Saturday, April 26, 2025
Homeಬೆಂಗಳೂರುಪ್ರೀತಿಸುವಂತೆ ವಿದ್ಯಾರ್ಥಿನಿಗೆ ಒತ್ತಾಯಿಸಿ ಚಾಕು ಇರಿದ ಸಾಫ್ಟ್ ವೇರ್ ಎಂಜಿನಿಯರ್ ಅರೆಸ್ಟ್

ಪ್ರೀತಿಸುವಂತೆ ವಿದ್ಯಾರ್ಥಿನಿಗೆ ಒತ್ತಾಯಿಸಿ ಚಾಕು ಇರಿದ ಸಾಫ್ಟ್ ವೇರ್ ಎಂಜಿನಿಯರ್ ಅರೆಸ್ಟ್

Software engineer who forced a student to love him and stabbed

ಬೆಂಗಳೂರು, ಏ.26– ಪ್ರೀತಿಸುವಂತೆ ಕಾಲೇಜು ವಿದ್ಯಾರ್ಥಿನಿಗೆ ಒತ್ತಾಯಿಸಿ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಸಾಫ್ಟ್ ವೇರ್ ಇಂಜಿನಿಯರೊಬ್ಬರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜೆಸಿನಗರದ ಕುರುಬರಹಳ್ಳಿ ನಿವಾಸಿ ಶ್ರೀಕಾಂತ್ (43) ಬಂಧಿತ ಆರೋಪಿ. ಈತನಿಗೆ ಮದುವೆಯಾಗಿದ್ದು ಮಕ್ಕಳಿವೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ. ಕಾಲೇಜು ವಿದ್ಯಾರ್ಥಿನಿ ಪೋಷಕರು ಈ ಹಿಂದೆ ಇವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಈಗ ಬೇರೆ ಕಡೆ ನೆಲೆಸಿದ್ದಾರೆ.

ಪ್ರೀತಿಸುವಂತೆ ಹಿಂದೆ ಬಿದ್ದಿದ್ದ ಈತ ವಿದ್ಯಾರ್ಥಿನಿ ಎಲ್ಲೆಲ್ಲಿ ಹೋಗುತ್ತಾರೆ ಅಲ್ಲೆಲ್ಲ ಹೋಗುತ್ತಿದ್ದ. ಇತ್ತೀಚೆಗೆ ಈಕೆ ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಈ ವಿದ್ಯಾರ್ಥಿನಿ ತನ್ನ ಸ್ನೇಹಿತನ ಜೊತೆ ಮಾತನಾಡುತ್ತಾ ನಿಂತಿದ್ದಳು.

ಆಗ ಅಲ್ಲಿಗೆ ಬಂದ ಈತ ಜಗಳ ತೆಗೆದು ಕೈಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಈ ಬಗ್ಗೆ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪರಿಶೀಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

RELATED ARTICLES

Latest News