ಬೆಂಗಳೂರು, ಜ.6- ಐರ್ಲೆಂಡ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಸೀಮಿತ ನಾಯಕಿ ಹರ್ಮನ್ ಪ್ರೀತ್ ಸಿಂಗ್ ಗೆ ಬಿಸಿಸಿಐ ವಿಶ್ರಾಂತಿ ನೀಡಿದ್ದು, ಆರ್ ಸಿಬಿ ನಾಯಕಿ ಸತಿ ಮಂಧಾನಾ ಅವರು ತಂಡವನ್ನು ಮುನ್ನಡೆಸಲಿದ್ದಾರೆ.
ಸ್ಟಾರ್ ಆಲ್ ರೌಂಡರ್ ದೀಪ್ತಿ ಶರ್ಮಾ ಅವರಿಗೆ ಉಪನಾಯಕಿಯಾಗಿ ಸತಿ ಬಲವಾಗಿದ್ದರೆ, ವೇಗಿ ರೇಣುಕಾಸಿಂಗ್ ಠಾಕೂರ್ ಗೆ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ವೆಸ್ಟ್ ಇಂಡೀಸ್ ಸರಣಿಯಲ್ಲಿ 3 ಪಂದ್ಯಗಳಿಂದ 44.66 ಸರಾಸರಿಯಲ್ಲಿ 134 ರನ್ ಗಳಿಸಿದ್ದ ಯುವ ಪ್ರತಿಭೆ ಪತ್ರಿಕಾ ರಾವಲ್ ಹಾಗೂ ತೇಜಲ್ ಹಸಬ್ನಿಸ್ , ಆಲ್ ರೌಂಡರ್ರ್ವಾ ಬಿಸ್ಟ್ ಅವರಿಗೆ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಸಯ್ಯಾಲಿ ಸತ್ತಗರ ಅವರಿಗೆ ಚೊಚ್ಚಲ ಕರೆ ನೀಡಲಾಗಿದೆ.
ಜನವರಿ 10ರಿಂದ ಸರಣಿಯು ಆರಂಭಗೊಳ್ಳಲಿದ್ದು ಎಲ್ಲಾ ಪಂದ್ಯಗಳು ರಾಜ್ ಕೋಟ್ ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ:
ಸತಿ ಮಂಧಾನಾ(ನಾಯಕಿ), ದೀಪ್ತಿ ಶರ್ಮಾ (ಉಪನಾಯಕಿ), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ಜೆಮಿಮಾ ರಾಡ್ರಿಗಸ್, ಉಮಾ ಚೆಟ್ರಿ (ವಿಕೆಟ್ ಕೀಪರ್), ರಿಚಾ ಘೋಷ್ (ವಿಕೆಟ್ ಕೀಪರ್), ತೇಜಲ್ ಹಸಬ್ನಿಸ್, ರ್ವಾ ಬಿಸ್ಟ್ , ಮಿನ್ನು ಮಣಿ, ಪ್ರಿಯಾ ಮಿಶ್ರಾ, ತನುಜಾ ಕನ್ವೆರ್, ಟೈಟಾಸ್ ಸಾಧು, ಸೈಮಾ ಠಾಕೋರ್, ಸಯಾಲಿ ಸತ್ಘರೆ.