ಬೆಂಗಳೂರು,ಡಿ.16- ಕೌಟುಂಬಿಕ ಕಲಹದಿಂದ ದೂರವಾಗಿದ್ದ ಮಗಳಿಗಾಗಿ ತನ್ನ ಹೆಂಡತಿಯನ್ನೇ ಗಂಡ ಕಿಡ್ನ್ಯಾಪ್ ಮಾಡಿಸಿದ್ದಾರೆ. ನಟಿ ಚೈತ್ರಾ ಎಂಬುವವರು ಸಿನಿಮಾರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಪತಿ ಹರ್ಷವರ್ಧನ್ ಎಂಟರ್ಪ್ರೈಸ್‌ನ ಮಾಲೀಕ ಹಾಗು ಚಿತ್ರ ನಿರ್ಮಾಪಕನಾಗಿದ್ದಾರೆ. ಈ ಇಬ್ಬರು ಪರಸ್ಪರ ಪ್ರೆತಿಸಿ ಮದುವೆಯಾಗಿದ್ದು, ದಂಪತಿಗೆ ಒಂದು ಮುದ್ದಾದ ಹೆಣ್ಣು ಮಗುವಿದೆ. ಆದರೆ ಕೌಟುಂಬಿಕ ಕಲಹದಿಂದ ಇಬ್ಬರೂ ದೂರವಾಗಿದ್ದಾರೆ.
ಗಂಡನಿಂದ ದೂರವಾದ ಚೈತ್ರಾ, ಮೈಸೂರಿನಿಂದ ತನ್ನ ಮಗುವನ್ನು ಕರೆದುಕೊಂಡು ನಗರಕ್ಕೆ ಬಂದು ವಾಸವಾಗಿದ್ದರು. ಇದೀಗ ಮಗಳಿಗಾಗಿ ಹರ್ಷವರ್ದನ್ ತನ್ನ ಹೆಂಡತಿಯನ್ನೇ ಕಿಡ್ನ್ಯಾಪ್ ಮಾಡಿದ ಆರೋಪ ಎದುರಾಗಿದೆ. ಪತ್ನಿ ಚೈತ್ರಾಗೆ ಮೈಸೂರಿನಲ್ಲಿ ಶೂಟಿಂಗ್ ಇದೆ ಎಂದು ಸ್ನೇಹಿತನಿಂದ ಹೇಳಿಸಿ ಕರೆಸಿಕೊಂಡಿದ್ದಾರೆ. ತನ್ನ ಸ್ನೇಹಿತ ಕೌಶಿಕ್ ಮೂಲಕ ನಟಿ ಚೈತ್ರಾಗೆ ಸಿನಿಮಾ ಆರ್ ಅಂತ ಹೇಳಿ 20 ಸಾವಿರ ಅಡ್ವ್ಸ್‌ಾ ಕೂಡ ನೀಡಿದ್ದರು.
ನಂತರ ಪಿಕಪ್ ನೆಪದಲ್ಲಿ ಮೈಸೂರು ರಸ್ತೆ ಮೂಲಕ ನೈಸ್ ರೋಡಲ್ಲಿ ಪತ್ನಿ ಚೈತ್ರಾಳನ್ನು ಕಿಡ್ನ್ಯಾಪ್ ಮಾಡಿ ನಂತರ ಆಕೆಯ ತಾಯಿಗೆ ಕರೆ ಮಾಡಿ, ನಿನ್ನ ಮಗಳನ್ನ ಕಿಡ್ನ್ಯಾಪ್ ಮಾಡಿದ್ದೇನೆ. ನನ್ನ ಮಗಳನ್ನ ತಂದು ಒಪ್ಪಿಸಿದರೆ ನಿಮ ಮಗಳನ್ನು ಸೇಾಗಿ ಬಿಡ್ತೀನಿ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.ಸದ್ಯ ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ಚೈತ್ರಾಳ ಸಹೋದರಿ ದೂರು ನೀಡಿದ್ದಾರೆ.
