ಬೆಳಗಾವಿ, ಡಿ.11- ಮುಂದಿನ ಮಾರ್ಚ್ ನಿಂದ ಎರಡುವರೆ ಸಾವಿರ ಮೆಗಾ ವ್ಯಾಟ್ ಸೌರಶಕ್ತಿ ವಿದ್ಯುತ್ ಸೇರ್ಪಡೆಯಾಗುತ್ತಿದ್ದು, ಗೃಹ ಬಳಕೆ ಹಾಗೂ ಕೈಗಾರಿಕೆಗಳಿಗೆ ದಿನ 24 ಗಂಟೆಯೂ ವಿದ್ಯುತ್ ಪೂರೈಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಚಾರ್ಜ್ ಹೇಳಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಆನೇಕಲ್ ಕ್ಷೇತ್ರದ ಶಾಸಕ ಬಿ.ಶಿವಣ್ಣ ಅವರು, ಕೃಷಿ ಪಂಪ್ ಸೇಟ್ ಗಳಿಗೆ ನಿರಂತರವಾಗಿ ಹಗಲಿನ ವೇಳೆ 7 ಗಂಟೆ ವಿದ್ಯುತ್ ಪೂರೈಸುವುದಾಗಿ ಸರ್ಕಾರ ಹೇಳಿದೆ. ಆದರೆ ವಿದ್ಯುತ್ ಪೂರೈಕೆ ಸಮರ್ಪಕವಾಗಿಲ್ಲ. ನಮಲ್ಲಿ ಹೆಚ್ಚು ವಿದ್ಯುತ್ ಇದೆ. ಏಳು ಗಂಟೆ ಬದಲಾಗಿ ಕೃಷಿ ಪಂಪ್ ಸೆಟ್ ಗಳಿಗೆ 10 ಗಂಟೆ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.
ಸಚಿವ ಕೆ.ಜೆ.ಜಾರ್ಜ್ ಉತ್ತರ ನೀಡಿ, ಆನೇಕಲ್ ತಾಲೂಕಿನಲ್ಲಿ 22 ಕೃಷಿ ಫೀಡರ್ ಗಳಿವೆ. ಹಗಲಿನ ವೇಳೆನ ನಿರಂತರವಾಗಿ ಏಳು ಗಂಟೆ ವಿದ್ಯುತ್ ಪೂರೈಕೆಯಾಗುತ್ತಿದೆ. ಸರ್ಜಾಪುರ ಮತ್ತು ಅತ್ತಿಬೆಲೆಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದಾಗಿ ಒಂದಿಷ್ಟು ವ್ಯತ್ಯಯವಾಗಿದೆ ಎಂದರು.
ನಮ ರಾಜ್ಯದಲ್ಲಿ ಹೆಚ್ಚುವರಿಯಾಗಿ ವಿದ್ಯುತ್ ಇಲ್ಲ. ಮುಖ್ಯಮಂತ್ರಿಯವರ ಒತ್ತಾಸೆಯ ಮೇರೆಗೆ ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿಸಿ ಬೇಡಿಕೆಯನ್ನು ನಿರ್ವಹಣೆ ಮಾಡುತ್ತಿದ್ದೇವೆ. ರೈತರಿಗೆ ಏಳು ಗಂಟೆ ನಿರಂತರ ವಿದ್ಯುತ್ ಪೂರೈಸಲು 20 ಸಾವಿರ ಕೋಟಿ ರೂಪಾಯಿ ಸಬ್ಸಿಡಿ ನೀಡಲಾಗುತ್ತಿದೆ ಎಂದರು.
ನಾನೂ ರೈತನಿದ್ದೇನೆ. ಕೃಷಿಗೆ 24 ಗಂಟೆ ವಿದ್ಯುತ್ ಪೂರೈಸಬಹುದು. ಆದರೆ ಸಮಸ್ಯೆ ಏನು ಎಂದರೆ ಏಳು ಗಂಟೆ ಕೂಡ ನಿರಂತರವಾಗಿ ವಿದ್ಯುತ್ ಪೂರೈಸಬೇಡಿ. ನಮ ಪಂಪ್ ಸೆಟ್ ಗಳು ಹಾಳಾಗುತ್ತವೆ, ಅಂತರ್ಜಲ ಕೂಡ ಆ ಪ್ರಮಾಣದಲ್ಲಿ ಇಲ್ಲ. ರಾತ್ರಿ ಹೊತ್ತು ಮಾತ್ರ ವಿದ್ಯುತ್ ಪೂರೈಸಿ ಎಂದು ರೈತರೇ ಒತ್ತಾಯಿಸುತ್ತಿದ್ದಾರೆ ಎಂದರು.
ಕುಸುಮ್-ಸಿ ಯೋಜನೆಯಡಿ 2500 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಮಾರ್ಚ್ ವೇಳೆಗೆ ಲಭ್ಯವಾಗಲಿದೆ. ಸ್ಥಳೀಯವಾಗಿಯೇ ವಿದ್ಯುತ್ ಉತ್ಪಾದಿಸಿ, ಅಲ್ಲಿಯ ಪೂರೈಸಲಾಗುತ್ತದೆ. ಗೃಹ ಬಳಕೆ ಮತ್ತು ಕೈಗಾರಿಕೆಗಳಿಗೆ ದಿನದ 24 ಗಂಟೆಯೂ ವಿದ್ಯುತ್ ಪೂರೈಸುವುದಾಗಿ ಸಚಿವರು ತಿಳಿಸಿದರು.
