ನವದೆಹಲಿ,ಏ.6– ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ನೀಡಿರುವ ಮೂರನೇ ನೋಟಿಸ್ ಗೂ ಕ್ಯಾರೇ ಅನ್ನದ ಹಾಸ್ಯ ನಟ ಕುನಾಲ್ ಕಮ್ರಾ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಗ್ಗೆ ತಮಾಷೆ ಮಾಡಿದ ನಂತರ ಭಾರಿ ವಿವಾದಕ್ಕೆ ಕಾರಣವಾದ ಹಾಸ್ಯನಟ ಕುನಾಲ್ ಕಮ್ರಾ ಅವರು ಮುಂಬೈ ಪೊಲೀಸರಿಗೆ ಪತ್ರ ಬರೆದು ತಮ್ಮ ಹೇಳಿಕೆಯನ್ನು ವಿಡಿಯೋ -ಕಾನ್ಫರೆನ್ಸ ಮೂಲಕ ದಾಖಲಿಸುವಂತೆ ಕೋರಿದ್ದಾರೆ.
ವ್ಯಾಪಕ ಚರ್ಚೆಗೆ ಕಾರಣವಾಗಿರುವ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಖಾರ್ ಪೊಲೀಸ್ ಠಾಣೆ ಅವರಿಗೆ ಮೂರು ಸಮನ್ಸ್ ನೀಡಿದ ನಂತರ ಹಾಸ್ಯನಟನಿಂದ ಇಂತಹ ಮನವಿ ಬಂದಿದೆ.
ಏಪ್ರಿಲ್ 5 ರಂದು ವಿಚಾರಣೆಗೆ ಹಾಜರಾಗುವಂತೆ ಏಪ್ರಿಲ್ 2 ರಂದು ಅವರಿಗೆ ಮೂರನೇ ಸಮನ್ಸ್ ನೀಡಲಾಗಿತ್ತು. ಆದಾಗ್ಯೂ, ಕಮ್ರಾ ಈ ಸಮನ್ಸ್ ಗಳನ್ನು ಅನುಸರಿಸಲು ವಿಫಲರಾದರು. ಇದು ಅವರ ಹೇಳಿಕೆಯನ್ನು ನೀಡಲು ವೀಡಿಯೊ-ಕಾನ್ಫರೆನ್ಸ ಆಯ್ಕೆಗಾಗಿ ವಿನಂತಿಗೆ ಕಾರಣವಾಯಿತು.
ಏಪ್ರಿಲ್ 4 ರಂದು, ಖಾರ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳ ತಂಡವು ಅವರ ವಿರುದ್ಧ ದಾಖಲಾದ ಎಫ್‌ಐಆರ್ ಬಗ್ಗೆ ತನಿಖೆ ನಡೆಸಲು ಪಾಂಡಿಚೆರಿಗೆ ತಲುಪಿದೆ. ಕಮ್ರಾ ತಮಿಳುನಾಡಿನ ಖಾಯಂ ನಿವಾಸಿ. ಏತನ್ಮಧ್ಯೆ, ಕಮ್ರಾ ಈ ವಿಷಯದಲ್ಲಿ ಮದ್ರಾಸ್ ಹೈಕೋರ್ಟ್‌ನಿಂದ ಏಪ್ರಿಲ್ 7 ರವರೆಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.