Wednesday, July 23, 2025
Homeರಾಜ್ಯಖಜಾನೆ ಖಾಲಿಯಾಗಿದ್ದಕ್ಕೆ ರಾಜ್ಯ ಸರ್ಕಾರ ಸಣ್ಣಪುಟ್ಟ ವ್ಯಾಪಾರಿಗಳಿಂದ ಸುಲಿಗೆ ಮಾಡುತ್ತಿದೆ : ವಿ.ಸೋಮಣ್ಣ

ಖಜಾನೆ ಖಾಲಿಯಾಗಿದ್ದಕ್ಕೆ ರಾಜ್ಯ ಸರ್ಕಾರ ಸಣ್ಣಪುಟ್ಟ ವ್ಯಾಪಾರಿಗಳಿಂದ ಸುಲಿಗೆ ಮಾಡುತ್ತಿದೆ : ವಿ.ಸೋಮಣ್ಣ

State government is extorting money from small traders: V. Somanna

ತುಮಕೂರು, ಜು.23– ರಾಜ್ಯದ ಖಜಾನೆ ಖಾಲಿಯಾಗಿದೆ, ಹಣಕ್ಕಾಗಿ ರಾಜ್ಯ ಸರ್ಕಾರ ಎಲ್ಲೆಲ್ಲಿ, ಯಾವ ರೀತಿಯಲ್ಲಿ ಜನರನ್ನು ಶೋಷಣೆ ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಇತ್ತೀಚೆಗೆ ಸಣ್ಣಪುಟ್ಟ ವ್ಯಾಪಾರಿಗಳಿಂದ ತೆರಿಗೆ ಹಣ ವಸೂಲಿ ಮಾಡುತ್ತಾ ಬಡ ವ್ಯಾಪಾರಿಗಳನ್ನು ಶೋಷಣೆ ಮಾಡುತ್ತಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಟೀಕಿಸಿದರು.

ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ 63ನೇ ಜನ್ಮದಿನದ ಅಂಗವಾಗಿ ಸಚಿವ ಸೋಮಣ್ಣ, ಪತ್ನಿ ಶೈಲಜಾ ಸೋಮಣ್ಣ ಅವರು ಮಠಕ್ಕೆ ಆಗಮಿಸಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಗೆ ಪೂಜೆ ಸಲ್ಲಿಸಿ ನಂತರ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

ಬಳಿಕ ಪರಿಸ್ಥಿತಿ ಪತ್ರಕರ್ತರೊಂದಿಗೆ ಮಾತನಾಡಿದ ಏನಾಗಿದೆ ಎಂಬುದು ಗೊತ್ತು. ಅವರು, ಮುಖ್ಯಮಂತ್ರಿ ಕೇಂದ್ರ 건gna ಬಾಕಿ ತೆರಿಗೆ ಸಿದ್ದರಾಮಯ್ಯ ಅವರ ಹಣ ನೀಡುತ್ತಿಲ್ಲ ಎಂದು ಪದೇ ಪದೇ ಹೇಳಿಕೆ ನೀಡುತ್ತಿರುವುದು ಸರಿಯಲ್ಲ, ಯಾವುದನ್ನು ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡಬೇಕು ಎಂಬುದನ್ನು ಅವರು ತಿಳಿಯಬೇಕು. ಜಿಎಸ್‌ಟಿ ಸಭೆ, ಪ್ರಧಾನ ಮಂತ್ರಿಗಳ ಸಭೆಯಲ್ಲಿ ಭಾಗವಹಿಸುವ ಸೌಜನ್ಯ ಸಿದ್ದರಾಮಯ್ಯನವರಿಗಿಲ್ಲ. ಆದರೆ ಪ್ರಧಾನಿ ಬಗ್ಗೆ ಲಘುವಾಗಿ ಮಾತನಾಡುವುದು ಏಳು ಕೋಟಿ ಜನರ ಪ್ರತಿನಿಧಿಯಾಗಿ, ಮುಖ್ಯಮಂತ್ರಿಯಾಗಿರುವ ಅವರಿಗೆ ಶೋಭೆ ತರುವುದಿಲ್ಲ. ಸಿದ್ದರಾಮಯ್ಯ ತಮ್ಮ ವರ್ತನೆ ಬದಲು ಮಾಡಿಕೊಳ್ಳಲಿ ಎಂದರು.

ಸಂಸತ್ ಅಧಿವೇಶನದಲ್ಲಿ ಪ್ರಶೋತ್ತರ ಅವಧಿ ನಂತರ ಚರ್ಚೆ ಮಾಡಲು ಅವಕಾಶವಿದೆ. ನಂತರ ಆಪರೇಷನ್ ಸಿಂಧೂರ ವಿಚಾರ ಚರ್ಚೆ ಮಾಡೋಣ ಎಂದು ಸಭಾಪತಿಗಳು ಹೇಳಿದರೂ ಕಾಂಗ್ರೆಸ್‌ನವರು ಅನಾವಶ್ಯಕವಾಗಿ ಗೊಂದಲ ಮಾಡಿರುವುದು ಸರಿಯಲ್ಲ ಎಂದು ಟೀಕಿಸಿದರು.

ಸಿದ್ದಗಂಗಾ ಮಠ ಸೇರಿದಂತೆ ಮಠಮಾನ್ಯಗಳು ಸಮಾಜ ಸೇವಾಕಾರ್ಯ ಮಾಡುತ್ತಿವೆ. ಎಲ್ಲಾ ಜಾತಿ, ವರ್ಗದ ಬಡ, ಕಡು ಬಡವರ ಮಕ್ಕಳಿಗೆ ವಿದ್ಯೆ ದಾನ, ಅನ್ನ ದಾಸೋಹ ಮಾಡಿ ಆ ಮಕ್ಕಳೂ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಸಂಕಲ್ಪವನ್ನು ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಮುಂದುವರೆಸಿದ್ದಾರೆ ಎಂದು ಸೋಮಣ್ಣ ಹೇಳಿದರು.

ಮುಖಂಡರಾದ ಎಸ್.ಶಿವಪ್ರಸಾದ್, ವೈ.ಹೆಚ್.ಹುಚ್ಚಯ್ಯ, ಡಾ.ಎಸ್.ಪರಮೇಶ್, ಬಿ.ಬಿ.ಮಹದೇವಯ್ಯ, ಹಕ್ಕೊತ್ತಾಯ ಬಸವರಾಜು, ಸಾಗರನಹಳ್ಳಿ ವಿಜಯ್‌ಕುಮಾರ್, ರುದ್ರೇಶ್, ಭೈರಣ್ಣ, ಸತ್ಯಮಂಗಲ ಜಗದೀಶ್, ಧನುಷ್, ತರಕಾರಿ ಮಹೇಶ್, ವಿರೂಪಾಕ್ಷಪ್ಪ, ಕೊಪ್ಪಲ್ ನಾಗರಾಜ್, ಗಣೇಶ್ ಪ್ರಸಾದ್, ಯಶಸ್, ಸಂತೋಷ್ ಮತ್ತಿತರರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

RELATED ARTICLES

Latest News