ಬೆಂಗಳೂರು, ಫೆ.6- ಕೆಆರ್‍ಪುರಂನಲ್ಲಿ ನಡೆದಿದ್ದ ಗೃಹಿಣಿ ಕೊಲೆ ಪ್ರಕರಣ ತಿರುವು ಪಡೆದುಕೊಂಡಿದ್ದು, ಅಪ್ಪ- ಮಗ ಸೇರಿ ಕೊಲೆ ಮಾಡಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಜಸ್ಟೀಸ್ ಬೀಮಯ್ಯ ಲೇಔಟ್, ದರ್ಗಾ ಬಳಿಯ ಮನೆಯೊಂದರಲ್ಲಿ ನೇತ್ರಾವತಿ ಅವರು ಪತಿ ಚಂದ್ರಪ್ಪ ಹಾಗೂ 17 ವರ್ಷದ ಮಗನೊಂದಿಗೆ ವಾಸವಾಗಿದ್ದರು.
ಪತ್ನಿಯ ನಡತೆಯ ಬಗ್ಗೆ ಗಂಡ ಅನುಮಾನ ವ್ಯಕ್ತಪಡಿಸಿ ಆಗಾಗ್ಗೆ ಗಲಾಟೆ ಮಾಡುತ್ತಿದ್ದನು. ಇದೇ ವಿಚಾರವಾಗಿ ಹಲವಾರು ಬಾರಿ ಮನೆಯಲ್ಲಿ ಗಲಾಟೆಯೂ ನಡೆದಿತ್ತು. ಹೆತ್ತ ತಾಯಿಯ ನಡತೆಯ ವಿಷಯವಾಗಿ ತಂದೆಯಿಂದ ಪ್ರಚೋದನೆಗೊಂಡ ಮಗ ಫೆ. 2ರಂದು ತಂದೆಯೊಂದಿಗೆ ಸೇರಿಕೊಂಡು ರಾಡಿನಿಂದ ನೇತ್ರಾವತಿ(40) ಅವರನ್ನು ಕೊಲೆ ಮಾಡಿರುತ್ತಾರೆ.
ನೇತ್ರಾವತಿ ಮೃತಪಟ್ಟಿ ರುವುದನ್ನು ತಿಳಿದು ತಂದೆಯನ್ನು ರಕ್ಷಿಸಲು ಮಗ ತಾನೆ ರಾಡಿನಿಂದ ಹೊಡೆದು ಕೊಲೆ ಮಾಡಿದ್ದಾಗಿ ಪೊಲೀಸರಿಗೆ ಶರಣಾಗಿದ್ದನು. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ ಕೊಲೆಗೆ ಬಳಸಲಾಗಿದ್ದ ರಾಡಿನ ಮೇಲೆ ಎರಡು ರೀತಿಯ ಫಿಂಗರ್ ಪ್ರಿಂಟ್‍ಗಳು ಪತ್ತೆಯಾಗಿದ್ದು ಕಂಡು ಆಶ್ಚರ್ಯಗೊಂಡರು. ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿದ ಪೊಲೀಸರು ನೇತ್ರಾವತಿ ಅವರ ಪತಿ ಚಂದ್ರಪ್ಪನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕೊಲೆಯ ಸತ್ಯಂಶ ಬಯಲಾಗಿದೆ.
ಅಕ್ರಮ ಸಂಬಂಧಕ್ಕೆ ಕೊಲೆ…!
ಚಂದ್ರಪ್ಪ ಅವರನ್ನು ತೀವ್ರ ವಿಚಾರಣೆ ನಡೆಸಿದಾಗ ಪತ್ನಿ ನೇತ್ರಾಳಿಗೆ ಅಕ್ರಮ ಸಂಬಂಧದ ಜೊತೆಗೆ ಕುಡಿತದ ಚಟವಿತ್ತು. ಕೆಲವೊಮ್ಮೆ ಮೂರ್ನಾಲ್ಕು ದಿನಗಳ ಕಾಲ ಮನೆಗೆ ಬರುತ್ತಿರಲಿಲ್ಲ. ಮನೆಯಲ್ಲಿ ಮಗ, ನಾನು ಊಟವಿಲ್ಲದೆ ಉಪವಾಸವಿರು ತ್ತಿದ್ದೆವು. ಈ ಬಗ್ಗೆ ಪ್ರಶ್ನಿಸಿದರೆ ನಮ್ಮ ಜೊತೆಯೇ ಬಾಯಿ ಜೋರು ಮಾಡಿ ಜಗಳ ಮಾಡುತ್ತಿದ್ದಳು. ಹಾಗಾಗಿ ಮಗನ ಜೊತೆ ಸೇರಿಕೊಂಡು ಕೊಲೆ ಮಾಡಲು ನಿರ್ಧಾರ ಮಾಡಿದ್ದಾಗಿ ಪೊಲೀಸರ ಮುಂದೆ ಚಂದ್ರಪ್ಪ ತಿಳಿಸಿದ್ದಾರೆ.
ಜೈಲಿಗೆ ಹೋದರೆ ವಿದ್ಯಾಭ್ಯಾಸ ಸಿಗುತ್ತೆ:
ಕೊಲೆ ಬಳಿಕ ಅಪ್ಪ, ಮಗ ಇಬ್ಬರು ಮಾತನಾಡಿಕೊಂಡಿದ್ದು, ಅಪ್ರಾಪ್ತರು ಜೈಲಿಗೆ ಹೋದರೆ ಶಿಕ್ಷೆ ಕಡಿಮೆಯಾಗುತ್ತೆ. ಅಲ್ಲದೆ, ಅವರೇ ವಿದ್ಯಾಭ್ಯಾಸ ಕೊಡಿಸುತ್ತಾರೆ ಎಂದು ಅಪ್ಪನನ್ನು ಮಗ ಮನವೊಲಿಸಿದ್ದ.
ನಾನು ಜೈಲಿನಿಂದ ಹೊರ ಬರುವಷ್ಟರಲ್ಲಿ ನೀನು ಹಣ ಸಂಪಾದಿಸು ಎಂದು ಹೇಳಿ ತಂದೆಯನ್ನು ಹೊರಗೆ ಕಳುಹಿಸಿ ಅಪ್ಪನನ್ನು ರಕ್ಷಿಸಿ ನಂತರ ಆತನೇ ಠಾಣೆಗೆ ಹೋಗಿ ಕೊಲೆ ಮಾಡಿದ್ದಾಗಿ ಶರಣಾಗಿ ದ್ದನು. ಇದೀಗ ಪೊಲೀಸರ ತನಿಖೆ ಯಿಂದಾಗಿ ಅಪ್ಪ ಸಿಕ್ಕಿಬಿದ್ದಿದ್ದಾರೆ.
ನಿವೃತ್ತ ಐಪಿಎಸ್ ಅಧಿಕಾರಿ ಜ್ಯೋತಿ ಪ್ರಕಾಶ್ ಮಿರ್ಜಿಗೆ ಜೆಡಿಎಸ್ ಉಪಾಧ್ಯಕ್ಷ ಸ್ಥಾನ
ಈ ಕಾರ್ಯಾಚರಣೆಯನ್ನು ವೈಟ್‍ಫೀಲ್ಡ್ ವಿಭಾಗದ ಉಪಪೊಲೀಸ್ ಆಯುಕ್ತರಾದ ಡಾ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಆಯುಕ್ತರಾದ ರೀನಾ, ಸುವರ್ಣಾ ಹಾಗೂ ಇನ್ಸ್‍ಪೆಕ್ಟರ್ ಮತ್ತು ಸಿಬ್ಬಂದಿ ಯಶಸ್ವಿಯಾಗಿ ಭೇದಿಸಿದ್ದಾರೆ.