Friday, May 30, 2025
Homeಅಂತಾರಾಷ್ಟ್ರೀಯ | Internationalದಕ್ಷಿಣ ಕೊರಿಯಾದ ನೌಕಾಪಡೆಯ ಗಸ್ತು ವಿಮಾನ ಅಪಘಾತ, ನಾಲ್ಕು ಜನ ಸಿಬ್ಬಂದಿ ಸಾವು

ದಕ್ಷಿಣ ಕೊರಿಯಾದ ನೌಕಾಪಡೆಯ ಗಸ್ತು ವಿಮಾನ ಅಪಘಾತ, ನಾಲ್ಕು ಜನ ಸಿಬ್ಬಂದಿ ಸಾವು

South Korean Navy patrol plane crashes in country's south, killing 4

ಸಿಯೋಲ್, ಮೇ.29-ತರಬೇತಿ ಹಾರಾಟದ ಸಮಯದಲ್ಲಿ ನಾಲ್ವರು ಸಿಬ್ಬಂದಿಗಳನ್ನು ಹೊಂದಿದ್ದ ದಕ್ಷಿಣ ಕೊರಿಯಾದ ನೌಕಾಪಡೆಯ ವಿಮಾನವು ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ.

ಪಿ-3 ಗಸ್ತು ವಿಮಾನವು ಆಗ್ನೆಯ ನಗರವಾದ ಪೊಹಾಂಗ್‌ನಲ್ಲಿರುವ ತನ್ನ ನೆಲೆಯಿಂದ ಮಧ್ಯಾಹ್ನ 1:43 ಕ್ಕೆ ಹೊರಟಿತು ಆದರೆ ಸ್ವಲ್ಪ ಸಮಯದಲ್ಲೇ ನೆಲಕ್ಕೆ ಬಿದ್ದಿದೆಎಂದು ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ. ಶೋಧನಾ ಪ್ರಯತ್ನಗಳ ನಡೆಸುತ್ತಿರುವ ನೌಕಾಪಡೆಯ ಅಧಿಕಾರಿ ಜೋ ಯಂಗ್-ಸಾಂಗ್, ದೂರದರ್ಶನದಲ್ಲಿ ಮಾತನಾಡಿ ನಮ್ಮ ಇಬ್ಬರು ಸಿಬ್ಬಂದಿಯ ಶವ ಸಿಕ್ಕಿದೆ ಹತ್ತಿರದ ಆಸ್ಪತ್ರೆಗೆ ವರ್ಗಾಯಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಇತರ ಇಬ್ಬರಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಅವರು ಹೇಳಿದರು. ಅಪಘಾತದ ವೇಳೆ ನೆಲದಲ್ಲಿ ನಾಗರಿಕ ಸಾವುನೋವುಗಳ ಬಗ್ಗೆ ತಕ್ಷಣದ ವರದಿಗಳಿಲ್ಲ. ಅಪಘಾತದ ಕಾರಣವನ್ನು ತನಿಖೆ ಮಾಡಲು ಕಾರ್ಯಪಡೆಯನ್ನು ಸ್ಥಾಪಿಸಲಾಗಿದೆ ಮತ್ತು ಪಿ-3 ವಿಮಾನಗಳ ಎಲ್ಲಾ ಹಾರಾಟಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.

ಪೊಹಾಂಗ್‌ನಲ್ಲಿ ಅಪಾರ್ಟ್‌ ಮೆಂಟ್ ಸಂಕೀರ್ಣದ ಬಳಿಯ ಬೆಟ್ಟದ ಮೇಲೆ ವಿಮಾನ ಬಿದ್ದು ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯ ನಿವಾಸಿಗಳಿಂದ ವರದಿಗಳು ಬಂದ ನಂತರ ರಕ್ಷಣಾ ಕಾರ್ಯಕರ್ತರು ಮತ್ತು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಹೋಗಿ ಬೆಂಕಿ ನಂಧಿಸುವ ಕಾರ್ಯದಲ್ಲಿ ತೊಡಗಿದೆ ಎಂದು ಕಳೆದ ಡಿಸೆಂಬರ್‌ನಲ್ಲಿ, ದಕ್ಷಿಣ ಕೊರಿಯಾದ ಮುವಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೆಜು ಏರ್ ಪ್ರಯಾಣಿಕ ವಿಮಾನ ಅಪಘಾತಕ್ಕೀಡಾಯಿತು, ಅದರಲ್ಲಿದ್ದ 179 ಜನರು ಸಾವನ್ನಪ್ಪಿದರು. ಇದು ದಕ್ಷಿಣ ಕೊರಿಯಾದ ವಾಯುಯಾನ ಇತಿಹಾಸದಲ್ಲಿ ಅತ್ಯಂತ ಮಾರಕ ವಿಪತ್ತುಗಳಲ್ಲಿ ಒಂದಾಗಿದೆ

RELATED ARTICLES

Latest News