Wednesday, April 2, 2025
Homeರಾಜ್ಯರಾಜ್ಯಾದ್ಯಂತ ಸುಸೂತ್ರವಾಗಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ

ರಾಜ್ಯಾದ್ಯಂತ ಸುಸೂತ್ರವಾಗಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ

SSLC exam conducted smoothly across the state

ಬೆಂಗಳೂರು, ಮಾ.21- ರಾಜ್ಯಾದ್ಯಂತ ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ವಿದ್ಯಾರ್ಥಿಗಳ ಮಹತ್ವದ ಘಟ್ಟವಾದ ಎಸ್‌ಎಸ್ಎಲ್‌ಸಿ ನಂತರ ವೃತ್ತಿಪರ ಕಲಿಕೆಗೆ ಹೆದ್ದಾರಿಯಾಗಿದೆ. ರಾಜ್ಯದ ಪರೀಕ್ಷಾ ಕೇಂದ್ರದ ಮುಂದೆ ಬೆಳಿಗ್ಗೆ 8 ಗಂಟೆಯಿಂದಲೇ ಜಮಾಯಿಸಿದ ವಿದ್ಯಾರ್ಥಿಗಳು ಸಹಪಾಠಿಗಳೊಂದಿಗೆ ಅಂತಿಮ ಮನನದಲ್ಲಿ ತೊಡಗಿದರು.

ಮೊದಲ ಬಾರಿಗೆ ಸಾರ್ವತ್ರಿಕ ಪರೀಕ್ಷೆಯನ್ನು ಬರೆಯುತ್ತಿರುವ ಹಿನ್ನೆಲೆಯಲ್ಲಿ ಮೊದಲ ದಿನ ಸ್ವಲ್ಪ ಮಟ್ಟಿನ ಆತಂಕ ಇದ್ದರೂ ಕೂಡ ಪರೀಕ್ಷಾ ಕೇಂದ್ರದ ಬಳಿ ಗುಲಾಬಿ ಹೂಗಳನ್ನು ನೀಡಿ ಸಿಹಿ ಹಂಚಿ ಅವರಲ್ಲಿ ಉತ್ಸಾಹ ಮೂಡಿಸಲಾಯಿತು. ಪರೀಕ್ಷೆ ಭಯ ಬಿಟ್ಟು ಚೆನ್ನಾಗಿ ಉತ್ತರ ಬರೆಯಿರಿ ಎಂದು ಅವರಿಗೆ ಪ್ರೋತ್ಸಾಹ ನೀಡುತ್ತಿರುವ ದೃಶ್ಯ ಹಲವೆಡೆ ಕಂಡು ಬಂತು.

ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಬೆಳಿಗ್ಗೆಯೇ ಹಲವು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ರಾಜ್ಯದ 15,881 ಪರೀಕ್ಷಾ ಕೇಂದ್ರಗಳಲ್ಲಿ ಇಂದು 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಥಮ ಭಾಷೆ ಪರೀಕ್ಷೆಯನ್ನು ಬರೆದಿದ್ದಾರೆ.

ಎಲ್ಲೂ ಕೂಡ ಯಾವುದೇ ರೀತಿಯ ಸಮಸ್ಯೆಗಳು ಎದುರಾಗಿಲ್ಲ. ಪ್ರಶ್ನೆ ಪತ್ರಿಕೆಗಳನ್ನು ಪೊಲೀಸ್ ಭದ್ರತೆಗಳೊಂದಿಗೆ ಆಯಾ ಕೇಂದ್ರಗಳಿಗೆ ಹಂಚಲಾಗಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್, ಸಿಸಿ ಟಿವಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳನ್ನು ಬಳಸಿಕೊಂಡು ಕ್ಷಣ ಕ್ಷಣದ ಮಾಹಿತಿಗಳನ್ನು ಪಡೆಯಲಾಗುತ್ತಿತ್ತು.

RELATED ARTICLES

Latest News