ಬೆಂಗಳೂರು, ಆ.24-ಮುದ್ರಾಂಕ ಕಾಯ್ದೆ ಪ್ರಕಾರ ಆರು ತಿಂಗಳ ಒಳಗಿನ ಅವಧಿಯ ಮುದ್ರಾಂಕ ಶುಲ್ಕ ಮರುಪಾವತಿ ಕ್ಲೈಮುಗಳನ್ನು ಸಂಬಂಧಪಟ್ಟ ಡಿಡಿಓಗಳ ಹಂತದಲ್ಲಿ ಮರುಪಾವತಿಸಲು ಕ್ರಮವಹಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ವಿಧಾನಸಭೆಗೆ ತಿಳಿಸಿದ್ದಾರೆ.
ಶಾಸಕ ಅಭಯ ಪಾಟೀಲ್ ಅವರ ನಿಯಮ 351ರಡಿ ಮಂಡಿಸಿದ್ದ ಸೂಚನೆಗೆ ಉತ್ತರಿಸಿರುವ ಸಚಿವರು, ಆರು ತಿಂಗಳ ಮೇಲ್ಪಟ್ಟ ಅವಧಿಯ ಮುದ್ರಾಂಕ ಶುಲ್ಕ ಕ್ಲೈಮುಗಳನ್ನು ಮರುಪಾವತಿಸಲು ಸರ್ಕಾರದ ನಿರ್ದಿಷ್ಟ ಮಂಜೂರಾತಿ ಅಗತ್ಯವಿರುತ್ತದೆ ಎಂದು ಹೇಳಿದ್ದಾರೆ.
ಕಳೆದ 2022ರ ನಂತರದ ಅವಧಿಯಲ್ಲಿ ಖರೀದಿಸಿದ ಇ-ಸ್ಟ್ಯಾಂಪುಗಳಿಗೆ ನಿಯಮಾನುಸಾರ ಮರುಪಾವತಿಯ ಪ್ರಸ್ತಾವನೆಗಳನ್ನು ಆಯಾ ಜಿಲ್ಲೆಯ ಜಿಲ್ಲಾ ನೋಂದಣಾಧಿಕಾರಿಗಳು ನಿರ್ವಹಿಸುವಂತೆ ಸೂಚಿಸಲಾಗಿದೆ.
2022ರ ಏಪ್ರಿಲ್ ಒಂದರಿಂದ ಕಳೆದ ಜುಲೈ 20 ರ ಅವಧಿಯಲ್ಲಿ ಇ-ಸ್ಟ್ಯಾಂಪ್ ಮೂಲಕ ಖರೀದಿಸಲಾದ ಮುದ್ರಾಂಕ ಶುಲ್ಕದ 211 ಮರುಪಾವತಿಯ ಪ್ರಸ್ತಾವನೆಗಳು ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಸ್ವೀಕೃತವಾಗಿದ್ದು, 163 ಪ್ರಕರಣಗಳಲ್ಲಿ ಮುದ್ರಾಂಕ ಶುಲ್ಕ ಮರುಪಾವತಿಸಲಾಗಿದೆ.
ಉಳಿದ 48 ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಎಸ್ಎಚ್ಸಿಐ ರವರಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ಈ ಬಗ್ಗೆ ಅಗತ್ಯ ದಾಖಲೆಗಳನ್ನು ಪಡೆದು ಇಲಾಖಾ ಹಂತದಲ್ಲಿ ಮರುಪಾವತಿಸಲು ಕ್ರಮವಹಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ಧಾರೆ.
- ಎಲ್ಪಿಜಿ ಟ್ಯಾಂಕ್ ಸ್ಫೋಟಗೊಂಡು 7 ಮಂದಿ ಸಜೀವ ದಹನ
- ಬೈಕ್ಗೆ ಕಾರು ಡಿಕ್ಕಿಯಾಗಿ ಸೇತುವೆಯಿಂದ ಬಿದ್ದು ಮಹಿಳೆ ಸಾವು
- ವಾಯು ರಕ್ಷಣಾ ಶಸ್ತ್ರಾಸ್ತ್ರ ಹಾರಾಟ ಪರೀಕ್ಷೆ ಯಶಸ್ವಿ
- ಮನೆಯಲ್ಲೇ ಎಸ್ಐಟಿಯಿಂದ ಸುಜಾತ ಭಟ್ ವಿಚಾರಣೆ
- ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಶರಣಾದ ತಾಯಿ