ಪ್ಯಾರಿಸ್, ಫೆ.23– ಪೂರ್ವ ಫ್ರಾನ್ಸ್‌ನ ಜನನಿಬಿಡ ಮಾರುಕಟ್ಟೆಯಲ್ಲಿ ದಾರಿಹೋಕನೊಬ್ಬ ಚೂರಿಯಿಂದ ಹಲವರಿಗೆ ಇರಿದಿದ್ದು ಇದರಲ್ಲಿ ಒಬ್ಬ ಸಾವನ್ನಪ್ಪ ಮೂವರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಇಸ್ಲಾಮಿಕ್ ಉಗ್ರಗಾಮಿ ಎಂದು ಗುರುತಿಸಲಾದ ಅಕ್ಟೋರಿಯಾದ ವ್ಯಕ್ತಿಯನ್ನು ದಾಳಿಯಲ್ಲಿ ಬಂಧಿಸಲಾಗಿದೆ ಎಂದು ಆಂತರಿಕ ಸಚಿವರು ತಿಳಿಸಿದ್ದಾರೆ.
ಫ್ರಾನ್ಸ್‌ನ ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ಪ್ರಾಸಿಕ್ಯೂಟರ್ ಅಧಿಕಾರಿಗಳಿಗೆ ತನಿಖೆಯನ್ನು ವಹಿಸಿಕೊಂಡಿದೆ.ಇದೇ ರೀತಿ ಜರ್ಮನಿ ಮತ್ತು ಸ್ವಿಟ್ಟರ್ಲೆಂಡ್ ಗಡಿಯಲ್ಲಿರುವ ಮಲೌಸ್ ನಗರದಲ್ಲಿ ದಾಳಿ ನಡೆದಿದೆ.
ದಾಳಿಯ ಬಗ್ಗೆ ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿರುವ ಫ್ರಾನ್ಸ್‌ನ ಅಧ್ಯಕ್ಷ ಮ್ಯಾಕ್ರನ್ ಇದು ಇಸ್ಲಾಮಿಸ್ಟ್ ಭಯೋತ್ಪಾದನೆ ಕೃತ್ಯ ಎಂದು ದೂಷಿಸಿದರು. ಈ ನಡುವೆ ಉಗ್ರರ ಬೆದರಿಕೆಗೆ ಸಂಬಂಧಿಸಿದಂತೆ ಫ್ರಾನ್ಸ್ ಕಟ್ಟೆಚ್ಚರ ವಹಿಸಿದೆ. ಮೃತನನ್ನು ಪೋರ್ಚುಗೀಸ್ (69)ಪ್ರಜೆ ಎಂದು ಭಯೋತ್ಪಾದನಾ ವಿರೋಧಿ ಕಚೇರಿ ತಿಳಿಸಿದೆ. ಮೂವರು ಗಾಯಗೊಂಡವವರನ್ನು ಆಸ್ಪತ್ರೆಗೆ ಗಾಖಲಿಸಲಾಗಿದೆ ಎಂದು ಆಂತರಿಕ ಸಚಿವ ಬ್ರೂನೋ ರಿಟೇಲ್ಯು ಸುದ್ದಿಗಾರರಿಗೆ ತಿಳಿಸಿದರು. ಉಳಿದ ಇಬ್ಬರಿಗೆ ಲಘು ಗಾಯಗಳಾಗಿವೆ.
ಈ ನಡೆವೆ 37 ವರ್ಷದ ಅಕ್ಟೋರಿಯಾದ ದಾಳಿಕೋರ ವ್ಯಕ್ತಿಯನ್ನು ಬಂಧಿಸಲಾಗಿದೆ. ಚಾಕು ಮತ್ತು ಸ್ಕೂಡ್ರೈವರ್ ದಾಳಿಯ ಸಂದರ್ಭದಲ್ಲಿ ಆತ ಅರೇಬಿಕ್ ಭಾಷೆಯಲ್ಲಿ ಘೋಷಣೆ ಕೂಗುತ್ತಿದ್ದ ಎಂದು ತಿಳಸಿದ್ದಾರೆ.
ಶಂಕಿತನು 2014 ರಲ್ಲಿ ಅಕ್ರಮಾಗಿ ಫ್ರಾನ್ಸ್‌ಗೆ ಆಗಮಿಸಿದನು ಮತ್ತು ಅ.7, 2023 ರಂದು ಇಸ್ರೇಲ್‌ನ ಮೇಲೆ ಹಮಾಸ್ ದಾಳಿಯ ಹಿನ್ನೆಲೆಯಲ್ಲಿ ಭಯೋತ್ಪಾದನೆಯನ್ನು ವೈಭವೀಕರಿಸಿದ ಆರೋಪದಲ್ಲಿ ಬಂಧಿಸಲಾಯಿತು ಮತ್ತು ಶಿಕ್ಷೆಗೆ ಒಳಗಾಗಿದ್ದ. ಆ ಅಪರಾಧಕ್ಕಾಗಿ ಹಲವಾರು ತಿಂಗಳುಗಳ ಜೈಲುವಾಸದ ನಂತರ, ಅಧಿಕಾರಿಗಳು ಅವನನ್ನು ಅಕ್ಟೋರಿಯಾಕ್ಕೆ ಹೊರಹಾಕಲು ಪ್ರಯತ್ನಿಸಿದ್ದರಿಂದ ಶಂಕಿತನನ್ನು ಗೃಹಬಂಧನಕ್ಕೆ ಸೀಮಿತಗೊಳಿಸಲಾಯಿತು.