Sunday, October 6, 2024
Homeರಾಷ್ಟ್ರೀಯ | Nationalಸೌರವ್‌ ಗಂಗೂಲಿಗೆ 52ನೇ ಹುಟ್ಟುಹಬ್ಬ ಸಂಭ್ರಮ

ಸೌರವ್‌ ಗಂಗೂಲಿಗೆ 52ನೇ ಹುಟ್ಟುಹಬ್ಬ ಸಂಭ್ರಮ

ನವದೆಹಲಿ,ಜು.8– ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಟೀಮ್‌ ಇಂಡಿಯಾದ ನಾಯಕ ಸೌರವ್‌ ಗಂಗೂಲಿ ಅವರು ಇಂದು ತಮ ಕುಟುಂಬ ಸದಸ್ಯರೊಂದಿಗೆ 52ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.ಬಂಗಾಳದ ಹುಲಿ ಎಂದು ತಮ ಕ್ರಿಕೆಟ್‌ ಜೀವನದಲ್ಲಿ ಹೆಸರಾಗಿರುವ ಸೌರವ್‌ ಗಂಗೂಲಿ ಅವರಿಗೆ ತಮ ಸಮಕಾಲೀನ ಆಟಗಾರರಾದ ಸಚಿನ್‌ ತೆಂಡೂಲ್ಕರ್‌, ರಾಹುಲ್‌ ದ್ರಾವಿಡ್‌, ವಿವಿಎಸ್‌‍ ಲಕ್ಷ್ಮಣ್‌ ಸೇರಿದಂತೆ ಹಲವು ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಶುಭಾಶಯ ತಿಳಿಸಿದ್ದಾರೆ.

ಪ್ರಿನ್‌್ಸ ಆಫ್‌ ಕೋಲ್ಕತ್ತಾ ಎಂದೇ ಕರೆಸಿಕೊಳ್ಳುವ ಸೌರವ್‌ ಗಂಗೂಲಿ ಅವರು ಭಾರತ ಕ್ರಿಕೆಟ್ ತಂಡದಲ್ಲಿ ಕಂಡ ಯಶಸ್ಸಿನ ನಾಯಕರಾಗಿದ್ದು, ತಮ ಕ್ಯಾಪ್ಟನ್ಸಿ ಅಡಿಯಲ್ಲಿ ಯುವರಾಜ್‌ಸಿಂಗ್‌, ಮಹೇಂದ್ರ ಸಿಂಗ್‌ ಧೋನಿ, ಹರ್ಭಜನ್‌ ಸಿಂಗ್‌, ಜಹೀರ್‌ಖಾನ್‌ ರಂತಹ ಪ್ರತಿಭಾವಂತ ಆಟಗಾರರನ್ನು ಬೆಳಕಿಗೆ ತಂದಿದ್ದರು.

2003ರ ವಿಶ್ವಕಪ್‌ ಟೂರ್ನಿಯಲ್ಲಿ ತಮ ಸಾರಥ್ಯದಲ್ಲಿ ತಂಡವನ್ನು ಫೈನಲ್‌ ಹಂತಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದ ಸೌರವ್‌ ಗಂಗೂಲಿ ಅವರು ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡು ಚಾಂಪಿಯನ್‌ ಪಟ್ಟ ಅಲಂಕರಿಸುವ ಅವಕಾಶವನ್ನು ತಪ್ಪಿಸಿಕೊಂಡರು.

ಆದರೆ ತಮ ಗರಡಿಯಲ್ಲಿ ಪಳಗಿದ್ದ ಎಂಎಸ್‌‍ ಧೋನಿ ಸಾರಥ್ಯದಲ್ಲಿ ಭಾರತ ತಂಡವು 2007ರ ಚುಟುಕು ವಿಶ್ವಕಪ್‌ ಹಾಗೂ 2011ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿರುವುದು ಸೌರವ್‌ ಗಂಗೂಲಿಗೆ ನಿಜಕ್ಕೂ ಹೆಮೆಯ ವಿಷಯವಾಗಿದೆ.

1999ರಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡ ಸೌರವ್‌ ಗಂಗೂಲಿ ಹಲವು ಸರಣೀಯ ಸರಣಿಗಳಲ್ಲಿ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ.ಸೌರವ್‌ ಗಂಗೂಲಿ ಅವರು ತಮ ವೃತ್ತಿ ಜೀವನದಲ್ಲಿ 113 ಟೆಸ್ಟ್‌ ಪಂದ್ಯಗಳಿಂದ 7212 ರನ್‌ ಗಳಿಸಿದ್ದು, ಇದರಲ್ಲಿ 16 ಶತಕ ಹಾಗೂ 35 ಅರ್ಧಶತಕ ಹಾಗೂ 311 ಏಕದಿನ ಪಂದ್ಯಗಳಿಂದ 11,365 ರನ್‌ ಗಳಿಸಿದ್ದು , ಇದರಲ್ಲಿ 22 ಶತಕ ಹಾಗೂ 72 ಅರ್ಧಶತಕಗಳು ಸೇರಿವೆ.

RELATED ARTICLES

Latest News