ಶ್ರೀನಗರ,ನ.1- ಇದೇ ಮೊದಲ ಬಾರಿಗೆ ಜಮು-ಕಾಶೀರದ ಶ್ರೀನಗರದ ಲಾಲ್ ಚೌಕ್‌ನಲ್ಲಿ ದೀಪಾವಳಿ ಹಬ್ಬ ಆಚರಿಸಲಾಯಿತು. ಅಲ್ಲಿ ನೂರಾರು ಸ್ಥಳೀಯರು ಮತ್ತು ಪ್ರವಾಸಿಗರು ಬೆಳಕಿನ ಹಬ್ಬವನ್ನು ಗುರುತಿಸಲು ದೀಪಗಳನ್ನು ಬೆಳಗಿಸಲು ಒಗ್ಗೂಡಿದರು. ಹಗಲಿನಲ್ಲಿ ಪ್ರವಾಸಿಗರಿಂದ ಗಿಜಿಗುಡುವ ಶ್ರೀನಗರದ ನಗರ ಕೇಂದ್ರವಾದ ಲಾಲ್ ಚೌಕ್ ಸಂಜೆಯ ಹೊತ್ತಿಗೆ ಜೀವಂತವಾಯಿತು ಮಾತ್ರವಲ್ಲ ದೀಪಗಳ ಬೆಳಕಿನಲ್ಲಿ ಕಂಗೊಳಿಸಿತು.
ನಗರದ ಮಧ್ಯಭಾಗದಲ್ಲಿ ಇಂತಹ ಅದ್ಧೂರಿ ದೀಪಾವಳಿ ಆಚರಣೆ ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಜರಾತ್‌ನ ರಾಜ್‌ಕೋಟ್‌ನ ಪ್ರವಾಸಿಯೊಬ್ಬರು ನಾನು ಇಲ್ಲಿಗೆ ಬಂದಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಇಲ್ಲಿನ ವಾತಾವರಣ ತುಂಬಾ ಚೆನ್ನಾಗಿದೆ. ಅಂತಹ ಹಬ್ಬದ ವಾತಾವರಣವನ್ನು ನಾನು ಎಲ್ಲಿಯೂ ನೋಡಿಲ್ಲ ಎಂದು ತಿಳಿಸಿದ್ದಾರೆ.
ನಮನ್ನು ಬೆಂಬಲಿಸಿದ ಮತ್ತು ನಮ ಆಚರಣೆಯಲ್ಲಿ ಪಾಲ್ಗೊಂಡ ಕಾಶೀರದ ಜನರಿಗೆ ನಾವು ಕತಜ್ಞರಾಗಿರುತ್ತೇವೆ ಎಂದು ಮತ್ತೊಬ್ಬ ಪ್ರವಾಸಿಗರು ಹೇಳಿದರು.