Friday, August 8, 2025
Homeರಾಜ್ಯಮೂವರು ಐಎಎಸ್‌‍ ಅಧಿಕಾರಿಗಳಿಗೆ ಎ.ಸಿ.ಹುದ್ದೆ ನೀಡಿ ರಾಜ್ಯ ಸರ್ಕಾರ ಆದೇಶ

ಮೂವರು ಐಎಎಸ್‌‍ ಅಧಿಕಾರಿಗಳಿಗೆ ಎ.ಸಿ.ಹುದ್ದೆ ನೀಡಿ ರಾಜ್ಯ ಸರ್ಕಾರ ಆದೇಶ

State government orders to give AC posts to three IAS officers

ಬೆಂಗಳೂರು, ಆ.6- ಹುದ್ದೆ ನಿರೀಕ್ಷೆಯಲ್ಲಿದ್ದ 2023ನೇ ಬ್ಯಾಚ್‌ನ ಮೂವರು ಐಎಎಸ್‌‍ ಅಧಿಕಾರಿಗಳಿಗೆ ಉಪ ವಿಭಾಗಾಧಿಕಾರಿ ಹುದ್ದೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪಿ. ಶ್ರವಣ್‌ ಕುಮಾರ್‌ ಅವರನ್ನು ಉತ್ತರ ಕನ್ನಡ ಜಿಲ್ಲಾ ಕುಮಟಾ ಉಪ ವಿಭಾಗದ ಉಪ ವಿಭಾಧಿಕಾರಿಯಾಗಿ ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶಿಸಿದೆ.

ದಿನೇಶ್‌ ಕುಮಾರ್‌ ಮೀನಾ ಅವರಿಗೆ ಚಾಮರಾಜ ನಗರ ಜಿಲ್ಲಾ ಕೊಳ್ಳೇಗಾಲ ಉಪ ವಿಭಾಗದ ಉಪ ವಿಭಾಗಾಧಿಕಾರಿ ಹುದ್ದೆ ನೀಡಲಾಗಿದೆ. ಮೀನಾಕ್ಷಿ ಆರ್ಯ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಮಂಗಳೂರು ಉಪ ವಿಭಾಗದ ಉಪ ವಿಭಾಗಾಧಿಕಾರಿ ಹುದ್ದೆ ನೀಡಿ ಆದೇಶ ಹೊರಡಿಸಲಾಗಿದೆ.

RELATED ARTICLES

Latest News