ಬೆಂಗಳೂರು, ಆ.11- ಸಂತಾಪ ಸೂಚನೆ ವೇಳೆ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ್ ತಂಗಡಗಿ ಅವರು ವಿಧಾನಸಭೆಯಲ್ಲಿ ಸದಸ್ಯರೊಂದಿಗೆ ಮಾತನಾಡುತ್ತಿರುವುದನ್ನು ಗಮನಿಸಿದ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಗರಂ ಆದರು.
ಸಭಾಧ್ಯರಕ್ಷರು ಮಂಡಿಸಿದ ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡುವಾಗ ತಂಗಡಿಗೆ ಅವರು ಶಾಸಕರೊಬ್ಬರ ಜತೆ ಮಾತನಾಡುತ್ತಿದ್ದರು. ಅದನ್ನು ಗಮನಿಸಿದ ಸಭಾಧ್ಯಕ್ಷರು ಸಂತಾಪ ಸೂಚನೆ ನಡೆಯುತ್ತಿದೆ.
ದುಃಖದ ವಿಚಾರ ಪ್ರಸ್ತಾಪವಾಗುತ್ತಿರುವಾಗ ಸಚಿವರು ಮಾತನಾಡುತ್ತಾ ಕೂತರೆ ಹೇಗೆ ಎಂದು ಪ್ರಶ್ನಸಿದರು. ಅಷ್ಟರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಾರಪ್ಪ ಸಚಿವರ ಆಸನದಲ್ಲಿ ಕೂತುಕೋ ಎಂದು ಕರೆದರು. ಅಷ್ಟರಲ್ಲಿ ತಂಗಡಿ ಅವರು ತಮ ಸ್ಥಾನಕ್ಕೆ ಮರಳಿದರು.
ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಅವರು, ಸಂಸ್ಕೃತಿ ಇಲಾಖೆ ಸಚಿವರು ಎಂದು ಛೇಡಿಸಲು ಮುಂದಾದಾಗ ಮುಖ್ಯಮಂತ್ರಿ ಇಷ್ಟೇ ಎಂದು ತೆರೆ ಎಳೆದರು.