Friday, November 22, 2024
Homeರಾಷ್ಟ್ರೀಯ | Nationalರಾಮನ ಅಸ್ಥಿತ್ವ ಪ್ರಶ್ನಿಸಿದವರು ರಾಮಮಂದಿರಕ್ಕೆ ಭೇಟಿ ನೀಡುತ್ತಿರುವುದೇಕೆ..? : ಸ್ಮೃತಿ ಇರಾನಿ

ರಾಮನ ಅಸ್ಥಿತ್ವ ಪ್ರಶ್ನಿಸಿದವರು ರಾಮಮಂದಿರಕ್ಕೆ ಭೇಟಿ ನೀಡುತ್ತಿರುವುದೇಕೆ..? : ಸ್ಮೃತಿ ಇರಾನಿ

ಲಕ್ನೋ,ಏ.27- ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಲು ನಿರ್ಧರಿಸಿರುವ ರಾಹುಲ್‌ಗಾಂಧಿ ವಿರುದ್ಧ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದಾರೆ. ರಾಮನ ಅಸ್ಥಿತ್ವವನ್ನು ಪ್ರಶ್ನಿಸುವವರು ಈಗ ಕೇವಲ ಮತ ಯಾಚನೆ ಉದ್ದೇಶದಿಂದ ರಾಮಮಂದಿರಕ್ಕೆ ಭೇಟಿ ನೀಡುತ್ತಿರುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.

ಅಮೇಥಿ ಭೇಟಿಗೂ ಮುನ್ನ ರಾಹುಲ್‌ಗಾಂಧಿ ರಾಮಮಂದಿರಕ್ಕೆ ಭೇಟಿ ನೀಡಲು ನಿರ್ಧರಿಸಿರುವುದರ ವಿರುದ್ಧ ವಾಗ್ದಾಳಿ ನಡೆಸಿರುವ ಅವರು ರಾಮಲಲ್ಲಾನ ಪ್ರತಿಷ್ಠಾಪನಾ ಸಮಾರಂಭದ ಆಹ್ವಾನವನ್ನು ತಿರಸ್ಕರಿಸಿದ್ದ ನಿಮಗೆ ಈಗ ದೇವಾಲಯಕ್ಕೆ ಭೇಟಿ ನೀಡುವುದರ ಅವಶ್ಯಕತೆ ಏನಿದೆ ಎಂದಿದ್ದಾರೆ.

ಅಮೇಥಿಯೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿರುವ ಬಗ್ಗೆ ಮಾತನಾಡುವ ರಾಹುಲ್‌ಗಾಂಧಿ ಅವರು ಚುನಾವಣೆಗೆ ಬಂದಾಗ ವಯನಾಡ್‌ ತನ್ನ ಮನೆ ಎಂದು ಹೇಳಿಕೊಳ್ಳುತ್ತಾರೆ ಎಂದು ಹೇಳಿದರು.

ಅವರು ಇಲ್ಲಿ (ಅಮೇಥಿಯಲ್ಲಿ) ಸಂಬಂಧಗಳ ಬಗ್ಗೆ ಮಾತನಾಡಿದರು ಮತ್ತು ಅವರು ವಯನಾಡಿಗೆ ಹೋದರು. ಅಲ್ಲಿ ನಾಮಪತ್ರ ಸಲ್ಲಿಸುವಾಗ ಅವರು (ರಾಹುಲ್‌ ಗಾಂಧಿ) ವಯನಾಡನ್ನು ತನ್ನ ಮನೆ ಎಂದು ಘೋಷಿಸಿದರು, ಜನರು ಬಣ್ಣ ಬದಲಾಯಿಸುವುದನ್ನು ನಾವು ನೋಡಿದ್ದೇವೆ, ಆದರೆ ಮೊದಲ ಬಾರಿಗೆ ಕುಟುಂಬವನ್ನು ಬದಲಾಯಿಸುವುದನ್ನು ನಾವು ನೋಡಿದ್ದೇವೆ. ಮೇ 25 ರಂದು ಕಮಲಕ್ಕೆ (ಬಿಜೆಪಿ ಪಕ್ಷದ ಚಿಹ್ನೆ) ನಿಮ್ಮ ಒಂದು ಮತವು ಉಚಿತ ಪಡಿತರಕ್ಕೆ ಕಾರಣವಾಗುತ್ತದೆ ಎಂದು ನಿಮಗೆಲ್ಲರಿಗೂ ತಿಳಿದಿದೆ ಎಂದಿದ್ದಾರೆ.

RELATED ARTICLES

Latest News