Saturday, August 23, 2025
Homeರಾಜ್ಯಪಿ-ನಂಬರ್‌ ಜಮೀನುಗಳಿಗೆ ಪೌತಿಖಾತೆ ಮಾಡಲು ತಂತ್ರಾಂಶದಲ್ಲಿ ಅವಕಾಶ : ಸಚಿವ ಕೃಷ್ಣಬೈರೇಗೌಡ

ಪಿ-ನಂಬರ್‌ ಜಮೀನುಗಳಿಗೆ ಪೌತಿಖಾತೆ ಮಾಡಲು ತಂತ್ರಾಂಶದಲ್ಲಿ ಅವಕಾಶ : ಸಚಿವ ಕೃಷ್ಣಬೈರೇಗೌಡ

Software allows for P-numbered lands to be registered: Minister Krishna Byre Gowda

ಬೆಂಗಳೂರು, ಆ.23-ಪಿ-ನಂಬರ್‌ ಜಮೀನುಗಳಿಗೆ ಸಂಬಂಧಿಸಿದಂತೆ ಪೌತಿಖಾತೆ ಮಾಡಲು ತಂತ್ರಾಂಶದಲ್ಲಿ ಅವಕಾಶವಿದ್ದು, ಈ ಜಮೀನುಗಳಲ್ಲಿ ಕ್ರಯ, ವಿಭಾಗ, ದಾನಪತ್ರ, ಮರಣ ಶಾನ ಮಾಡಲು ಅವಕಾಶವಿರುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ವಿಧಾನಸಭೆಗೆ ತಿಳಿಸಿದ್ದಾರೆ.

ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿರುವ ಸಚಿವರು, ಕರ್ನಾಟಕ ಭೂಕಂದಾಯ ಅಧಿನಿಯಮದ ಕಲಂ 128ರಲ್ಲಿ ಯಾರೇ ವ್ಯಕ್ತಿಯು ಭೂಮಿಗೆ ಸಂಬಂಧಿಸಿದಂತೆ ಅವನು ಆರ್ಜಿಸಿದ ಪಾಲುಗಾರಿಕೆಯ ಹಕ್ಕನ್ನು ಈ ಉಪ ಪ್ರಕರಣದ ಮೇರೆಗೆ ವರದಿ ಮಾಡಿದಾಗ ಆ ವರದಿಯ ಜೊತೆಗೆ, ಅಂಥ ಭೂಮಿಯ ಅಳತೆಗಳನ್ನು ಮತ್ತು ಎಲ್ಲೆಗಳನ್ನು ತೋರಿಸುವ ನಕ್ಷೆಯನ್ನು ಹಾಗೂ ಇತರ ಗೊತ್ತುಪಡಿಸಿದ ವಿವರಗಳನ್ನು ಲಗತ್ತಿಸಬೇಕು ಎಂದು ಹೇಳಿದ್ದಾರೆ.

ವ್ಯಕ್ತಿಯು ಲೈಸೆನ್‌್ಸ ಹೊಂದಿದ ಮೋಜಣಿದಾರನಿಂದ ನಕ್ಷೆಯನ್ನು ತಯಾರಿಸಿಕೊಳ್ಳತಕ್ಕದ್ದು ಎಂದಿರುತ್ತದೆ. ಈ ನಕ್ಷೆಯನ್ನು ಪಿ-ನಂಬರ್‌ನಲ್ಲಿ ತಯಾರಿಸಲು ಅವಕಾಶವಿರುವುದಿಲ್ಲ. ಆದರೆ, ನಿಯಮಾನುಸಾರ 11-ಇ ನಕ್ಷೆ ಪಡೆದು ಖಾತೆ ಬದಲಾವಣೆ ಮಾಡಲು ಕ್ರಮ ವಹಿಸಬೇಕಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

RELATED ARTICLES

Latest News