Saturday, December 20, 2025
Homeರಾಜ್ಯಬಹುದಿನಗಳ ಬೇಡಿಕೆಯ ನದಿಗಳ ಜೋಡಣೆಗೆ ಪ್ರಕ್ರಿಯೆ ಆರಂಭಿಸಿದ ಕೇಂದ್ರ, ವಿವಿಧ ರಾಜ್ಯಗಳ ಸಚಿವರಿಗೆ ಆಹ್ವಾನ

ಬಹುದಿನಗಳ ಬೇಡಿಕೆಯ ನದಿಗಳ ಜೋಡಣೆಗೆ ಪ್ರಕ್ರಿಯೆ ಆರಂಭಿಸಿದ ಕೇಂದ್ರ, ವಿವಿಧ ರಾಜ್ಯಗಳ ಸಚಿವರಿಗೆ ಆಹ್ವಾನ

Centre starts process for long-awaited river linking, invites ministers of various states

ಬೆಂಗಳೂರು, ಡಿ.20- ಕೇಂದ್ರ ಸರ್ಕಾರ ಬಹುದಿನಗಳ ಬೇಡಿಕೆಯಂತೆ ರಾಷ್ಟ್ರಮಟ್ಟದಲ್ಲಿ ನದಿಗಳ ಜೋಡಣೆಗೆ ಪ್ರಕ್ರಿಯೆ ಆರಂಭಿಸಿದ್ದು, ಅದರ ಕುರಿತಂತೆ ಚರ್ಚಿಸಲು ವಿವಿಧ ರಾಜ್ಯಗಳ ಜಲಸಂಪನ್ಮೂಲ ಸಚಿವರಿಗೆ ಆಹ್ವಾನ ನೀಡಿದೆ.ಅದರಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿಯೂ ಆಗಿರುವ ಡಿ.ಕೆ.ಶಿವಕುಮಾರ್‌ ಇದೇ 23 ರಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಸಭೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇದೇ ತಿಂಗಳ 23ರಂದು ದೆಹಲಿಗೆ ಭೇಟಿ ನೀಡುವುದಾಗಿ ತಿಳಿಸಿದರು.

ದೆಹಲಿಯ ಭೇಟಿಯ ವೇಳೆ ಕೇಂದ್ರ ಜಲಶಕ್ತಿ ಸಚಿವರನ್ನು ಮತ್ತು ಅರಣ್ಯ ಸಚಿವರನ್ನು ಭೇಟಿ ಮಾಡಿ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟು, ಮಹಾದಾಯಿ ನದಿಗೆ ಅಡ್ಡಲಾಗಿ ಕಳಸಾ-ಬಂಡೂರಿ ಅಣೆಕಟ್ಟು ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಪರಿಸರ ಇಲಾಖೆಯ ಅನುಮತಿ ಹಾಗೂ ಇತರ ನೆರವುಗಳ ಬಗ್ಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ ರಾಷ್ಟ್ರಮಟ್ಟದಲ್ಲಿ ನದಿ ಜೋಡಣೆಗೆ ಸಂಬಂಧಪಟ್ಟಂತೆ ಕೇಂದ್ರ ಸಚಿವರು ನೀರು ಅಭಿವೃದ್ಧಿ ಸಂಸ್ಥೆಯ ಮಹತ್ವದ ಸಭೆ ಕರೆದಿದ್ದಾರೆ. ತಾವು ಅದರಲ್ಲಿಯೂ ಭಾಗವಹಿಸುವುದಾಗಿ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿ ಕೆಲ ವಿಚಾರಗಳನ್ನು ಚರ್ಚಿಸುವುದಾಗಿ ಹೇಳಿದ್ದಾರೆ. ಸಂಸದರ ಜೊತೆ ಕೇಂದ್ರ ಸಚಿವರನ್ನು ಭೇಟಿ ಮಾಡಬೇಕಿತ್ತು. ಆದರೆ ಸದ್ಯಕ್ಕೆ ಸಮಯ ಇಲ್ಲ. ಹಾಗಾಗಿ ತಾವೊಬ್ಬರೇ ಕೇಂದ್ರ ಸಚಿವರನ್ನು ಭೇಟಿ ಮಾಡುತ್ತಿರುವುದಾಗಿ ಹೇಳಿದರು.

ಅಂದು ದೆಹಲಿ ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ನೀಡುವುದಾಗಿ ತಿಳಿಸಿದ್ದಾರೆ.
ನ್ಯಾಷನಲ್‌ ಹೆರಾಲ್‌್ಡ ಸಂಸ್ಥೆಗೆ ಸಂಬಂಧಪಟ್ಟಂತೆ ಪ್ರಕರಣ ದಾಖಲಿಸಿರುವ ದೆಹಲಿ ಪೊಲೀಸರು ಖುದ್ದು ಹಾಜರಾಗಿ ಹೇಳಿಕೆ ನೀಡುವಂತೆ ಡಿ.ಕೆ.ಶಿವಕುಮಾರ್‌ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ ಅವರಿಗೆ ನೋಟೀಸ್‌‍ ನೀಡಿದ್ದರು. ಕಳೆದ ಸೋಮವಾರ ದೆಹಲಿಗೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್‌ ಮತಗಳ್ಳತನದ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿ, ದೆಹಲಿ ಪೊಲೀಸರನ್ನು ಭೇಟಿಯಾಗದೆ ವಾಪಸ್‌‍ ಬಂದಿದ್ದರು. ಈಗ ಮಂಗಳವಾರ ದೆಹಲಿಗೆ ತೆರಳಿ ಅಲ್ಲಿನ ಪೊಲೀಸರ ಮುಂದೆ ಹೇಳಿಕೆ ನೀಡುವುದಾಗಿ ತಿಳಿಸಿದ್ದಾರೆ.

ನ್ಯಾಷನಲ್‌ ಹೆರಾಲ್‌್ಡ ಪ್ರಕರಣ ಕುರಿತಂತೆ ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಪ್ರಕರಣವನ್ನು ವಿಚಾರಣಾ ನ್ಯಾಯಾಲಯ ರದ್ದುಗೊಳಿಸಿದೆ. ಆದರೂ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ನಾಗಾ ಸಾಧುಗಳ ಆಶೀರ್ವಾದ:
ಇಂದು ನಮ ಮನೆಗೆ ನಾಗಾಸಾಧುಗಳು ಬಂದು ಆಶೀರ್ವಾದ ಮಾಡಿದ್ದಾರೆ. ಹುಡುಕಿಕೊಂಡು ಬಂದು ಆಶೀರ್ವಾದ ಮಾಡುವವರನ್ನು ಬೇಡ ಎನ್ನಲು ಸಾಧ್ಯವೇ? ಸಾಧು-ಸಂತರು, ಹಿರಿಯರು ಸೇರಿದಂತೆ ಎಲ್ಲರೂ ನಮಗೆ ಬೇಕು. ಸರ್ಕಾರದಿಂದ ಮುಜರಾಯಿ ಇಲಾಖೆ ನಡೆಸುತ್ತಿದ್ದೇವೆ. ಚರ್ಚ್‌, ಮಸೀದಿ ಎಲ್ಲಾ ಧಾರ್ಮಿಕ ಸಂಸ್ಥೆಗಳಿಗೂ ನೆರವು ನೀಡುತ್ತೇವೆ. ಅವರವರ ಧರ್ಮಗಳನ್ನು ಅವರು ಕಾಪಾಡುತ್ತಾರೆ. ಜೈನಮುನಿಗಳ ವೇಷಭೂಷಣ ಒಂದು ರೀತಿ ಇರುತ್ತದೆ. ನಾಗಾಸಾಧುಗಳ ವೇಷಭೂಷಣ ಮತ್ತೊಂದು ರೀತಿ. ಕಾವಿ, ಕಾದಿ ವೇಷ ಭೂಷಣಗಳು ಬೇರೆ ಬೇರೆ ಆಗಿರುತ್ತವೆ ಎಂದರು.

ಕೇಂದ್ರಕ್ಕೆ ಸವಾಲು:
ಕೇಂದ್ರ ಸರ್ಕಾರ ಮಹಾತ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಾವಣೆ ಮಾಡುತ್ತಿದೆ. ಸೋನಿಯಾ ಗಾಂಧಿ, ಮನಮೋಹನ್‌ ಸಿಂಗ್‌ ಅವರ ಒತ್ತಾಸೆಯ ಮೇರೆಗೆ ರಾಷ್ಟ್ರದ ಅತ್ಯುನ್ನತ ನಾಯಕರಾದ ಮಹಾತಗಾಂಧಿ ಹೆಸರಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಲಾಯಿತು. ಕೇಂದ್ರ ಸರ್ಕಾರ ಈಗ ಆ ಹೆಸರನ್ನು ಬದಲಾವಣೆ ಮಾಡುತ್ತಿರುವುದು ಖಂಡನಿಯ. ಯೋಜನೆಯನ್ನು ಮುಗಿಸಲು ಕೇಂದ್ರ ಸರ್ಕಾರವೇ ಷಡ್ಯಂತ್ರ ನಡೆಸಿದೆ. ಇದರ ವಿರುದ್ಧ ರಾಷ್ಟ್ರಾದ್ಯಂತ ಆಂದೋಲನ ನಡೆಯಲಿದೆ. ಕೇಂದ್ರ ಸರ್ಕಾರಕ್ಕೆ ಸಾಮರ್ಥ್ಯವಿದ್ದರೆ 500 ರೂಪಾಯಿ ನೋಟಿನಲ್ಲಿರುವ ಗಾಂಧಿ ಫೋಟೋವನ್ನು ಬದಲಾವಣೆ ಮಾಡಲಿ ಎಂದು ಸವಾಲು ಹಾಕಿದರು.

ಪತ್ರಕರ್ತ ದೊಡ್ಡ ಬೊಮಯ್ಯ ಅವರು ಬೆಳಗಾವಿಯ ವಿಧಾನಮಂಡಲದ ಅಧಿವೇಶನದ ವರದಿ ಮುಗಿಸಿ ವಾಪಸ್‌‍ ಮರಳುವಾಗ ಮೃತಪಟ್ಟಿರುವುದು ಆಘಾತ ತಂದಿದೆ. ದೇವರು ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದರು.

RELATED ARTICLES

Latest News