ಬೆಳಗಾವಿ,ಡಿ.11- ಗೃಹ ಇಲಾಖೆಯಲ್ಲಿ ಬಡ್ತಿ ವಿಚಾರದಲ್ಲಿ 70:30 ಅನುಪಾತ ಬಳಕೆ ಮಾಡಲಾಗುತ್ತಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ವಿಧಾನಪರಿಷತ್‌ಗೆ ತಿಳಿಸಿದರು. ಕಾಂಗ್ರೆಸ್‌ನ ಡಿ.ಟಿ.ಶ್ರೀನಿವಾಸ್ ಅವರು, ಬೆಂಗಳೂರು ನಗರ ಸಂಚಾರಿ ಪೊಲೀಸ್ ಇಲಾಖೆಯಲ್ಲಿ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವಿವಿಧ ಶ್ರೇಣಿಯ ಪೊಲೀಸರಿಗೆ ಮುಂಬಡ್ತಿ ನೀಡುವ ಕುರಿತು ಉತ್ತರ ಬಯಸಿದರು.
ಇದಕ್ಕೆ ಉತ್ತರಿಸಿದ ಪರಮೇಶ್ವರ್, ಕಾಲಕಾಲಕ್ಕೆ ಹಂತ ಹಂತವಾಗಿ ಕಾನೂನಿನ ಅನುಗುಣವಾಗಿಯೇ ಮುಂಬಡ್ತಿ ನೀಡಲಾಗುತ್ತಿದೆ. ಶೇ.70: 30 ಅನುಪಾತದಲ್ಲಿ ಮುಂಬಡ್ತಿ ನೀಡುತ್ತಿದ್ದೇವೆ. ಶೇ.70ರಷ್ಟು ನೇರನೇಮಕಾತಿ, ಶೇ.30ರಷ್ಟು ಮುಂಬಡ್ತಿ ಮೂಲಕ ಅವಕಾಶ ಕಲ್ಪಿಸಲಾಗಿದೆ. ಎಲ್ಲಿಯೂ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿಲ್ಲ. ಯುವಕರಿಗೆ ಇಲಾಖೆಯಲ್ಲಿ ಆದ್ಯತೆ ನೀಡಲಾಗುತ್ತಿದೆ. ನೇರ ನೇಮಕಾತಿ ಬಡ್ತಿಗೆ ಅವಕಾಶ ಕಲ್ಪಿಸಿದ್ದೇವೆ. ಸೇವಾನುಭವದ ಹಿನ್ನೆಲೆಯಲ್ಲಿ ಬಡ್ತಿ ಕೊಡಲಾಗುತ್ತದೆ ಎಂದು ಹೇಳಿದರು.
ನಂತರ ಕಾಂಗ್ರೆಸ್ ಸದಸ್ಯ ಅಬ್ದುಲ್ ಜಬ್ಬರ್ ಅವರು,ರಾಜ್ಯದಲ್ಲಿ ಮಾದಕ ವಸ್ತುಗಳ ಉತ್ಪಾದನೆ ಮತ್ತು ಮಾರಟ ಚಟುವಟಿಕೆ ನಡೆಯುತ್ತಿರುವುದು ಸರ್ಕಾರ ಗಮನಕ್ಕೆ ಬಂದಿದ್ಯಾ? ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಪರಮೇಶ್ವರ್, ಪ್ರತಿ ತಿಂಗಳು ಶಾಲಾ ಕಾಲೇಜುಗಳಲ್ಲಿ ಪೊಲೀಸರು ಭೇಟಿ ಕೊಡಬೇಕು. ಮೊನ್ನೆ ಒಂದೇ ದಿನ 1 ಸಾವಿರ ಶಾಲೆಗಳಿಗೆ ಪೊಲೀಸರು ಭೇಟಿ ಕೊಟ್ಟಿದ್ದಾರೆ. ಆಫ್ರಿಕಾದಿಂದಲೇ ಹೆಚ್ಚು ಡ್ರಗ್‌್ಸ ಬರುತ್ತಿದೆ. ಡ್ರಗ್‌್ಸ ಮಾರುತ್ತಿರುವವರಿಗೆ ಬಾಡಿಗೆ ಮನೆ ಕೊಟ್ಟವರ ಮೇಲೆಯೂ ಕೇಸ್ ದಾಖಲೆ ಮಾಡುತ್ತೇವೆ. ಡ್ರಗ್‌್ಸ ವಿಚಾರದಲ್ಲಿ ಬಹಳ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದರು.
