ಹುಬ್ಬಳ್ಳಿ, ಜ.23: ಕೇಂದ್ರ ಸರ್ಕಾರ ಒಂದು ಬಡವರ ,ಜನಪರ ಯೋಜನೆಯ ಹೆಸರನ್ನ ಬದಲಾವಣೆ ಮಾಡುವ ಮೂಲಕ ಅನೇಕ ಗೊಂದಲಕ್ಕೆ ಅವಕಾಶ ಮಾಡಿಕೊಟ್ಟಿದ್ದು ಮನ್ರೇಗಾ ಯೋಜನೆಯ ಹೆಸರನ್ನ ಬದಲಾವಣೆ ಮೂಲಕರಾಮನಿಗಿಂತ ಗಾಂಧೀ ದೊಡ್ಡವರಾ ಎಂಬ ಚರ್ಚೆಗೆ ಅಂತಾ ಚರ್ಚೆಗೆ ಬಿಜೆಪಿ ಅವಕಾಶ ಹುಟ್ಟು ಹಾಕಿದೆ ಎಂದು ಕೆಪಿಸಿಸಿ ಸಮಿತಿ ಪ್ರಚಾರ ಸಮಿತಿ ರಾಜ್ಯ ಮುಖ್ಯ ಸಂಯೋಜಕ ಸುಧೀರ್ ಕುಮಾರ್ ಮುರೋಳ್ಳಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,ಕೇಂದ್ರ ಸರ್ಕಾರ ಮನ್ರೇಗಾ ಜೀ ರಾಮ ಜೀ ಎಂದು ಮರುನಾಮಕರಣ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಗ್ರಾಮ ಸ್ವರಾಜ್ಯದ ಕನಸು ಕಂಡಿವರು ಮಹಾತ ಗಾಂಧೀಯವರು ಅವರು ಡಾ.ಬಾಬಾಸಾಹೇಬ ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ಸ್ವೀಕಾರ ಮಾಡಲಾಯಿತು.
ನಂತರ ಗ್ರಾಮ ಸ್ವರಾಜ್ಯ ಗ್ರಾಮ ಆಡಳಿತ , ಅಧಿಕಾರ ವಿಕೇಂದ್ರೆಕರಣ ಕುರಿತು ಬಹಳ ದೊಡ್ಡ ಆಂದೋಲನ ಹಾಗೂ ಚರ್ಚೆ ನಡೆಸಲಾಯಿತು . ನಾವು ಭಾರತದಲ್ಲಿ ಮೂರು ವಿಧದ ಆಡಳಿತ ವ್ಯವಸ್ಥೆ ನೋಡ್ತಾ ಇದ್ದೇವೆ ಈ ಸಂಸ್ಥೆಗಳಿಗೆ ಕಾಂಗ್ರೆಸ್ ಸರಕಾರ ಮಾನ್ಯತೆ ನೀಡಿತು ನಂತರ ವಿದರ್ಭದಲ್ಲಿ ರೈತ ಆತಹತ್ಯೆ ನಡೆದಾಗ ಬಹಳ ಚರ್ಚೆಗೆ ಗ್ರಾಸವಾಯಿತು ಇದು ಸಾಕಷ್ಟು ಬದಲಾವಣೆಗೆ ಸಹ ಅವಕಾಶ ಮಾಡಿಕೊಟ್ಟಿತು.
ನಂತರ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ರೈತರ ನೆರವಿಗೆ ಬಂದು ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡಲಾಯಿತು. ಈ ಯೋಜನೆ ಒಂದು ಮಹತ್ವದ, ಕ್ರಾಂತಿಕಾರ ಬದಲಾವಣೆಗೆ ಕಾರಣವಾಗುವ ಮೂಲಕ ವಿಶ್ವದ ಯೋಜನೆ ಮಹಾತ ಗಾಂಧೀೕ ಜಿ ಉದ್ಯೋಗ ಖಾತ್ರಿ ಯೋಜನೆ ಜಾರಿ ತರಲಾಯಿತು. ಕಾಂಗ್ರೆಸ್ ಸರಕಾರ ಮಹಾತ ಗಾಂಧೀಯವರ ಹೆಸರಿನಲ್ಲಿ ಜಾರಿ ಮಾಡಿತು ಆವಾಗ ದೇಶದಲ್ಲಿ ಅಂದು ಯಾರಿಂದಲೂ ವಿರೋಧ ಬಂದಿರಲಿಲ್ಲಅಂದು ಸ್ವತ ಈಗಿನ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಗಳು ಸಹ ಆಗಿದ್ದರುಅಂದು ನರೇಂದ್ರ ಮೋದಿ ಆಗಲಿ ಯಾವುದೇ ಬಿಜೆಪಿ ನಾಯಕರು ವಿರೋಧ ಮಾಡಲಿಲ್ಲ ಏಕೆಂದರೆ ಇದೊಂದು ಅತ್ಯಂತ ಜನೋಪಯೋಗಿ ಯೋಜನೆ ಆಗಿತ್ತುಮನ್ರೇಗಾ ಯೋಜನೆ ಆಡಳಿತ ಜನರ ಕೈಯಲ್ಲಿ ಯಾರು ಬಡವರು,ಕೂಲಿ ಕಾರ್ಮಿಕರ ಕೈಯಲ್ಲಿತ್ತು ಇದರಿಂದಾಗಿ ಸ್ಥಳೀಯ ಆಡಳಿತಕ್ಕೆ ಹೋಗಿ ಹತ್ತು ಜನರು ಜಾಬ್ ಕಾರ್ಡ್ ಮೂಲಕ ಕೆಲಸ ಕೊಡಿ ಅಂದಾಗ ಕೆಲಸ ಕೊಡಲಾಯಿತು.
ಸಾಕಷ್ಟು ಜನರು ಈ ಯೋಜನೆಯನ್ನ ಮನಸಾರೆ ಒಪ್ಪಿಕೊಂಡರು. ಕಾಂಗ್ರೆಸ್ ಸರಕಾರ ನಿರಂತರವಾಗಿ ಎರಡು ಸಲ ಅಧಿಕಾರ ಮಾಡಿತು ಮನ್ರೇಗಾ ಯೋಜನೆಯಿಂದ ಗ್ರಾಮದಲ್ಲಿ ಅಭಿವೃದ್ಧಿ, ಬಡವರ ಬದುಕು ಹಸನಾಗಲು ಸಹಕಾರಿ ಆಯಿತು ಉದ್ಯೋಗ ಇಲ್ಲದ ಕೈಗಳಿಗೆ ಉದ್ಯೋಗ ಕೊಡಲಾಯಿತು. ಹಸಿದ ಹೊಟ್ಟಿಗೆ ಅನ್ನ ನೀಡಲಾಯಿತು ಆದರೆ ಈಗ ಕೇಂದ್ರ ಸರಕಾರ ಮನ್ರೇಗಾ ಯೋಜನೆ ಹೆಸರು ಬದಲಾವಣೆ ಮಾಡಿ ರಾಮನಿಗೆ ಅವಮಾನ ಮಾಡಿತು ರಾಮ ಎಂದರೆ ಒಂದು ಆಗಾಧ ವ್ಯಕ್ತಿತ್ವ ರಾಮ ಎಂಬ ವ್ಯಕ್ತಿತ್ವಕ್ಕೆ ಅವಮಾನ ಮಾಡಿತು.
ರಾಮ ಅಂತಾ ಹೆಸರು ಬದಲಾವಣೆ ಮಾಡಿ ವಿಜೀ ರಾಮಜೀ ಅಂತಾ ಹೆಸರು ಬದಲಾವಣೆ ಮಾಡಲಾಯಿತು. ಈಗ ವೀಜಿ ರಾಮಜೀ ಅಂತಾ ವಿಸತದಲ್ಲಿ ಯಾವುದೇ ಅರ್ಥ ಇಲ್ಲ ನಿಜವಾದ ರಾಮನಿಗೆ ಯಾವುದೇ ಮಹತ್ವ ಇಲ್ಲ ಇನ್ನು ರಾಮನಿಗಿಂತ ಗಾಂಧೀ ದೊಡ್ಡವರು ಅಂತಾ ಚರ್ಚೆ ಹುಟ್ಟು ಹಾಕಲಿಕ್ಕೆ ಬಿಜೆಪಿ ಅವಕಾಶ ಮಾಡತಾ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಮನ್ರೇಗಾ ಯೋಜನೆಯಲ್ಲಿ ಮಹಾತ ಗಾಂಧೀಯವರ ಹೆಸರು ತೆಗೆದು ಹಾಕಿದ್ದು ಹಿಂಪಡೆದಿದ್ದು ಎಷ್ಟು ಗಾಂಧೀ ವಿರೋಧಿಗಳು ಅಂತಾ ಗೊತ್ತಾಗುತ್ತದೆಯಾವ ಊರಿನಲ್ಲಿ ಅತ್ಯಂತ ಕಡಿಮೆ ಬೆಳೆ ಬೆಳೆಯಲಾಗುತ್ತದೆ ಅಲ್ಲಿ ಈಗಿನ ಯೋಜನೆ ಜಾರಿ ಮಾಡಲ್ಲ ಅಂತಾ ಕಾಯ್ದೆ ಜಾರಿ ಮಾಡಲಾಗಿದೆ ಗ್ರಾಮದಲ್ಲಿ ಇರಬಹುದಾದ ಪಾಳೆಗಾರಿ ಕೆಯನ್ನ ದೂಡಲು ಮತ್ತೇ ಇದು ಮಾಡಲಾಗುತ್ತದೆ.
ಜನರ ಪರಮಾಧಿಕಾರದಿಂದ ಕೇಂದ್ರ ಸರ್ಕಾರದ ಪರಮಾಧಿಕಾರಕ್ಕೆ ನೀಡಲಾಯಿತು ಇನ್ನು
ಕೆಲಸ ಕೊಡಬೇಕಿತ್ತು ಇದರ ಜೊತೆಗೆ ಕೂಲಿ ಕೊಡಬೇಕಿತ್ತು. ಈಗ ಕೆಲಸ ಕೇಂದ್ರ ಸರ್ಕಾರ ಕೊಡಬಹುದು ಇಲ್ಲ ಕೊಡದೇ ಇರಬಹುದು ಇದೊಂದು ಸರ್ವಾಧಿಕಾರಿ ಧೋರಣೆಯ ಯೋಜನೆ ಆಗಿ ಪರಿವರ್ತನೆ ಮಾಡಲಾಯಿತು ಎಂದ ಅವರು ಭಾರತದ ಗ್ರಾಮಗಳ ವ್ಯವಸ್ಥೆ ಅರ್ಥ ಮಾಡಿಕೊಳ್ಳದೇ ಕಾಯ್ದೆ ಜಾರಿ ಮಾಡಲಾಗಿದ್ದು ಅತಿಯಾದ ತಾಂತ್ರಿಕತೆಗೆ ಮಹತ್ವ ಕೊಡಲಾಗಿದೆ ಬಡವರ ಹೊಟ್ಟೆಗೆ ಹೊಡೆಯು ವ ಕೆಲಸ ಹೊಸ ಕಾಯ್ದೆ ಮಾಡ್ತಾ ಇದೆ. ಕೇಂದ್ರ ಸರ್ಕಾರ ಮೊದಲು 100 ಕ್ಕೆ 100 ಇದ್ದ ಹೊಣೆಗಾರಿಕೆಯನ್ನು ಬದಲಾವಣೆ ಮಾಡಿಈಗ ಶೇಕಡಾ 60 ಕೇಂದ್ರ ಸರ್ಕಾರ ಇನ್ನು ಶೇಕಡಾ 40 ರಾಜ್ಯ ಸರ್ಕಾರದ ಹೊಣೆಗಾರಿಕೆಗೆ ಹಂಚಲಾಗಿದೆ ಇದೊಂದು ಅತ್ಯಂತ ವ್ಯವಸ್ಥಿತವಾದ ಪಿತೂರಿ ಆಗಿದ್ದುಕೇಂದ್ರ ಹಾಗೂ ರಾಜ್ಯದ ಹೊಣೆಗಾರಿಕೆಯಲ್ಲಿಯೇ ಯೋಜನೆ ಮುಗಿದು ಹೋಗಬೇಕು ಹಳ್ಳಿಗಳ ಹಾಗೂ ಗ್ರಾಮೀಣ ಭಾರತ ನಾಶ ಮಾಡಬೇಕು ಎನ್ನುವ ಹುನ್ನಾರ ಆಗಿದ್ದುಮೊದಲು ಮಹಾತ ಗಾಂಧೀ ಉದ್ಯೋಗ ಖಾತ್ರಿ ಯೋಜನೆ ನ್ಯಾಯಪರ, ಜನರ ಪರ ಹಾಗೂ ಬಡವರ ಪರ ಇತ್ತು ಆದರೆ ಇಂದು ಕೇಂದ್ರ ಸರ್ಕಾರದ ಅಧೀನದಲ್ಲಿ ಬಂದು ಮೂ ಆಶಯಕ್ಕೆ ಧಕ್ಕೆ ತರಲಾಗಿದೆ ಎಂದರು.
ರಾಜ್ಯ ಸಭಾ ಮಾಜಿ ಸದಸ್ಯ ಎಲ್ ಹನುಮಂತಯ್ಯ, ಧಾರವಾಡ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಜುಟ್ಟಲ್, ಮುಖಂಡರಾದ ತನ್ವೀರ್ ಕೊಪ್ಪದ ಮುಂತಾದವರು ಇದ್ದರು.
