ಬೆಂಗಳೂರು,ಆ.11– ರಾಜ್ಯದಲ್ಲಿ ಸಾರ್ಟ್ ಮೀಟರ್ ಅಳವಡಿಕೆ ಸಂಬಂಧ ದರಪಟ್ಟಿಯಲ್ಲಿ ವ್ಯತ್ಯಾಸವಾಗಿರುವ ಕುರಿತು ಪ್ರತಿಪಕ್ಷಗಳ ಸದಸ್ಯರ ನಡುವೆ ಮೇಲನೆಯಲ್ಲಿ ಕೆಲಹೊತ್ತು ತೀವ್ರ ಮಾತಿನ ಚಕಮಕಿ , ಗದ್ದಲ ನಡೆಯಿತು.ಕೊನೆಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಧ್ಯಪ್ರವೇಶಿಸಿ, ಇದೇ ರೀತಿ ಸದಸ್ಯರು ನಡೆದುಕೊಂಡರೆ ಕಲಾಪವನ್ನು ಮುಂದೂಡಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟ ನಂತರ ಪರಿಸ್ಥಿತಿ ತಿಳಿಗೊಂಡಿತು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಸದಸ್ಯ ಸಿ.ಟಿ.ರವಿ ಅವರು ಸಾರ್ಟ್ ಮೀಟರ್ ದರಪಟ್ಟಿ ವ್ಯತ್ಯಾಸದ ಬಗ್ಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರನ್ನು ಪ್ರಶ್ನೆ ಮಾಡಿದ್ದರು.ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಸಾರ್ಟ್ ಮೀಟರ್ ದರ ನಮ ರಾಜ್ಯದಲ್ಲಿ ಹೆಚ್ಚಾಗಿದೆ. ಇದಕ್ಕೆ ಕಾರಣವಾದರೂ ಏನು?, ರಾಜಸ್ಥಾನ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಕಡಿಮೆ ದರಕ್ಕೆ ವಿತರಣೆ ಮಾಡುತ್ತಿದ್ದಾರೆ. ಅಲ್ಲಿ ಮಾತ್ರ ಸಾರ್ಟ್ ಮೀಟರ್, ನಮಲ್ಲಿ ಮಾತ್ರ ಬಂಗಾರದ ಮೀಟರ್ ಕೊಡುತ್ತಿದ್ದೀರ ಎಂದು ಪ್ರಶ್ನಿಸಿದರು.
ಒಂದು ಹಂತದಲ್ಲಿ ಸಚಿವರು ಉತ್ತರಿಸುತ್ತಿದ್ದ ವೇಳೆ ರವಿ ಅವರು, ಬೇರೆ ರಾಜ್ಯಗಳಲ್ಲಿ ದರಪಟ್ಟಿ ಕಡಿಮೆ ಇರುವಾಗ ನಮ ರಾಜ್ಯದಲ್ಲಿ ಮಾತ್ರ ಹೆಚ್ಚಿನ ದರ ಏಕೆ?, ನೀವೇನು ದರೋಡೆ ಮಾಡಲು ಲೈಸೆನ್‌್ಸ ಕೊಟ್ಟಿದ್ದೀರ?, ಇದು ಹಗಲು ದರೋಡೆ ಅಲ್ಲವೇ? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಸದಸ್ಯರ ಈ ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು, ಮೊದಲು ನೀವು ಬಳಸಿರುವ ಪದವನ್ನು ಹಿಂಪಡೆದುಕೊಳ್ಳಿ. ಯಾರು ದರೋಡೆ ಮಾಡಿದ್ದಾರೆ?, ನೀವು ದರೋಡೆ ಮಾಡಿಕೊಂಡೇ ಆ ಕಡೆ ಕುಳಿತಿದ್ದೀರಿ. ಬಳಸುವ ಪದ ಸರಿಯಾಗಿರಲಿ ಎಂದು ಸಭಾನಾಯಕ ಬೋಸರಾಜು, ಮುಖ್ಯ ಸಚೇತಕ ಸಲೀಂ, ಸದಸ್ಯರಾದ ಐವಾನ್ ಡಿಸೋಜ, ಎಂ.ನಾಗರಾಜು ಮತ್ತಿತರರು ಆಕ್ಷೇಪಿಸಿದರು.
ಈ ಹಂತದಲ್ಲಿ ರವಿ ಪರವಾಗಿ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ರವಿಕುಮಾರ್ ಮತ್ತಿತರರು ಇದರಲ್ಲಿ ದೊಡ್ಡ ಮಟ್ಟದ ಅವ್ಯವಹಾರವಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಇದರ ದರ ಹೆಚ್ಚಾಗಿದೆ. ಅದರ ಬಗ್ಗೆ ತನಿಖೆ ನಡೆಯಬೇಕೆಂದು ಒತ್ತಾಯಿಸಿದರು.ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ಗದ್ದಲ ಉಂಟಾಯಿತು.
ಆಗ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಸಾರ್ಟ್ ಮೀಟರ್ ಯೋಜನೆಯನ್ನು ಆರ್‌ಡಿಎಸ್‌ಎಸ್ ಅಡಿ ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರವೇ ನಿರ್ದೇಶನ ನೀಡಿತ್ತು. ಇದರ ಯೋಜನೆಯಡಿ ರಾಜ್ಯಕ್ಕೆ 3 ಲಕ್ಷ ಕೋಟಿ ರೂ. ಅನುದಾನ ಬಂದಿತ್ತು. ಕೆಲವು ತಾಂತ್ರಿಕ ಕಾರಣಗಳಿಂದ ಇದನ್ನು ಅಳವಡಿಸಿಕೊಳ್ಳಲು ವಿಳಂಬವಾಗಿದ್ದರಿಂದ ಯೋಜನೆ ನೆನೆಗುದಿಗೆ ಬಿದ್ದಿತು.
ನಮಗೆ ಗ್ರಾಮ ಪಂಚಾಯಿತಿಗಳಿಂದ 10 ಸಾವಿರ ಕೋಟಿ ರೂ. ಬಾಕಿ ಬರಬೇಕಿತ್ತು. ಆದರೆ ಅನೇಕ ಪಂಚಾಯಿತಿಗಳು ನಷ್ಟದಲ್ಲಿರುವ ಕಾರಣ ನಾವು ಎಸ್ಕಾಂ ವತಿಯಿಂದಲೇ 5 ಸಾವಿರ ಕೋಟಿ ರೂ. ಸಾಲ ಪಡೆದು ತೀರಿಸಿದ್ದೇವೆ. ಎಲ್ಲವೂ ನಿಯಮಾವಳಿ ಪ್ರಕಾರವೇ ನಡೆಯುತ್ತಿರುವುದರಿಂದ ಇದರಲ್ಲಿ ಅಕ್ರಮ ನಡೆಯಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಆಗ ಕಾಂಗ್ರೆಸ್‌ನ ಎಂ.ನಾಗರಾಜು ಅವರು, ಈ ಪ್ರಕರಣವು ನ್ಯಾಯಾಲಯದಲ್ಲಿದೆ. ಇದರ ಬಗ್ಗೆ ಚರ್ಚೆ ಮಾಡುವುದರಿಂದ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಹೇಳಿದರು.
- ರಕ್ತದ ಕ್ಯಾನ್ಸರ್ ರೋಗಿಗಳಿಗೆ ಆಶಾಕಿರಣವಾದ “ಕಾರ್ ಟಿ-ಸೆಲ್ ಥೆರಪಿ”: ಕಿರಣ್ ಮಂಜುಂದಾರ್ ಶಾ
- ಕೆ.ಎನ್.ರಾಜಣ್ಣ ತಲೆದಂಡ : ಸಚಿವ ಸ್ಥಾನದ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು
- ಸಚಿವ ಶಿವರಾಜ್ ತಂಗಡಗಿ ವಿರುದ್ಧ ಸ್ಪೀಕರ್ ಖಾದರ್ ಗರಂ
- ಸ್ಮಾರ್ಟ್ ಮೀಟರ್ ಅವ್ಯವಹಾರ : ಮೇಲ್ಮನೆಯಲ್ಲಿ ಗದ್ದಲ-ಕೋಲಾಹಲ
- ಗೋ ಹತ್ಯೆಗೈದು ವಿಕೃತಿ ಮೆರೆದ ಕಿಡಿಗೇಡಿಗಳು