Sunday, January 25, 2026
Homeರಾಜ್ಯರಾಜ್ಯದ 22 ಮಂದಿ ಪೊಲೀಸರಿಗೆ ರಾಷ್ಟ್ರಪತಿ ಪದಕ

ರಾಜ್ಯದ 22 ಮಂದಿ ಪೊಲೀಸರಿಗೆ ರಾಷ್ಟ್ರಪತಿ ಪದಕ

22 policemen from the state awarded President's Medal

ಬೆಂಗಳೂರು, ಜ.25- ಗಣರಾಜ್ಯೋತ್ಸವದ ಅಂಗವಾಗಿ ನೀಡುವ ರಾಷ್ಟ್ರಪತಿ ಪದಕ ರಾಜ್ಯದ 22 ಮಂದಿ ಪೊಲೀಸ್‌‍ ಅಧಿಕಾರಿ ಮತ್ತು ಸಿಬ್ಬಂದಿಗೆ ಲಭಿಸಿದೆ. 22 ಮಂದಿ ಪೊಲೀಸರ ಪೈಕಿ ಇಬ್ಬರು ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕಕ್ಕೆ ಹಾಗೂ 20 ಮಂದಿ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿರುತ್ತಾರೆ.

ವಿಶಿಷ್ಟ ಸೇವಾ ಪದಕ ಪುರಸ್ಕೃತರು:
ಎಡಿಜಿಪಿ ದೇವಜ್ಯೋತಿ ರೇ ಹಾಗೂ ಹಲಸೂರು ಉಪವಿಭಾಗದ ಎಸಿಪಿ ರಂಗಪ್ಪ.
ಶ್ಲಾಘನೀಯ ಸೇವಾ ಪದಕ ಪುರಸ್ಕೃತರು: ಉತ್ತರ ವಲಯ- ಐಜಿಪಿ ಡಾ.ಚೇತನ್‌ಸಿಂಗ್‌ ರಾಥೋಡ್‌, ಪಶ್ಚಿಮ ವಲಯ- ಐಜಿಪಿ ಅಮಿತ್‌ ಸಿಂಗ್‌, ಮೈಸೂರು ನಗರ ಪೊಲೀಸ್‌‍ ಆಯುಕ್ತರಾದ ಸೀಮಾ ಲಾಟ್ಕರ್‌, ಗೃಹ ರಕ್ಷಕ ದಳದ ಡಿಐಜಿಪಿ ಸವಿತಾ, ಕಲಬುರಗಿ ಪಿಟಿಎಸ್‌‍ ಪ್ರಾಂಶುಪಾಲರು ಹಾಗೂ ಡಿಐಜಿ ಪುಟ್ಟಮಾದಯ್ಯ.

ಬಳ್ಳಾರಿ ಜಿಲ್ಲೆ ಅಡಿಷನಲ್‌ ಎಸ್‌‍ಪಿ-2 ನವೀನ್‌ಕುಮಾರ್‌, ಬೆಂಗಳೂರು ನಗರ ಅಪರಾಧ ವಿಭಾಗ-2 ಡಿಸಿಪಿ ರಾಜ ಇಮಾಮ್‌ ಖಾಸಿಂ, ಮಂಗಳೂರು ಡಿಸಿಆರ್‌ಇ ಪೊಲೀಸ್‌‍ ಅಧೀಕ್ಷಕ ಸೈಮನ್‌, ಬೀದರ್‌ ಲೋಕಾಯುಕ್ತ ಡಿವೈಎಸ್‌‍ಪಿ ಹನುಮಂತರಾಯ.

ಮಡಿವಾಳ ಪೊಲೀಸ್‌‍ ಠಾಣೆ ಇನ್ಸ್ ಪೆಕ್ಟರ್‌ ಮಹಮದ್‌, ವಿದ್ಯಾರಣ್ಯಪುರ ಪೊಲೀಸ್‌‍ ಇನ್ಸ್ ಪೆಕ್ಟರ್‌ ಶಿವಸ್ವಾಮಿ, ಹುಬ್ಬಳ್ಳಿ-ಧಾರವಾಡ ನಗರ ವಿದ್ಯಾಗಿರಿ ಠಾಣೆ ಇನ್ಸ್ ಪೆಕ್ಟರ್‌ ಮಹಮದ್‌ ರಫೀಕ್‌ ಎಂ.ತಹಸೀಲ್ದಾರ್‌, ಬೆಳಗಾವಿ ಜಿಲ್ಲೆ ಮೂಡಲಗಿ ಸರ್ಕಲ್‌ ಇನ್ಸ್ ಪೆಕ್ಟರ್‌ ಶ್ರೀಶೈಲ್‌ ಕೆ.ಬ್ಯಾಕೋಡ್‌, ಕೆಎಸ್‌‍ಆರ್‌ಪಿ 9ನೆ ಪಡೆಯ ಸ್ಪೆಆರ್‌ಎಸ್‌‍ಐ ಕಾಶಿನಾಥ್‌.

ಮಲ್ಪೆ ಕರಾವಳಿ ಕಾವಲು ಪೊಲೀಸ್‌‍ ಠಾಣೆ ಪಿಎಸ್‌‍ಐ ವೈಲೆಟ್‌ ಫೆಮಿನ್‌, ಶಿವಮೊಗ್ಗ ಪಿಎಸ್‌‍ಐ ಶಕುಂತಲಾ, ಬೆಂಗಳೂರು ನಗರ ಸಂಚಾರ ವಿಭಾಗದ ಎಎಸ್‌‍ಐ ಹರ್ಷ ನಾಗರಾಜ್‌, ಹುಳಿಮಾವು ಪೊಲೀಸ್‌‍ ಠಾಣೆ ಎಎಸ್‌‍ಐ ಸಿದ್ದರಾಜು, ಕೆಎಸ್‌‍ಆರ್‌ಪಿ ಸ್ಪೆ ಆರ್‌ಎಚ್‌ಸಿ 3ನೆ ಪಡೆಯ ದೊಡ್ಡ ಈರಪ್ಪ ಹಾಗೂ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಹೆಡ್‌ಕಾನ್‌ಸ್ಟೆಬಲ್‌ ಬಸವರಾಜ್‌ ಮ್ಯಾಗೇರಿ ಅವರು ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.

RELATED ARTICLES

Latest News