ಬೆಂಗಳೂರು,ಮಾ.19– ಮಧ್ಯೆ ಎದ್ದು ಮಾತನಾಡಿದರೆ ಸದನದಿಂದ ಹೊರ ಹಾಕಬೇಕಾಗುತ್ತದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಜೆಡಿಎಸ್ ಸದಸ್ಯ ಟಿ.ಎ.ಶರವಣ ಅವರಿಗೆ ವಿಧಾನಪರಿಷತ್‌ನಲ್ಲಿ ಎಚ್ಚರಿಕೆ ನೀಡಿದರು.
ಪ್ರಶ್ನೋತ್ತರ ಅವಧಿಯಲ್ಲಿ ಮಧ್ಯಪ್ರವೇಶಿಸಿ ಮಾತನಾಡಲು ಮುಂದಾದಾಗ, ಮಧ್ಯೆ ಎದ್ದು ಮಾತನಾಡಿದರೆ ಸದನದಿಂದ ಹೊರ ಹಾಕಬೇಕಾಗುತ್ತದೆ ಎಂದರು. ಇದಕ್ಕೆ ಶರವಣ ಅವರು ನಾನು ಪ್ರಶ್ನೆ ಕೇಳುವುದಿಲ್ಲ. ಹೊರ ಹೋಗುತ್ತೇನೆ ಎಂದಾಗ, ಹೊರ ಹೋಗಿ! ಎಂದರು.