Thursday, August 28, 2025
Homeರಾಷ್ಟ್ರೀಯ | Nationalಪ್ರೀತಿಸಲು ನಿರಾಕರಿಸಿದ ಬಾಲಕಿಯನ್ನು ಕೊಂದು ಮನೆಯಲ್ಲೇ ಶವ ಹೂಳಲು ಯತ್ನಿಸಿದ ಪಾಗಲ್

ಪ್ರೀತಿಸಲು ನಿರಾಕರಿಸಿದ ಬಾಲಕಿಯನ್ನು ಕೊಂದು ಮನೆಯಲ್ಲೇ ಶವ ಹೂಳಲು ಯತ್ನಿಸಿದ ಪಾಗಲ್

Spurned youth kills 14-year- old girl, tries to bury her inside home in UP

ಬಾಗ್‌ಪತ್‌,ಆ.28– ಪ್ರೀತಿಸಲು ನಿರಾಕರಿಸಿದ ಬಾಲಕಿಯ ಮೇಲೆ ಯುವಕನೊಬ್ಬ ಸಲಿಕೆಯಿಂದ ಹಲ್ಲೆ ನಡೆಸಿ ಕೊಂದು, ಆಕೆಯ ಮನೆಯಲ್ಲೇ ಶವ ಹೂಳಲು ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಬಾಗ್‌ಪತ್‌ ಜಿಲ್ಲೆಯ ಬೌಧಾ ಗ್ರಾಮದಲ್ಲಿ ನಡೆದಿದೆ.

ಸುಮಾರು 14 ವರ್ಷದ ಬಾಲಕಿಯ ಮನೆಗೆ ನುಗ್ಗಿ ಸಮುನ್‌(19) ಎಂಬಾತ ಆಕೆಯನ್ನು ಸಲಿಕೆಯಿಂದ ಹೊಡೆದು ಕೊಂದಿದ್ದಾನೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್‌‍ ವರಿಷ್ಠಾಧಿಕಾರಿ ಎನ್‌ ಪಿ ಸಿಂಗ್‌ತಿಳಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ,ಆರೋಪಿ ಸಮುನ್‌ ತಾನು ಹುಡುಗಿಯನ್ನು ಪ್ರೀತಿಸುತ್ತಿರುವುದಾಗಿ ಆಕೆ ಪ್ರತಿಕ್ರಿಯೆ ನೀಡಲಿಲ್ಲ,ಇದರಿಂದ ಬಾಲಕಿಯ ಮನೆಗೆ ನುಗ್ಗಿದ್ದ.ಈ ವೇಳೆ ಬಾಲಕಿಯ ಮೇಲೆ ಅತ್ಯಾಚಾರಕ್ಕೂ ಪ್ರಯತ್ನಿಸಿದ್ದು ಇದಕ್ಕೆ ಪ್ರತಿರೋಧ ವ್ಯಕ್ತವಾದ ನಂತರ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಆರೋಪಿ ಬಾಲಕಿಯ ಶವವನ್ನು ಮನೆಯಲ್ಲಿಯೇ ಹೂಳುತ್ತಿದ್ದಾಗ ಆಕೆಯ ಕುಟುಂಬ ಸದಸ್ಯರು ಬಂದಿದ್ದಾರೆ.ಛಪ್ರೌಲಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಘಟನೆ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.

RELATED ARTICLES

Latest News