Thursday, December 11, 2025
Homeಕ್ರೀಡಾ ಸುದ್ದಿಜನಪ್ರಿಯತೆ ಕಳೆದು ಕೊಳ್ಳುತ್ತಿದೆಯೇ ಆರ್‌ಸಿಬಿ..?

ಜನಪ್ರಿಯತೆ ಕಳೆದು ಕೊಳ್ಳುತ್ತಿದೆಯೇ ಆರ್‌ಸಿಬಿ..?

Is RCB losing popularity?

ನವದೆಹಲಿ, ಡಿ.10- ವಿಶ್ವದ ಅತಿ ಶ್ರೀಮಂತ ಕ್ರೀಡಾ ಲೀಗ್‌ಗಳಲ್ಲಿ ಒಂದು ಎಂಬ ಖ್ಯಾತಿ ಪಡೆದಿರುವ ಐಪಿಎಲ್‌ ತನ್ನ ಜನಪ್ರಿಯತೆ ಕಳೆದು ಕೊಳ್ಳುತ್ತಿದೆಯೇ ಎಂಬ ಅನುಮಾನ ಕಾಡತೊಡಗಿದೆ. ಇತ್ತಿಚೆಗೆ ಐಪಿಎಲ್‌ನ ಬ್ರಾಂಡ್‌ ಮೌಲ್ಯ ಗಣನೀಯವಾಗಿ ಕುಸಿಯುತ್ತಿರುವುರುವ ತಂಡಗಳ ಮೌಲ್ಯದಲ್ಲೂ ಭಾರೀ ಕುಸಿತ ಕಾಣುತ್ತಿರುವುದು ಇಂತಹ ಅನುಮಾನಗಳಿಗೆ ಇಂಬು ನೀಡುತ್ತಿವೆ.

ವಿಶ್ವದ ಪ್ರಮುಖ ಬ್ರ್ಯಾಂಡ್‌ ಮೌಲ್ಯಮಾಪನ ಸಲಹಾ ಸಂಸ್ಥೆಯಾಗಿರುವ ಬ್ರಾಂಡ್‌ ಫೈನಾನ್‌್ಸ ವರದಿ ಪ್ರಕಾರ, ಹಾಲಿ ಚಾಂಪಿಯನ್‌ ಆರ್‌ಸಿಬಿ ಸೇರಿದಂತೆ ಬಹುತೇಕ ಎಲ್ಲಾ ತಂಡಗಳ ಮೌಲ್ಯ ಕುಸಿದಿದೆ.

ಆರ್‌ಸಿಬಿ ಮೌಲ್ಯ ಕಳೆದ ಬಾರಿಗಿಂದ ಶೇ.10ರಷ್ಟು ಕುಸಿತ ಕಂಡಿದೆ. ಗರಿಷ್ಠ ಪ್ರಮಾಣದಲ್ಲಿ ಮೌಲ್ಯ ಕುಸಿತ ಕಂಡ ತಂಡ ರಾಜಸ್ಥಾನ ರಾಯಲ್‌್ಸಈ ತಂಡದ ಮೌಲ್ಯ ಶೇ.35ರಷ್ಟು ಕುಸಿದಿದೆ.
ಸನ್‌ರೈಸರ್ಸ್‌ ಹೈದರಾಬಾದ್‌ನ ಮೌಲ್ಯ ಶೇ.34 ಕುಸಿತ ಕಂಡಿದೆ. ಕೆಕೆಆರ್‌ ಮೌಲ್ಯ ಶೇ.33, ಡೆಲ್ಲಿ ಮೌಲ್ಯ ಶೇ.26, ಚೆನ್ನೈ ಶೇ.24, ಮುಂಬೈ ಶೇ.9, ಪಂಜಾಬ್‌ ಶೇ.3, ಲಖನೌ ಮೌಲ್ಯ ಶೇ.2ರಷ್ಟು ಕುಸಿತ ಕಂಡಿದೆ.

10 ತಂಡಗಳ ಪೈಕಿ ಗುಜರಾತ್‌ ಟೈಟಾನ್‌್ಸ ಮೌಲ್ಯ ಮಾತ್ರ ಏರಿಕೆಕಂಡಿದ್ದು, ಶೇ.2ರಷ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ. ಒಟ್ಟಾರೆ ಐಪಿಎಲ್‌ನ ಬ್ರಾಂಡ್‌ ಮೌಲ್ಯವೂ ಕುಸಿದಿದ್ದು, 2024ಕ್ಕೆ ಹೋಲಿಸಿದರೆ ಶೇ.20ರಷ್ಟು ಕುಸಿತವಾಗಿದೆ ಎಂದು ಬ್ರಾಂಡ್‌ ಫೈನಾನ್‌್ಸ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಿಮೊನ್‌ ಫ್ರಾನ್ಸಿಸ್‌‍ ಹೇಳಿದ್ದಾರೆ.

RELATED ARTICLES

Latest News