Tuesday, January 13, 2026
Homeರಾಜ್ಯಭೈರವೈಕ್ಯ ಡಾ. ಬಾಲಗಂಗಾಧರನಾಥ ಶ್ರೀಗಳ ಪುಣ್ಯಾರಾಧನೆ

ಭೈರವೈಕ್ಯ ಡಾ. ಬಾಲಗಂಗಾಧರನಾಥ ಶ್ರೀಗಳ ಪುಣ್ಯಾರಾಧನೆ

Bhairavaikya Dr. Balagangadharanath Sri's Punyaradhana

ಅರಸೀಕೆರೆ,ಜ.13- ಭೈರವೈಕ್ಯ ಡಾ ಬಾಲಗಂಗಾಧರನಾಥ ಶ್ರೀಗಳ 13ನೇ ವರ್ಷದ ಪುಣ್ಯಾರಾಧನಾ ಮಹೋತ್ಸವವನ್ನು ತಾಲೂಕು ಒಕ್ಕಲಿಗರ ಸಂಘ ಹಾಗೂ ಭೈರವ ಯುವಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸುವುದರೊಂದಿಗೆ ಗುರು ನಮನ ಸಲ್ಲಿಸಲಾಯಿತು.

ನಗರದ ಪಿಪಿ ವೃತ್ತದಲ್ಲಿ ಆಯೋಜಿಸಿದ್ದ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ತಾಲೂಕು ಒಕ್ಕಲಿಗರ ಸಮಾಜದ ಅಧ್ಯಕ್ಷ ಆರ್‌.ಅನಂತಕುಮಾರ್‌ ಸೇರಿದಂತೆ ನಾನಾ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಒಕ್ಕಲಿಗ ಸಮಾಜ ಮತ್ತು ಭೈರವ ಯುವಕ ಸಂಘದ ಮುಖಂಡರು ಪಾಲ್ಗೊಂಡು ನೆಚ್ಚಿನ ಗುರುಗಳಿಗೆ ಗುರು ಭಕ್ತಿ ಸಮರ್ಪಿಸಿದರು.

ಆರ್‌.ಅನಂತಕುಮಾರ್‌ ಮಾತನಾಡಿ, ಮಹಾನ್‌ ತಪಸ್ವಿಗಳಾಗಿದ್ದ ಬಾಲಗಂಗಾಧರನಾಥ ಶ್ರೀಗಳು ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಬಳಿಕ ಚುಂಚನಗಿರಿಯನ್ನು ಚಿನ್ನದ ಗಿರಿಯನ್ನಾಗಿಸಿದರು. ಆಧ್ಯಾತಿಕದ ಜೊತೆಗೆ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ, ಪರಿಸರ ಹೀಗೆ ಹಲವು ಕ್ಷೇತ್ರಗಳ ಮೂಲಕ ಸಮಾಜಕ್ಕೆ ನೀಡಿದ ಅವರ ಕೊಡುಗೆ ಅಪಾರವಾಗಿದೆ ಅಂತಹ ಮಹಾನ್‌ ತಪಸ್ವಿಯನ್ನು ಕಣ್ಣಾರೆ ಕಂಡ ನಾವೇ ಭಾಗ್ಯವಂತರು ಎಂದು ತಮ್ಮ ನುಡಿ ನಮನವನ್ನು ಸಲ್ಲಿಸಿದರು.

ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ ಮಾತನಾಡಿ, ಅಸಂಘಟಿತವಾಗಿದ್ದ ಒಕ್ಕಲಿಗ ಸಮಾಜವನ್ನು ಒಗ್ಗೂಡಿಸುವ ಜೊತೆಗೆ ಇತರ ಸಮಾಜಗಳ ಒಳಿತನ್ನು ಬಯಸುವ ವಿಶಾಲ ಮನೋಭಾವ ಬಾಲಗಂಗಾಧರನಾಥ ಶ್ರೀಗಳದ್ದಾಗಿತ್ತು. ಹಾಗಾಗಿ ಅವರನ್ನು ಜಾತಿ-ಮತ ಮೀರಿದ ಸಂತ ಎಂದು ಸರ್ವರಿಂದಲೂ ಕರಸಿಕೊಂಡ ಯುಗಪುರುಷರು ನಮ ಬಾಲಗಂಗಾಧರನಾಥ ಶ್ರೀಗಳು ಎಂದು ಸರಿಸಿದರು.

ಸಮಾರಂಭದಲ್ಲಿ ಒಕ್ಕಲಿಗ ಸಮಾಜದ ಮುಖಂಡ ಗುಂಡಣ್ಣ, , ನಿವೃತ್ತ ಪೌರಾಯುಕ್ತ್ತ ಪರಮೇಶ್‌, ಒಕ್ಕಲಿಗ ಸಮಾಜದ ಮುಖಂಡರಾದ ಧರ್ಮೇಶ್‌, ಹೇಮಂತ್‌ ಕುಮಾರ್‌, ಹೈಟೆಕ್‌ ಕುಮಾರ್‌, ಕರವೇ ನಗರ ಅಧ್ಯಕ್ಷ ಕಿರಣ್‌ ಕುಮಾರ್‌, ನಗರಸಭೆ ನಿಕಟ ಪೂರ್ವ ಸದಸ್ಯರಾದ ವೆಂಕಟಮುನಿ, ದರ್ಶನ್‌, ಭೈರವ ಯುವಕ ಸಂಘದ ಪದಾಧಿಕಾರಿಗಳಾದ ಪ್ರಶಾಂತ್‌, ಗಣೇಶ್‌, ರವಿ, ರಮೇಶ್‌, ಮಂಜುನಾಥ್‌, ನವೀನ್‌ ಕಟ್ಟೆಹಳ್ಳಿ ಯಶ್ವಂತ್‌ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News