Monday, April 28, 2025
Homeರಾಷ್ಟ್ರೀಯ | Nationalಕಾಶ್ಮೀರದ ಕುಪ್ಪಾರಾ ಜಿಲ್ಲೆಯಲ್ಲಿ ಸಾಮಾಜಿಕ ಕಾರ್ಯಕರ್ತನ ಗುಂಡಿಕ್ಕಿ ಕೊಂದ ಉಗ್ರರು

ಕಾಶ್ಮೀರದ ಕುಪ್ಪಾರಾ ಜಿಲ್ಲೆಯಲ್ಲಿ ಸಾಮಾಜಿಕ ಕಾರ್ಯಕರ್ತನ ಗುಂಡಿಕ್ಕಿ ಕೊಂದ ಉಗ್ರರು

Social activist Ghulam Rasool Magray shot dead by terrorists in J&K’s Kupwara

ಶ್ರೀನಗರ,ಏ.27-ಜಮ್ಮು ಮತ್ತು ಕಾಶ್ಮೀರದ ಕುಪ್ಪಾರಾ ಜಿಲ್ಲೆಯಲ್ಲಿ ಸಾಮಾಜಿಕ ಕಾರ್ಯಕರ್ತನನ್ನು ಶಂಕಿತ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ. ತಡರಾತ್ರಿ ಕಂಡಿ ಖಾಸ್‌ನಲ್ಲಿರುವ ಅವರ ನಿವಾಸದೊಳಗೆ ಗುಲಾಮ್ ರಸೂಲ್ ಮಗ್ರೆ (45) ಅವರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ ಎಂದು ಅವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನೆಗೆ ನುಗ್ಗಿ ಗುಂಡು ಹಾರಿಸಿ ಭಯೋತ್ಪಾದಕರು ಪರಾರಿಯಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಉಗ್ರರು ಸಾಮಾಜಿಕ ಕಾರ್ಯಕರ್ತನನ್ನು ಏಕೆ ಗುರಿಯಾಗಿಸಿಕೊಂಡರು ಕೊಂದಿದ್ದಾರೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.

RELATED ARTICLES

Latest News