ನವದೆಹಲಿ, ಜ.7- ಭಾರತ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಿಗೆ ನ್ಯೂಜಿಲೆಂಡ್ ತನ್ನ15 ಸದಸ್ಯರ ಬಲಿಷ್ಠ ತಂಡ ಘೋಷಿಸಿದ್ದು, ಆರ್ ಸಿಬಿ ವೇಗಿ ಜಾಕೋಬ್ ಡಫಿಗೆ ಸ್ಥಾನ ಕಲ್ಪಿಸಿದ್ದರೆ, ಆರ್ ಸಿಬಿ ಸ್ಟಾರ್ ಆಟಗಾರ ಫಿಲ್ ಸಾಲ್‌್ಟ ಹಾಗೂ ಜಾಕೋಬ್ ಬೆಥಲ್ ಅವರು ಆಯ್ಕೆಯಾಗಿಲ್ಲ.
ವೇಗದ ಬೌಲಿಂಗ್ ವಿಭಾಗದಲ್ಲಿ ಲೋಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಆಡಂ ಮಿಲ್ನೆ , ಜೇಮ್ಸೌ ನೀಶಮ್ ರೊಂದಿಗೆ ಜಾಕೋಬ್ ಡಫಿ ಸ್ಥಾನ ಪಡೆದಿದ್ದರೆ, ಮೀಸಲು ಆಟಗಾರರಾಗಿ ಕೇಲ್ ಜೆಮಿಸನ್ ಇದ್ದಾರೆ.
ಐಪಿಲ್ 19ರ ಆವೃತ್ತಿಯ ಅಂಗವಾಗಿ ನಡೆದ ಮಿನಿ ಹರಾಜಿನಲ್ಲಿ ನ್ಯೂಜಿಲೆಂಡ್ ವೇಗಿ ಜಾಕೋಬ್ ಡಫಿ ಮೂಲ ಬೆಲೆ (2 ಕೋಟಿ)ಗೆ ಆರ್ ಸಿಬಿ ತಂಡದ ಪಾಲಾಗಿದ್ದಾರೆ.
ನ್ಯೂಜಿಲೆಂಡ್‌ನ ಟಿ20 ವಿಶ್ವಕಪ್ ತಂಡ:
ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೇ, ಜಾಕೋಬ್ ಡಫಿ, ಲಾಕಿ ರ್ಗುಸನ್, ವ್ಯಾಟ್ ಹೆನ್ರಿ, ಡ್ಯಾರಿಲ್ ಮಿಚೆಲ್, ಆಡಮ್ ಮಿಲ್ನೆ, ಜೇಮ್ಸೌ ನೀಶಮ್, ಗ್ಲೆನ್ ಫಿಲ್ಸಿ್, ರಚಿನ್ ರವೀಂದ್ರ, ಟಿಮ್ ಸೀರ್ಟ್, ಇಶ್ ಸೋಧಿ.
