Monday, September 8, 2025
Homeರಾಜ್ಯಸೊನಾಲಿಕಾ ಟ್ರಾಕ್ಟರ್‌ ಸಾರ್ವಕಾಲಿಕ ದಾಖಲೆ ಮಾರಾಟ

ಸೊನಾಲಿಕಾ ಟ್ರಾಕ್ಟರ್‌ ಸಾರ್ವಕಾಲಿಕ ದಾಖಲೆ ಮಾರಾಟ

Sonalika Tractors Records Highest August Sales with 10,932 Units

ಬೆಂಗಳೂರು,ಸೆ.8- ಭಾರತದ ನಂ.1 ಟ್ರಾಕ್ಟರ್‌ ಬ್ರಾಂಡ್‌ ಸೊನಾಲಿಕಾ ಟ್ರಾಕ್ಟರ್ಸ್‌ 2026ರ ಹೊಸ ಮೈಲಿಗಲ್ಲಿನ ಸಾಧನೆ ಮಾಡಿದೆ. ಕಂಪನಿಯು ಆಗಸ್ಟ್‌ ತಿಂಗಳಲ್ಲಿ 10,932 ಟ್ರಾಕ್ಟರ್‌ಗಳ ಒಟ್ಟು ಮಾರಾಟ ದಾಖಲಿಸಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಶೇ.28ರಷ್ಟು ಸದೃಢ ಪ್ರಗತಿ ಸಾಧಿಸಿದೆ.

ಸೊನಾಲಿಕಾ ಟ್ರಾಕ್ಟರ್ಸ್‌ ಮೂರು ವರ್ಷಗಳ ಹಿಂದೆಯೇ ಟ್ರಾಕ್ಟರ್‌ ಬೆಲೆಗಳನ್ನು ಅಧಿಕೃತ ವೆಬ್‌ ಸೈಟ್‌ ನಲ್ಲಿ ಪ್ರಕಟಿಸುವ ಮೂಲಕ ಭಾರತದಲ್ಲಿ ಕೃಷಿ ಇಕೊಸಿಸ್ಟಂನಲ್ಲಿ ಪಾರದರ್ಶಕತೆಯ ಸಂಕೇತವಾಗಿ ಮುಂದುವರಿದಿದೆ.

ತನ್ನ ರೈತ ಕೇಂದ್ರಿತ ತತ್ವಕ್ಕೆ ಪೂರಕವಾಗಿ ಕಂಪನಿಯು ಇತ್ತೀಚೆಗೆ ಟ್ರಾಕ್ಟರ್‌ ಸರ್ವೀಸ್‌‍ ವೆಚ್ಚ ಮತ್ತು ಬಿಡಿಭಾಗಗಳ ಬೆಲೆಯನ್ನು ತನ್ನ ವೆಬ್‌ ಸೈಟ್‌ ನಲ್ಲಿ ಪ್ರಕಟಿಸುವ ಮೂಲಕ ಸಮಗ್ರ ಪರಿಹಾರ ಮತ್ತು ಭಾರತೀಯ ರೈತರನೈಜ ಪಾಲುದಾರನಾಗಿ ತನ್ನ ಸ್ಥಾನ ಗಟ್ಟಿಗೊಳಿಸಿಕೊಂಡಿದೆ.

ಅಸಾಧಾರಣ ಕಾರ್ಯಕ್ಷಮತೆ ಕುರಿತು ಇಂಟರ್ನ್ಯಾಷನಲ್‌ ಟ್ರಾಕ್ಟರ್ಸ್‌ ಲಿಮಿಟೆಡ್‌ ಜಂಟಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ರಾಮನ್‌ ಮಿಟ್ಟಲ್‌, ಱಱಸೊನಾಲಿಕಾದ ಉತ್ತಮ ಉತ್ಪಾದಕತೆ ಮತ್ತು ರೈತರ ವಿಶ್ವಾಸ ಪೂರೈಸುವ ಉದ್ದೇಶಯುಕ್ತ ಪ್ರಯಾಣವು 2026ರ ಹಣಕಾಸು ವರ್ಷದಲ್ಲಿ ಒಟ್ಟಾರೆ 10,932 ಅತ್ಯಂತ ಹೆಚ್ಚು ಟ್ರಾಕ್ಟರ್‌ ಗಳ ಮಾರಾಟದಿಂದ ಮರು ದೃಢೀಕರಣಗೊಂಡಿದೆ. ಈ ಯಶಸ್ಸು ಸ್ಥಳೀಯ ಮಾರುಕಟ್ಟೆಯಲ್ಲಿ ಸದೃಢ ಶೇ.28ರಷ್ಟು ಪ್ರಗತಿಯ ಮೂಲಕ ಶಕ್ತಿಯುತ ಸಾಧನೆಯಂದ ಸ್ಫೂರ್ತಿಗೊಂಡಿದೆ.

RELATED ARTICLES

Latest News