ಹನೂರು,ಜ.9-ತಾಲ್ಲೂಕಿನ ಪ್ರಸಿದ್ದ ಪುಣ್ಯ ಶ್ರೀ ಕ್ಷೇತ್ರ ಮಲೆ ಮಹದೇಶ್ವರಬೆಟ್ಟ ದೇಗುಲದಲ್ಲಿ ಹುಂಡಿ ಹಣ ಎಣಿಕೆ ನಡೆದಿದ್ದು 29 ದಿನದಲ್ಲಿ 2.48 ಕೋಟಿ ರೂ ಸಂಗ್ರಹವಾಗಿದೆ. ಹಾಗೂ 6 ವಿದೇಶಿ ನೋಟುಗಳು 2 ಸಾವಿರ ರೂ ಮುಖ ಬೆಲೆ 2 ನೋಟುಗಳು ಸಹ ಹುಂಡಿಯಲ್ಲಿ ದೊರೆತಿದೆ.
ಸಾಲೂರು ಬೃಹನಠಾಧ್ಯಕ್ಷ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ರವರ ಉಪಸ್ಥಿತಿಯಲ್ಲಿ ,ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ರವರ ನೇತೃತ್ವದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು, 29 ದಿನದಲ್ಲಿ 2,48,02,179 ರೂ. ನಗದು ರೂಪದಲ್ಲಿ ಹಾಗೂ ಚಿನ್ನ 35 ಗ್ರಾಂ, ಬೆಳ್ಳಿ 1 ಕೆ.ಜಿ 62 ಗ್ರಾಂ ಹುಂಡಿಯಲ್ಲಿ ದೊರೆತಿದೆ.
ಭಕ್ತರಿಂದ ಹರಕೆ ರೂಪದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಕಾಣಿಕೆ ಸಂದಿರುವುದು ಅಮಾವಾಸ್ಯೆ, ಹುಣ್ಣಿಮೆ ಹೊಸ ವರ್ಷ ರಜೆ ದಿನಗಳು ಸರ್ಕಾರ ಶಕ್ತಿ ಯೋಜನೆ ಮಹಿಳೆಯರ ಉಚಿತ ಪ್ರಯಾಣ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದರಿಂದ ದೊಡ್ಡ ಮೊತ್ತದ ಹಣ ಸಂಗ್ರಹವಾಗಿದೆ.
ಮ.ಬೆಟ್ಟ ಬಸ್ ನಿಲ್ದಾಣದ ವಾಣಿಜ್ಯ ಕಟ್ಟಡದಲ್ಲಿ ಸಿಸಿ ಕ್ಯಾಮರ ಹಾಗೂ ಪೊಲೀಸರ ಕಣ್ಗಾವಲಿನಲ್ಲಿ ಪ್ರಾಧಿಕಾರದ ಸಿಬ್ಬಂಧಿಗಳು ಹಾಗೂ ಕೊಳ್ಳೇಗಾಲ ಬ್ಯಾಂಕ್ ಆ್ ಬರೋಡ ಸ್ಥಳೀಯ ಶಾಖೆ ಸಿಬ್ಬಂಧಿಗಳು ಹುಂಡಿ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು.
ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಪ್ರಾಧಿಕಾರದ ಹಣಕಾಸು ಮತ್ತು ಲೆಕ್ಕಪತ್ರ ಸಲಹೆಗಾರ ಮಹದೇವು, ಲೆಕ್ಕಧೀಕ್ಷಕ ಗುರುಮಲ್ಲಯ್ಯ, ಸರಗೂರು ಮಹದೇವಸ್ವಾಮಿ, ಚಾ.ನಗರ ಜಿಲ್ಲಾಡಳಿತ ಕಛೇರಿ ಮಹೇಶ್ ಚಂದ್ರ ,ಪ್ರದಸ ಬೆರಳಚ್ಚುಗಾರರು , ಪ್ರಾಧಿಕಾರದ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು ,ಸಿಬ್ಬಂಧಿಗಳು, ಕೊಳ್ಳೇಗಾಲದ ಬ್ಯಾಂಕ್ ಆಫ್ ಬರೋಡ ಮುಖ್ಯ ವ್ಯವಸ್ಥಾಪಕರು, ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಭಾಗ್ಯಮ, ಕುಪ್ಯಾ , ಮರಿಸ್ವಾಮಿ, ಕಾಗಲವಾಡಿ, ಮಹದೇವಪ್ಪ ಕೀಳನಪುರ, ಗಂಗನ ತಿಮಯ್ಯ ಮೆಲ್ಲಹಳ್ಳಿ ಹಾಜರಿದ್ದರು.
