Tuesday, January 27, 2026
Homeರಾಜ್ಯಪೌರಾಡಳಿತ ಸಚಿವರಿಗೆ ಮಾಹಿತಿ ನೀಡಿದ ಬೆದರಿಕೆಗೆ ಒಳಗಾಗಿದ್ದ ಪೌರಾಯುಕ್ತೆ ಅಮೃತಗೌಡ

ಪೌರಾಡಳಿತ ಸಚಿವರಿಗೆ ಮಾಹಿತಿ ನೀಡಿದ ಬೆದರಿಕೆಗೆ ಒಳಗಾಗಿದ್ದ ಪೌರಾಯುಕ್ತೆ ಅಮೃತಗೌಡ

Amrutha Gowda threatened for informing the Municipal Administration Minister

ಬೆಂಗಳೂರು, ಜ.27- ಕಾಂಗ್ರೆಸ್‌‍ ನಾಯಕ ರಾಜೀವ್‌ ಗೌಡ ಅವರಿಂದ ಬೆದರಿಕೆಗೆ ಒಳಗಾಗಿದ್ದ ಶಿಡ್ಲಘಟ್ಟ ಪೌರಾಯುಕ್ತೆ ಅಮೃತಗೌಡ ಅವರು ಇಂದು ಪೌರಾಡಳಿತ ಸಚಿವ ರಹೀಂಖಾನ್‌ ಅವರನ್ನು ಭೇಟಿ ಮಾಡಿ ಘಟನೆ ಕುರಿತು ಮಾಹಿತಿ ನೀಡಿದ್ದಾರೆ.

ವಿಕಾಸಸೌಧದಲ್ಲಿರುವ ಸಚಿವರ ಕಚೇರಿಗೆ ಅಮೃತಗೌಡ ಅವರು ಭೇಟಿ ಮಾಡಿದ್ದಾರೆ. ಅತ್ತ ರಾಜೀವ್‌ ಗೌಡರನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ಪೌರಾಯುಕ್ತೆ ಸಚಿವರೊಂದಿಗೆ 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.

ಕಾಂಗ್ರೆಸ್‌‍ ಮುಖಂಡ ರಾಜೀವ್‌ ಗೌಡ ಅಮೃತಾಗೌಡ ಅವರಿಗೆ ಅವಾಚ್ಯ ಶಬ್ದಗಳನ್ನು ಬಳಸಿ, ಧಮ್ಕಿ ಹಾಕಿದ್ದರು. ತದನಂತರವೂ ಬೆದರಿಕೆಯ ಕರೆಗಳು ಬರುತ್ತಿದ್ದವು ಎಂದು ಹೇಳಲಾಗಿದೆ. ಹೀಗಾಗಿ ಸಚಿವರನ್ನು ಭೇಟಿ ಮಾಡಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಮೃತ ಗೌಡ, ಪ್ರಕರಣ ನ್ಯಾಯಾಲಯದಲ್ಲಿದೆ. ತಪ್ಪು ಸರಿಯನ್ನು ನ್ಯಾಯಾಲಯ ನಿರ್ಧಾರ ಮಾಡಲಿದೆ ಎಂದಿದ್ದಾರೆ.ಸಚಿವರನ್ನು ಭೇಟಿ ಮಾಡಿದ್ದೇನೆ, ಅವರು ಧೈರ್ಯವಾಗಿರಿ ಎಂದು ಹೇಳಿದ್ದಾರೆ. ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ..

RELATED ARTICLES

Latest News