ತರೂಬಾ, ಜೂ.27- ಭಾರೀ ಅಚ್ಚರಿ ಹಾಗೂ ಕುತೂಹಲ ಮೂಡಿಸಿದ್ದ ಟಿ-20 ವಿಶ್ವಕಪ್ ಸೆಮಿ ಫೈನಲ್ಸ್ ನಲ್ಲಿ ಗೆದ್ದು ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ಫೈನಲ್ಗೆ ಭರ್ಜರಿ ಎಂಟ್ರಿ ಕೊಟ್ಟಿದೆ.ಇಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ಥಾನ ಆರಂಭದಲ್ಲೇ ಎಡವಟ್ಟು ಮಾಡಿಕೊಂಡಿತ್ತು.
ಉತ್ತಮ ಫಾರ್ಮ್ನಲ್ಲಿದ್ದ ಆರಂಭಿಕ ಆಟಗಾರ ಗುರ್ಬಾಜ್ ಮೊದಲ ಓವರ್ನಲ್ಲೇ ವಿಕೆಟ್ ಒಪ್ಪಿಸಿ ಹೊರನಡೆದ ನಂತರ ಉಳಿದ ಆಟಗಾರರು ಕೂಡ ಯಾವುದೇ ಪ್ರತಿರೋಧ ತೋರದೆ ಒಬ್ಬರ ನಂತರ ಒಬ್ಬರು ಪೆವಿಲಿಯನ್ ಹಾದಿ ಹಿಡಿದರು.ದಕ್ಷಿಣ ಆಫ್ರಿಕಾದ ವೇಗಿ ಮಾರ್ಕೊ ಜಾನ್ಸನ್ ಮತ್ತು ತಬ್ರೀಜ್ ಶಂಸಿ ಅವರ ಮಾರಕ ದಾಳಿಗೆ ತರಗೆಲೆಗಳಂತೆ ಉದುರಿದ ಆಫ್ಘಾನಿಸ್ತಾನ ಬ್ಯಾಟ್‌್ಸಮನ್ಗಳು ಕೇವಲ 11.5 ಓವರ್ಗಳಲ್ಲಿ ಕೇವಲ 56 ರನ್ ಕಲೆಹಾಕಿ ಆಲೌಟ್ ಆದರು.
ಆಫ್ಘನ್ನ ಯಾವೊಬ್ಬ ಬ್ಯಾಟ್‌್ಸಮನ್ ಎರಡಂಕಿ ತಲುಪಲು ಸಾಧ್ಯವಾಗದೆ ವಿಶ್ವಕಪ್ ಪಂದ್ಯಾವಳಿಯಲ್ಲಿ ಅತಿ ಅಲ್ಪಮೊತ್ತಕ್ಕೆ ಆಲೌಟ್ ಆದ ಅಪಕೀರ್ತಿಗೆ ಆಫ್ಘನ್ ಪಾತ್ರವಾಯಿತು.ಸುಲಭ ಮೊತ್ತವನ್ನು ಬೆನ್ನಟ್ಟಿದ ಹರಿಣಿ ಪಡೆ ಕೂಡ ಎಚ್ಚರಿಕೆಯ ಆಟ ಪ್ರದರ್ಶಿಸಿತು. ಆರಂಭಿಕ ಸ್ಫೋಟಕ ಆಟಗಾರ ಕ್ಲಿಂಟನ್ ಡಿಕಾಕ್ ಕೇವಲ 5 ರನ್ ಗಳಿಸಿ ಔಟಾದರು. ಮತ್ತೊಂದೆಡೆ ಹನ್ಸಿಕ್ಸ್ ಮತ್ತು ನಾಯಕ ಐಡೆನ್ ಮಾಕ್ರಾನ್ (23) ತಾಳೆಯ ಆಟ ಪ್ರದರ್ಶಿಸಿ 11.1 ಓವರ್ಗಳಲ್ಲಿಯೇ ಗುರಿ ಮುಟ್ಟಿ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಬೌಲಿಂಗ್ನಲ್ಲಿ ಮಿಂಚಿದ ದಕ್ಷಿಣ ಆಫ್ರಿಕಾ ಬೌಲರ್ಗಳು ಫೈನಲ್ಗೂ ಮುಂಚೆಯೇ ತಮ ನೈಜ ಆಟ ತೋರಿಸಿದ್ದು, ಈಗ ಭಾರತ ಅಥವಾ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಸಂಕ್ಷಿಪ್ತ ಸ್ಕೋರ್- ಆಫ್ಘಾನಿಸ್ತಾನ: 11.5 ಓವರ್, 56 ರನ್ ಆಲೌಟ್
ದಕ್ಷಿಣ ಆಫ್ರಿಕಾ: 11.1 ಓವರ್, 1 ವಿಕೆಟ್ ನಷ್ಟಕ್ಕೆ 57 ರನ್