ ಸ್ಥಾನದಲ್ಲಿ ಎಸ್‌‍.ಶಿವಪ್ಪ ಇದ್ದರು. ಸದನದಲ್ಲಿದ್ದ ಕೃಷ್ಣ ಅವರು ಎದ್ದು ನಿಂತು, ಯಾರಿಗೂ ಯಾವ ಸ್ಥಾನವೂ ಶಾಶ್ವತವಲ್ಲ. ಅದಕ್ಕೆ ನಾನು, ನೀವೂ ಹೊರತಾಗಿಲ್ಲ. ಸ್ಥಾನಗಳು ಅದಲು ಬದಲಾಗುವುದು ಸಹಜ ಎಂದಾಗ, ನಿಜಲಿಂಗಪ್ಪ ಅವರು ಉತ್ತರಿಸುತ್ತ ನನ್ನ ಗೆಳೆಯ ಕೃಷ್ಣ ಹಗಲುಗನಸು ಕಾಣುವವ. ಅವನಿಗೆ ಒಳ್ಳೆಯದಾಗಲಿ ಎಂದು ಹರಿಸಿದ್ದರು!
ಕಾಕತಾಳಿಯವೋ ಏನೋ ಮುಂದಿನ 10 ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿತ್ತು. 1972ರಲ್ಲಿ ಕೃಷ್ಣ ಅವರು ವಾಣಿಜ್ಯ ಇಲಾಖೆಯ ಹೊಣೆ ಹೊತ್ತಿದ್ದರು. ಅಷ್ಟೊತ್ತಿಗೆ ನಿಜಲಿಂಗಪ್ಪ ಅವರು ರಾಜಕೀಯದಿಂದ ನೇಪತ್ಯಕ್ಕೆ ಸರಿದಿದ್ದರು. 1977ರವರೆಗೂ ಕೃಷ್ಣ ವಾಣಿಜ್ಯ ಇಲಾಖೆಯ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿದರು. ಆದರೆ, 1978ರ ವೇಳೆಗೆ ಕಾಂಗ್ರೆಸ್‌‍ ಇಬ್ಭಾಗವಾಗಿ ಪರಿಸ್ಥಿತಿ ಹದಗೆಟ್ಟಿದ್ದರಿಂದ ಆಗ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ.

ಸೋಲು-ಗೆಲವಿನ ರುಚಿ :
1994ರಲ್ಲಿ ಮದ್ದೂರು ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಸೋತರು. ಎರಡು ವರ್ಷಗಳ ಅಂತರದಲ್ಲಿ ಅಂದರೆ 1996ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿ ಹಿರಿಯರ ಮನೆ ಸೇರಿದರು. 1998ರ ಹೊತ್ತಿಗೆ ಸೋನಿಯಾ ಗಾಂಧಿ ಕಾಂಗ್ರೆಸ್‌‍ ನೇತೃತ್ವ ವಹಿಸಿಕೊಂಡರು. ಕೃಷ್ಣ ಅವರ ರಾಜಕೀಯ ಮುತ್ಸದ್ಧಿತನ, ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಮನೋಭಾವನೆ ಅರಿತ ಸೋನಿಯಾ 1999ರಲ್ಲಿ ಕೆಪಿಸಿಸಿ ಅಧ್ಯಕ್ಷ ಹೊಣೆಗಾರಿಕೆ ವಹಿಸಿದರು.

ಅಲ್ಲದೇ ಅದೇ ಸಂದರ್ಭದಲ್ಲಿ ಎದುರಾದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌‍ ಜಯ ಗಳಿಸಿ ಎಸ್‌‍.ಎಂ.ಕೃಷ್ಣ ಮುಖ್ಯಮಂತ್ರಿ ಹ್ದುೆಗೇರಿದರು. ಇದೇ ಸಂದರ್ಭದಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಬಳ್ಳಾರಿ ಹಾಗೂ ಅಮೇಥಿಯಲ್ಲಿ ಸ್ಪರ್ಧಿಸಿದ್ದ ಸೋನಿಯಾ ಎರಡೂ ಕಡೆ ಗೆಲವು ಸಾಧಿಸಿದ್ದು ಈಗ ಇತಿಹಾಸ.

RELATED ARTICLES

Latest News