ಬೆಂಗಳೂರು,ಅ.16- ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ರ ಸಂಬಂಧ, ಬೆಂಗಳೂರು ನಗರ ಜಿಲ್ಲೆಯ ನಾಗರೀಕರು ಸಮೀಕ್ಷೆಗೆ ತಮ ಮಾಹಿತಿ ನೋಂದಾಯಿಸಲು ಅನುಕೂಲವಾಗುವಂತೆ ಸಹಾಯವಾಣಿ ಒದಗಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ ಜಗದೀಶ ತಿಳಿಸಿದ್ದಾರೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಳ ಬಗ್ಗೆ ಸಮೀಕ್ಷೆಗೆ ನೋಂದಾಯಿಸಿಕೊಳ್ಳದೇ ಉಳಿದಿರುವ ಬೆಂಗಳೂರು ನಗರ ಜಿಲ್ಲಾ ನಿವಾಸಿಗಳು ಅ18ರೊಳಗಾಗಿ ತಮ ವಿವರಗಳನ್ನು ತಾಲ್ಲೂಕು ಕಚೇರಿ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಾದ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು.
ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿ ಮಧುರಾಜ್ ಸಹಾಯವಾಣಿ ಸಂಖ್ಯೆ-9916681192, ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ ಅಶ್ವಿನಿ- 9019242803, ಬೆಂಗಳೂರುಪೂರ್ವ ತಾಲ್ಲೂಕಿನಲ್ಲಿ ರಾಜೀವ್ -9632339738, ಯಲಹಂಕ ತಾಲ್ಲೂಕಿನಲ್ಲಿ ಶ್ರೇಯಸ್ಸ್ -8660575524, ಆನೇಕಲ್ ತಾಲ್ಲೂಕಿನಲ್ಲಿ ಶಶಿಧರ್ ಮಾಡಿಯಾಳ್ -9449289995, ಹೆಬ್ಬಗೋಡಿ ನಗರಸಭೆಯಲ್ಲಿ ರಾಜೇಂದ್ರ ಬಿ.ಎಲ್- 080-27833736, ಮಾದನಯಕನಹಳ್ಳಿ ನಗರಸಭೆಯ ಆರ್.ಮಂಜುನಾಥ್-7975559204, ಆನೇಕಲ್, ಪುರಸಭೆಯ ಹೆಚ್.ಎ.ಕುಮಾರ-080-27830092, ಅತ್ತಿಬೆಲೆ, ಪುರಸಭೆಯ ದೊಡ್ಡ ಅವಲಪ್ಪ -8296350533, ಬೊಮ್ಮಸಂದ್ರ ಪುರಸಭೆಯ ವೆಂಕಟೇಶಪ್ಪ ಬಿ.ಆರ್-080-27834655, ಚಂದಾಪುರ ಪುರಸಭೆಯ ಮಂಜುನಾಥ-080-27832411, ಜಿಗಣಿ, ಪುರಸಭೆಯ ರಾಜೇಶ್-080-29760400, ಹುಣಸಮಾರನಹಳ್ಳಿ ಪುರಸಭೆಯ ಕಾಂತರಾಜು-080-23901684, ಚಿಕ್ಕಬಾಣಾವರ, ಪುರಸಭೆಯ ಮಂಜುನಾಥ ಎಸ್-8546824510, ಕೋನಪ್ಪನ ಅಗ್ರಹಾರ, ಪುರಸಭೆಯ ಎ.ಮುನಿರಾಜು-080-22441443, ದೊಡ್ಡತೊಗೂರು, ಪಟ್ಟಣ ಪಂಚಾಯಿತಿಯ ರಾಜೇಶ್ ಅವರನ್ನು ಸಹಾಯವಾಣಿ ಸಂಖ್ಯೆ -080-22111177ರ ಮೂಲಕ ಸಂಪರ್ಕಿಸಿ ತಮ ಮಾಹಿತಿ ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಕೋರಿದ್ದಾರೆ.